ವಿಜಯಪುರ | ಸ್ವಚ್ಚತೆ ಕಾಣದೆ ತುಂಬಿ ಹರಿಯುತ್ತಿವೆ ಚರಂಡಿ; ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

Date:

Advertisements

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಬಗೇರಿ, ದೇವೂರ, ಬನೋಸಿ ಹಾದು ಹೋಗುವ ಮುಖ್ಯ ರಸ್ತೆಗೆ ಇರುವ ಚರಂಡಿ ಮತ್ತು ಗ್ರಾಮದ ಎಲ್ಲಾ ಚರಂಡಿಗಳು ಕಸ, ಪ್ಲಾಸ್ಟಿಕ್, ಕಟ್ಟಿಗೆಯಂತ ತ್ಯಾಜ್ಯಗಳಿಂದ ತುಂಬಿದ್ದು ಸ್ವಚ್ಚಗೊಳಿಸದ ಗ್ರಾಮ ಪಂಚಾಯತಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಚರಂಡಿಗಳು ತುಂಬಿ ಗಬ್ಬು ನಾರುತ್ತಿದ್ದು, ಇದರಿಂದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ದಂತಹ ಸಾಂಕ್ರಾಮಿಕ ರೋಗಗಳು ಹರಡುವ ಬೀತಿ ಎದುರಿಸುತ್ತಿದ್ದಾರೆ ಗ್ರಾಮಸ್ಥರು.

ಚರಂಡಿ ಸ್ವಚ್ಛತೆಗೆ ಕುರಿತು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಕಳೆದ ಎರಡು ತಿಂಗಳಿಂದ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ, ಉಡಾಫೆ ಉತ್ತರ ಕೊಡುತ್ತಿದ್ದಾರೆ ಎಂದು ಗ್ರಾಮಸ್ಥರ ಅವಲತ್ತು ಕೊಳ್ಳುತ್ತಿದ್ದಾರೆ.

Advertisements

ಸ್ವತಃ ಗ್ರಾಮ ಪಂಚಾಯತಿಯ ಅಧ್ಯಕ್ಷರ ಊರಾದ ನೇಮಕೇರಿ ಗ್ರಾಮವು ಸಹ ಇಂಥ ಸಮಸ್ಯೆಗೆ ಒಳಪಟ್ಟಿದೆ ಇದು ದುರಂತವೇ ಸರಿ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಗ್ರಾಮದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಸಭೆ ಕೂಡಾ ಮಾಡುವುದಿಲ್ಲ.         ಸ್ಥಳೀಯರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ, ಅಧಿಕಾರಿಗಳು ಒಂದೆರಡು ದಿನದಲ್ಲಿ ಚರಂಡಿ ಸ್ವಚ್ಛ ಮಾಡುತ್ತೇವೆ ಎಂದಿದ್ದರು. ಆದರೆ, ಎರಡು ತಿಂಗಳು ಕಳೆದರೂ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಚರಂಡಿಯಲ್ಲಿ ನೀರು ನಿಂತು ಗಬ್ಬು ನಾರುತ್ತಿದೆ. ಯಾವಾಗ ಸ್ವಚ್ಛ ಮಾಡೋದು ಅಂತ ಅಧಿಕಾರಿಗಳಿಗೆ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದಾರೆ.

ಸದ್ಯ ಗ್ರಾಮಸ್ಥರು ಮುಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ಇದ್ದು, ಚರಂಡಿಗೆ ಹೊಂದಿಕೊಂಡು ಹಲವಾರು ಮನೆಗಳಿವೆ. ಇಲ್ಲಿಯ ನಿವಾಸಿಗಳು ದುರ್ವಾಸನೆಯಿಂದ ನರಕಯಾತನೆ ಅನುಭವಿಸುವಂತಾಗಿದೆ. ಸಂಜೆ ಆದರೆ ಸಾಕು ಸೊಳ್ಳೆ ಗಳ ಕಾಟ. ಕೊಳಚೆಯಿಂದಾಗಿ ನೊಣಗಳ ಕಾಟ ಹೆಚ್ಚಾಗಿದೆ. ಮನೆಯಲ್ಲಿ ತಯಾರಿಸಿ ಇಟ್ಟಿದ್ದ ಅಡುಗೆಯ ಮೇಲೆ ಕುಳಿತುಕೊಳ್ಳುತ್ತಿವೆ. ಇದರಿಂದ ಸಣ್ಣಪುಟ್ಟ ಮಕ್ಕಳು ಮತ್ತು ವೃದ್ಧರಲ್ಲಿ ಸಾಂಕ್ರಾಮಿಕ ರೋಗದ ಲಕ್ಷಣಗಳು ಹೆಚ್ಚಾಗಿ ಕಾಣುತ್ತಿವೆ ಎಂದು ಗ್ರಾಮದ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಇಡೀ ಊರಿನ ಚರಂಡಿ ನೀರು ಬಂದ ನಮ್ಮ ದಲಿತರ ಓಣಿಯಲ್ಲಿ  ನಿಲ್ಲುತಿವೆ, ಚರಂಡಿ ಮೇಲೆ ಸಿಸಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಕಾಟಚಾರಕ್ಕೆ ಮೇಲೆ ಇರುವಂತ ಹೊಲಸು ಸ್ವಚ್ಛತೆ ಮಾಡುತ್ತಾರೆ. ಪಂಚಾಯತಿಯವರು ಪೂರ್ಣ ಸ್ವಚ್ಛತೆಗೆ ಮುಂದಾಗುತ್ತಿಲ್ಲ. ಚರಂಡಿ ತುಂಬಿ ಎರಡು ತಿಂಗಳಾಯಿತು ನಮ್ಮ ಪಂಚಾಯಿತಿಯಲ್ಲಿ ಸ್ವಚ್ಛ ಮಾಡುವವರಿಲ್ಲ. ಕೊಡಲೇ ಎರಡು ದಿನಗಳಲ್ಲಿ ಸ್ವಚ್ಛತೆ ಮಾಡದೆ ಹೋದರೆ ಗ್ರಾಮ ಪಂಚಾಯಿತಿ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಅಧ್ಯಕ್ಷ ಮುತ್ತು ಚಲವಾದಿ ಎಚ್ಚರಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗುಣಾತ್ಮಕ ಶಿಕ್ಷಣಕ್ಕಾಗಿ ಕಲಿಕೆ: ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಮಸುಂದರ ಅಡಿಗ

"ಎಲ್. ಬಿ.ಎ.ಫ್.ಲ್ ಎನ್ ಕಾರ್ಯಕ್ರಮಗಳ ಪರಿಣಾಮ ಮುಂದಿನ ದಿಗಳಲ್ಲಿ ಕಾಣಬಹುದು. ಆಂಗ್ಲ...

ಬಂಟ್ವಾಳ | ತಾಲೂಕು ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಆರೋಗ್ಯಾಧಿಕಾರಿಯನ್ನು ಭೇಟಿಯಾದ ಎಸ್‌ಡಿಪಿಐ ನಿಯೋಗ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಶಾಹುಲ್...

ಧಾರವಾಡ | ಬಸವಾದಿ ಶರಣರ ಆಶಯದಂತೆ ಮಾತು ಕೃತಿ ಒಂದಾಗಬೇಕು: ಡಾ. ವೀರಣ್ಣ ರಾಜೂರ

ಬಸವಾದಿ ಶರಣರ ಆಶಯದಂತೆ ನಮ್ಮ ಮಾತು ಕೃತಿ ಒಂದಾಗಬೇಕು, ನಡೆ ನುಡಿ...

ಚಿಕ್ಕಬಳ್ಳಾಪುರ | ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಸರ್ಕಾರ ಕೂಡಲೇ ಈಡೇರಿಸಬೇಕು: ರಾಜ್ಯಾಧ್ಯಕ್ಷ ಹನುಮಂತಗೌಡ ಒತ್ತಾಯ

ಅತಿಥಿ ಉಪನ್ಯಾಸಕರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಉನ್ನತ ಶಿಕ್ಷಣ ಸಚಿವರ...

Download Eedina App Android / iOS

X