ಚುನಾವಣಾ ಬಾಂಡ್ | ರದ್ದಾದ 3 ದಿನಕ್ಕೂ ಮುನ್ನ 10,000 ಕೋಟಿ ರೂ. ಮೌಲ್ಯದ ಬಾಂಡ್ ಮುದ್ರಣ ಅನುಮೋದಿಸಿದ್ದ ಸರ್ಕಾರ

Date:

Advertisements

ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಅಸಂವಿಧಾನಿಕ ಎಂದು ಘೋಷಿಸಿ, ರದ್ದುಗೊಳಿಸಿದ ಮೂರು ದಿನಕ್ಕೂ ಮುನ್ನ ಕೇಂದ್ರ ಸರ್ಕಾರವು ಸುಮಾರು 10,000 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್‌ಗಳ ಮುದ್ರಣಕ್ಕೆ ಎಸ್‌ಪಿಎಂಸಿಐಎಲ್‌ಗೆ (ಸೆಕ್ಯೂರಿಟಿ ಪ್ರಿಟಿಂಗ್ ಆಂಡ್ ಮಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ) ಅನುಮೋದನೆ ನೀಡಿತ್ತು ಎಂದು ವರದಿಯಾಗಿದೆ.

ಹಣಕಾಸು ಸಚಿವಾಲಯವು 1 ಕೋಟಿ ರೂಪಾಯಿಗಳ ತಲಾ 10,000 ಚುನಾವಣಾ ಬಾಂಡ್‌ಗಳನ್ನು ಮುದ್ರಿಸಲು ಅಂತಿಮ ಅನುಮೋದನೆಯನ್ನು ನೀಡಿತ್ತು. ಫೆಬ್ರವರಿ 28 ರಂದು ಸುಪ್ರೀಂ ಕೋರ್ಟ್ ಆದೇಶದ ಹದಿನೈದು ದಿನಗಳ ನಂತರ, ಹಣಕಾಸು ಸಚಿವಾಲಯವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್‌ಬಿಐ) ಬಾಂಡ್‌ಗಳ ಮುದ್ರಣವನ್ನು “ತಕ್ಷಣ ತಡೆಹಿಡಿಯಿರಿ” ಎಂದು ಹೇಳಿದೆ.

ಇದನ್ನು ಓದಿದ್ದೀರಾ?  ಚುನಾವಣಾ ಬಾಂಡ್ | ವಿಶ್ವದಲ್ಲೇ ಅತೀ ದೊಡ್ಡ ಹಗರಣ ಎಂದ ನಿರ್ಮಲಾ ಸೀತಾರಾಮನ್ ಪತಿ!

Advertisements

ಮಾಹಿತಿ ಹಕ್ಕು ಕಾಯಿದೆಯಡಿ ಇಂಡಿಯನ್ ಎಕ್ಸ್‌ಪ್ರೆಸ್ ಹಣಕಾಸು ಸಚಿವಾಲಯ ಮತ್ತು ಎಸ್‌ಬಿಐ ನಡುವಿನ ಪತ್ರವ್ಯವಹಾರ ಮತ್ತು ಇಮೇಲ್‌ಗಳ ಮಾಹಿತಿಯನ್ನು ಪಡೆದಿದ್ದು, ಇದರಿಂದ ಹೊಸದಾಗಿ ಬಾಂಡ್ ಮುದ್ರಣದ ವಿಚಾರ ಬಹಿರಂಗವಾಗಿದೆ. ಎಸ್‌ಪಿಎಂಸಿಐಎಲ್‌ ಈಗಾಗಲೇ 8,350 ಬಾಂಡ್‌ಗಳನ್ನು ಮುದ್ರಿಸಿದೆ ಮತ್ತು ಅದನ್ನು ಎಸ್‌ಬಿಐಗೆ ಕಳುಹಿಸಿದೆ ಎಂದು ಈ ದಾಖಲೆಗಳು ಬಹಿರಂಗಪಡಿಸಿದೆ ಎಂದು ವರದಿಯಾಗಿದೆ.

ಯೋಜನೆಯ ಪ್ರಾರಂಭದಿಂದ 22,217 ಚುನಾವಣಾ ಬಾಂಡ್‌ಗಳನ್ನು ನಗದೀಕರಣ ಮಾಡಲಾಗಿದೆ. ಬಿಜೆಪಿ 8,451 ಕೋಟಿ ರೂಪಾಯಿ, ಕಾಂಗ್ರೆಸ್ 1,950 ಕೋಟಿ ರೂಪಾಯಿ, ತೃಣಮೂಲ ಕಾಂಗ್ರೆಸ್ 1,707.81 ಕೋಟಿ ರೂಪಾಯಿ ಮತ್ತು ಬಿಆರ್‌ಎಸ್ 1,407.30 ಕೋಟಿ ರೂಪಾಯಿ ನಗದೀಕರಣ ಮಾಡಿಕೊಂಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಫೆಬ್ರವರಿ 28 ರಂದು ಎಸ್‌ಬಿಐ ಮುದ್ರಣವನ್ನು ನಿಲ್ಲಿಸುವ ಎಸ್‌ಪಿಎಂಸಿಐಎಲ್‌ಗೆ ಸೂಚನೆ ನೀಡಿದೆ. “ಚುನಾವಣಾ ಬಾಂಡ್‌ಗಳ ಮುದ್ರಣವನ್ನು ತಡೆಹಿಡಿಯಿರಿ – ಎಲೆಕ್ಟೋರಲ್ ಬಾಂಡ್ ಸ್ಕೀಮ್ 2018” ಎಂದು ಇಮೇಲ್ ಮಾಡಲಾಗಿದೆ.

ಇದನ್ನು ಓದಿದ್ದೀರಾ?  ಚುನಾವಣಾ ಬಾಂಡ್‌ | ಸಾಮಾನ್ಯ ಜನರಿಗೆ ಆಗುವ ನಷ್ಟವೆಷ್ಟು, ಹಾನಿ ಏನು? ಇಲ್ಲಿದೆ ಓದಿ

ಎಸ್‌ಬಿಐನ ವಹಿವಾಟು ಬ್ಯಾಂಕಿಂಗ್ ಇಲಾಖೆಯ ಸಹಾಯಕ ಜನರಲ್ ಮ್ಯಾನೇಜರ್ “ನಾವು 23.02.2024 ರ ಒಟ್ಟು 8350 ಬಾಂಡ್‌ಗಳ ಇಮೇಲ್ ಅನ್ನು ಒಳಗೊಂಡಿರುವ ಚುನಾವಣಾ ಬಾಂಡ್‌ಗಳ 4 ಬಾಕ್ಸ್‌ಗಳ ಭದ್ರತಾ ಫಾರ್ಮ್‌ಗಳ ಸ್ವೀಕೃತಿಯನ್ನು ಅಂಗೀಕರಿಸಿದ್ದೇವೆ. ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ಬಜೆಟ್ ವಿಭಾಗ ಪತ್ರದ ಮೂಲಕ ಅನುಮೋದನೆ ನೀಡಲಾದ ಉಳಿದ 1,650 ಎಲೆಕ್ಟೋರಲ್ ಬಾಂಡ್‌ಗಳ ಮುದ್ರಣವನ್ನು ತಡೆಹಿಡಿಯಲು ನಾವು ನಿಮ್ಮನ್ನು ಕೋರುತ್ತೇವೆ” ಎಂದು ಇಮೇಲ್‌ನಲ್ಲಿ ತಿಳಿಸಿದ್ದಾರೆ.

400 ಬುಕ್‌ಲೆಟ್‌ಗಳು ಮತ್ತು 10,000 ಎಲೆಕ್ಟೋರಲ್ ಬಾಂಡ್‌ಗಳನ್ನು ಮುದ್ರಿಸಲು ಎಸ್‌ಪಿಎಂಸಿಐಎಲ್‌ಗೆ ಭಾರತ ಸರ್ಕಾರವು ಅಂತಿಮವಾಗಿ ಫೆಬ್ರವರಿ 12 ರಂದು ಅನುಮೋದನೆ ನೀಡಿದೆ ಎಂದು ಫೆಬ್ರವರಿ 27 ರಲ್ಲಿ ತಿಳಿಸಲಾಗಿದೆ. ಅದೇ ದಿನ ಹಣಕಾಸು ಸಚಿವಾಲಯದ ಬಜೆಟ್ ವಿಭಾಗದಿಂದ ಎಸ್‌ಬಿಐ ಮತ್ತು ಸಚಿವಾಲಯದ ಇತರರಿಗೆ ಮತ್ತೊಂದು ಮೇಲ್ ಕಳುಹಿಸಲಾಗಿದೆ. “ಉಳಿದ 1,650 ಎಲೆಕ್ಟೋರಲ್ ಬಾಂಡ್‌ಗಳ ಮುದ್ರಣವನ್ನು ತಡೆಹಿಡಿಯಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಕ್ಷಣ ಎಸ್‌ಪಿಎಂಸಿಐಎಲ್‌ಗೆ ವಿನಂತಿಸುತ್ತದೆ” ಎಂದು ಹೇಳಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಗವಿಕಲರ ಕುರಿತು ಹಾಸ್ಯ: ಕ್ಷಮೆಯಾಚಿಸಲು ಕಾಮಿಡಿಯನ್‌ಗಳಿಗೆ ಸುಪ್ರೀಂ ಸೂಚನೆ

ನೀವು ಮಾತುಗಳನ್ನು ವಾಣಿಜ್ಯೀಕರಣಗೊಳಿಸುವಾಗ ಯಾವುದೇ ಒಂದು ಸಮುದಾಯದ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ...

ಲೈಂಗಿಕ ಕಿರುಕುಳ ಆರೋಪ; ಕೇರಳದ ಕಾಂಗ್ರೆಸ್‌ ಶಾಸಕ ಪಕ್ಷದಿಂದ ಅಮಾನತು

ಲೈಂಗಿಕ ಕಿರುಕುಳದ ಆರೋಪಗಳ ತೀವ್ರ ಚರ್ಚೆಯ ನಡುವೆ ಕಾಂಗ್ರೆಸ್ ಶಾಸಕ ರಾಹುಲ್...

ಸಮರ್ಪಕ ಮಾಹಿತಿ ನೀಡದೆಯೇ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಮಾರಾಟ: ಗ್ರಾಹಕ ಹಕ್ಕು ಉಲ್ಲಂಘನೆ

ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಬೆರೆಸಿ ಮಾರಾಟ ಮಾಡಬೇಕೆಂಬ ಕೇಂದ್ರ ಸರ್ಕಾರದ ಎಥೆನಾಲ್‌...

ಲಿಂಗ ತಾರತಮ್ಯ | ಮಹಿಳೆಯರಿಗಿಂತ ಅಧಿಕ ವೇತನ ಪಡೆಯುತ್ತಾರೆ ಪುರುಷ ನರ್ಸ್‌ಗಳು: ಅಧ್ಯಯನ ವರದಿ

ನರ್ಸಿಂಗ್ ಅನ್ನು ಹೆಚ್ಚಾಗಿ ಮಹಿಳೆಯರ ವೃತ್ತಿ ಎಂಬಂತೆ ನೋಡಲಾಗುತ್ತದೆ. ಆದ್ದರಿಂದಾಗಿ ಪುರುಷರು...

Download Eedina App Android / iOS

X