ಕಿರುತೆರೆ, ರಂಗಭೂಮಿ ಮತ್ತು ಚಲನಚಿತ್ರ ನಟ ಯೇಸುಪ್ರಕಾಶ್ (55) ಶನಿವಾರ ನಿಧನರಾದರು. ಎರಡು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ.
ಯೇಸು ಪ್ರಕಾಶ್ ಅವರು ಸಾಗರ ಸಮೀಪದ ಪುರಪ್ಪೆಮನೆಯ ಕಲ್ಲುಕೊಪ್ಪ ಗ್ರಾಮದವರಾಗಿದ್ದು ನೀನಾಸಂ ಬಳಗ, ಕೆ.ವಿ. ಸುಬ್ಬಣ್ಣ ರಂಗಸಮೂಹ ಸೇರಿ ಹಲವು ರಂಗ ತಂಡಗಳಲ್ಲಿ ಕೆಲಸ ಮಾಡಿದ್ದರು. ಜೊತೆಗೆ ಯಕ್ಷಗಾನ ಕಲಾವಿದರೂ ಕೂಡಾ ಹೌದು.
ನಟನೆಯ ಜತೆಯಲ್ಲಿ ಸಾಮಾಜಿಕ ಹೋರಾಟಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು. ಯೇಸು ಪ್ರಕಾಶ್ ಎಸ್.ನಾರಾಯಣ್ ನಿರ್ದೇಶನದ ‘ವೀರು’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿದ್ದರು.
ಇದನ್ನು ಓದಿದ್ದೀರಾ? ‘ಕಿರಾತಕ’ ಖ್ಯಾತಿಯ ಖಳನಟ ಡೇನಿಯಲ್ ಬಾಲಾಜಿ ನಿಧನ
ಪುನೀತ್ ರಾಜ್ಕುಮಾರ್ ಅಭಿನಯದ ‘ಯಾರೇ ಕೂಗಾಡಲಿ’, ದರ್ಶನ್ ನಟನೆಯ ‘ಸಾರಥಿ’, ಯೋಧ, ಕಲ್ಪನಾ-2 ಸೇರಿ 35ಕ್ಕೂ ಹೆಚ್ಚು ಸಿನಿಮಾ ಹಾಗೂ 100ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದರು.
ಭಾನುವಾರ ಬೆಳಗ್ಗೆ ಅವರ ಸ್ವಗ್ರಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಇದೇ ವೇಳೆ ರಂಗ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.