ಚಿತ್ರದುರ್ಗ | ಯಡಿಯೂರಪ್ಪ ಕಾರಣದಿಂದ ನನ್ನ ಮಗನಿಗೆ ಟಿಕೆಟ್ ತಪ್ಪಿದೆ: ಶಾಸಕ ಚಂದ್ರಪ್ಪ

Date:

Advertisements

ರಘು ಚಂದನ್‌ಗೆ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನಲೆ ಶಾಸಕ ಎಂ ಚಂದ್ರಪ್ಪ ಅಸಮಧಾನ ವ್ಯಕ್ತಪಡಿಸಿದ್ದು, ಯಡಿಯೂರಪ್ಪ ಅವರಿಂದಲೇ ನನ್ನ ಮಗನಿಗೆ ಟಿಕೆಟ್ ಕೈತಪ್ಪಿದೆ ಎಂದು ಆರೋಪಿಸಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗುರುವಾರ ಮಧ್ಯಾಹ್ನದವರೆಗೂ ನನ್ನ ಮಗನ ಹೆಸರು ಫೈನಲ್‌ ಆಗಿತ್ತು. ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಿಲ್ಲ, ಅಂದ್ರೆ ಕ್ಯಾಂಪೇನ್ ಮಾಡಲ್ಲವೆಂದು ಯಡಿಯೂರಪ್ಪ ಹೇಳಿದ್ದಾರೆ. ಹೀಗಾಗಿಯೇ, ನನ್ನ ಮಗನಿಗೆ ಟಿಕೆಟ್ ತಪ್ಪಿಸಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನನ್ನ ಮಗನಿಗೆ 2019ರಲ್ಲಿ ಟಿಕೆಟ್ ಕೇಳಿದ್ದೆ, ಆಗ ಮುಂದಿನ ಸಾರಿ ಎಂದು ಹೇಳಿದ್ದರು. ನಾರಾಯಣ ಸ್ವಾಮಿ ಪರ ಪ್ರಚಾರ ಮಾಡಿ, 40 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೆವು. 2024ರ ಎಲೆಕ್ಷನ್‌ನಲ್ಲಿ ಟಿಕೆಟ್ ಕೊಡ್ತೇವೆ ಎಂದು ಸಂತೋಷ್ ಅವರು ಕೂಡಾ ಹೇಳಿದ್ದರು. ಇದೇ ಗೋವಿಂದ ಕಾರಜೋಳ ನನ್ನ ಮಗನ ಓಡಾಡಲು ಹೇಳಿದ್ದರು. ಪಕ್ಷದ ಸಭೆಯಲ್ಲಿ ಕೂಡಾ ಹೊರಗಿನ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾಗಿ ಧ್ವನಿ ಎತ್ತಿದ್ದೆ. ಸರ್ವೇ ಬಂದವರಿಗೆ ನಮ್ಮ ಜಿಲ್ಲೆಯವರಿಗೆ ಟಿಕೆಟ್ ನೀಡಿ ಎಂದಿದ್ದೆ. ಮೋದಿ, ಅಮಿತ್ ಷಾ ಸರ್ವೇಯಲ್ಲಿ ರಘುಚಂದನ್ ಹೆಸರಿತ್ತು. ಸಿಇಸಿ ಕಮಿಟಿಯಲ್ಲಿ ನನ್ನ ಮಗನ ಹೆಸರು ಫೈನಲ್ ಆಗಿತ್ತು. ನಿನ್ನೆ ಸಂಜೆ ಯಡಿಯೂರಪ್ಪ ಅವರಿಂದ ನನ್ನ ಮಗನಿಗೆ ಟಿಕೆಟ್ ತಪ್ಪಿದೆ” ಎಂದು ಯಡಿಯೂರಪ್ಪರವರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

Advertisements

ಯಡಿಯೂರಪ್ಪ ಕೆ.ಜೆ ಪಿ.ಕಟ್ಟಿದ್ದಾಗ ಅವರ ಸಮಾಜದವರು ಬರ್ಲಿಲ್ಲ. ನಾನು 6 ತಿಂಗಳ ಮುಂಚೆಯೇ ನಾನು ರಾಜೀನಾಮೆ ಕೊಟ್ಟಿದ್ದೆ. ನಾನು ಇವರನ್ನ ಎಂದೂ ಕೈಬಿಟ್ಟು ಹೋಗಿರಲಿಲ್ಲ. ನಮಗೆ ಯಡಿಯೂರಪ್ಪ ಈ ಬಹುಮಾನ ಕೊಟ್ಟಿದ್ದಾರೆ ಎಂದು ಚಂದ್ರಪ್ಪ ನೊಂದು ನುಡಿದರು.

ಕಾರಜೋಳ ಯಡಿಯೂರಪ್ಪ ನಡುವೆ ಅದೇನು ಸಂಮ್ತಿಂಗ್ ಇದೆಯೋ ಗೊತ್ತಿಲ್ಲ. 550 ಕಿಲೋಮೀಟರ್ ದೂರ ವ್ಯಕ್ತಿಗೆ ಟಿಕೆಟ್ ಕೊಡುವಂತದ್ದು ಏನಿತ್ತು. ನಮಗೆ ತುಂಬಾನೇ ಅನ್ಯಾಯ ಮಾಡಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದ ನಂತರ ಮುಂದಿನ ನಿರ್ಧಾರ. ವಿಜಯೇಂದ್ರ ಯುವಕ ಎಂದು ಅಧ್ಯಕ್ಷ ಮಾಡಿದ್ದಾರೆ. ನನ್ನ ಮಗನಿಗೆ ಟಿಕೆಟ್ ಕೊಡ್ಲಿಲ್ಲ. ನಮ್ಮ ಸಮಾಜದ ಎಲ್ಲರೂ ಕೈಬಿಟ್ಟು ಹೋಗಿದ್ದಾರೆ, ನಾನು ಮಾತ್ರ ಆಧಾರವಾಗಿದ್ದೆ. ಈಗ ನಮ್ಮ ಸಮಾಜ ಮುಂದಿನ ಹೆಜ್ಜೆ ಇಡುತ್ತದೆ. ಮೋದಿ ದೇಶ & ರಾಜ್ಯಕ್ಕೆ ಅಗತ್ಯ ಎಂದು ನಾನು ಭಾವಿಸಿದ್ದೇನೆ. ಬೊಮ್ಮಾಯಿ ಸಂಪುಟದಲ್ಲಿ ನನಗೆ ಅನ್ಯಾಯ ಮಾಡಿದ್ರು. ಹಗಲು ರಾತ್ರಿ ಯಡಿಯೂರಪ್ಪ ಮನೆಗೆ ನಾನು ದುಡಿದೆ, ನಾನು ಏನು ಅನ್ಯಾಯ ಮಾಡಿದ್ದೆ. ನಿನ್ನೆ ಮಧ್ಯಾಹ್ನ ಘೋಷಣೆ ಮಾಡ್ತಾ ಇದ್ರು, ಇದನ್ನ ತಪ್ಪಿಸಿದ್ದಾರೆ ಎಂದು ಆರೋಪ ಮಾಡಿದರು.

ನಮ್ಮ ಕಾರ್ಯಕರ್ತರ ಸಭೆ ಬಳಿಕ ಮುಂದಿನ ತೀರ್ಮಾನ. ನೂರಾರು ಬಾರಿ ಯಡಿಯೂರಪ್ಪ ಜೊತೆ ಚರ್ಚೆ ಮಾಡಿದ್ದೆ, ಅವರು ಕಾಳಜಿ ತೋರಿಲ್ಲ. ಯಡಿಯೂರಪ್ಪ ಕಿಚನ್ ಕ್ಯಾಬಿನೆಟ್ ನಲ್ಲಿ ಇದಿದ್ದಕ್ಕೆ ಈ ಬಹುಮಾನ. ಚುನಾವಣೆಗೆ ನಾನು ನಿಂತಾಗ ನಯಾ ಪೈಸೆ ಪಾರ್ಟಿ ಫಂಡ್ ಕೊಡ್ಲಿಲ್ಲ ಎಂದರು.

ಚಿತ್ರದುರ್ಗದಲ್ಲಿ ಮಹಾನ್ ನಾಯಕ ಒಬ್ಬ ಇದ್ದಾನೆ, ಅವನದ್ದು ಜಾಸ್ತಿ ಆಗಿದೆ,  ಈಗಾಗಲೇ ಶಾಸ್ತಿ ಆಗಿದೆ, ಮುಂದಿಯೂ ಶಾಸ್ತಿ ಆಗುತ್ತದೆ. ನಮ್ಮ ಪಕ್ಷದಲ್ಲಿ ಸೋತವರನ್ನ ಕರೆತಂದು ಎಂಪಿ ಮಾಡಿದ್ವಿ ಅಷ್ಟು ನಿಯತ್ತಿಂದ ಮಾಡಿದ್ದೇವೆ, ನಾನು ನಂಬಿಸಿ ಮೋಸ ಮಾಡಲ್ಲ ಆ ಮಹಾನ್ ನಾಯಕನನ್ನ ಅರ್ಥ ಮಾಡಿಕೊಂಡು ಹೇಳುತ್ತೇನೆ. ಮದಕರಿ ಕೋಟೆಗೆ ನುಗ್ಗಲು ಸಂಧಿ ತೋರಿಸಲು ಒಬ್ಬ ಇರ್ಬೇಕು, ಅಂಥವರು ಇದ್ದಾರೆ ಒಳಗೆ ಬಂದಾಗ ಏನಾಯ್ತು, ಮುಂದೆ ಮಹಾನ್ ನಾಯಕನಿಗೆ ಅದೇ ಆಗುತ್ತೆ ಪರೋಕ್ಷವಾಗಿ ಮಾಜಿ ಶಾಸಕ ತಿಪ್ಪಾರೆಡ್ಡಿ ವಿರುದ್ದ ಚಂದ್ರಪ್ಪ ಗುಡುಗಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

Download Eedina App Android / iOS

X