ರಾಯಚೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಮಾರ್ ನಾಯಕ್ ಅವರು ರಾಯಚೂರು ನಗರದಲ್ಲಿ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಭೆಮಾಡಿ ಮತಯಾಚನೆ ಮಾಡಿದರು.
ರಾಯಚೂರು ನಗರದ ಎಚ್‌ಆರ್‌ಬಿ ಕಾಲೋನಿಯಲ್ಲಿ ತಾಲೂಕ ಆರ್ಯ ಈಡಿಗ ಸಂಘದ ಕಚೇರಿಯಲ್ಲಿ ಹಿಂದುಳಿದ ವರ್ಗದ ಮುಖಂಡರುಗಳೊಂದಿಗೆ ಸೌಹಾರ್ಧಯುತವಾಗಿ ಸಮಾಲೋಚನೆ ನಡೆಸಿದರು.
ಈ ವೇಳೆ ಮಾತನಾಡಿ, ನಾನು ಅಧಿಕಾರ ಅವಧಿಯಲ್ಲಿಯೂ ನನ್ನ ಕೈಲಾದಷ್ಟು ಪ್ರಾಮಾಣಿಕವಾಗಿ ಜನರ ಸೇವೆಯನ್ನು ಮಾಡಿದ್ದೇನೆ. ಇನ್ನು ಹೆಚ್ಚಿನ ಸೇವೆಗಾಗಿ ಲೋಕಸಭಾ ಕ್ಷೇತ್ರದಿಂದ ನನಗೆ ಬೆಂಬಲಿಸುವ ಮೂಲಕ ಆಶೀರ್ವದಿಸಬೇಕೆಂದರು.
ನಗರದ ವಾರ್ಡ್ ನಂ. 8ರ ಕೋಟ್ ತಲಾರ ಬಡಾವಣೆಯಲ್ಲಿನ ಇಸ್ಲಾಮಿಕ್ ಸೆಂಟರ್‌ನಲ್ಲಿ ಮುಸ್ಲಿಂ ಸಮಾಜದ ಧರ್ಮ ಗುರುಗಳು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿದರು.
ನಗರದ ವೀರಶೈವ ಲಿಂಗಾಯತ ಮುಖಂಡರುಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಗೆ ಸಹಕಾರದೊಂದಿಗೆ ಜಿಲ್ಲಾಧಿಕಾರಿಯಾಗಿ ಸೇವೆ ಮಾಡಿದ್ದೇನೆ. ಇನ್ನು ಹೆಚ್ಚಿನ ಸಮಾಜ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ನನಗೆ ಲೋಕಸಭೆ ಅಭ್ಯರ್ಥಿಯನ್ನಾಗಿ ಮಾಡಿದೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು.
ನಗರದ ನಗರೇಶ್ವರ ದೇವಸ್ಥಾನದಲ್ಲಿ ಆರ್ಯ ವೈಶ್ಯ ಸಮಾಜದ ಮುಖಂಡರೊಂದಿಗೆ ಸೌಹಾರ್ದಯುವಾಗಿ ಸಭೆ ನಡೆಸಿದರು. ಜಿಲ್ಲೆಯನ್ನು ಕೇಂದ್ರ ಸರ್ಕಾರ ಮಹಾತ್ವಾಕಾಂಕ್ಷಿ ಜಿಲ್ಲೆಯಾಗಿ ಆಯ್ಕೆಮಾಡಿದೆ. ಆದರೆ, ಹೆಚ್ಚಿನ ಅನುದಾನ ನೀಡುವಲ್ಲಿ ವಿಫಲವಾಗಿದೆ. ಏಮ್ಸ್ ಮಂಜೂರು ಸೇರಿ, ಈ ಹಿಂದುಳಿದ ಭಾಗವನ್ನು ಸಂಪೂರ್ಣ ಕಡೆಗಣಿಸಲಾಗುತ್ತಿದೆ. ನಿಮ್ಮ ಮನೆ ಮಗನಂತೆ ಕೆಲಸ ಮಾಡಲು ಈ ಚುನಾವಣೆಯಲ್ಲಿ ನನಗೆ ಆಶೀರ್ವದಿಸಿ. ನಿಮ್ಮ ಜೊತೆಯಲ್ಲಿಯೇ ಇದ್ದು ಕೆಲಸ ಮಾಡುವೆ ಎಂದು ತಿಳಿಸಿದರು.
ಆಜಾದ್ ನಗರ ಬಡಾವಣೆಯಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಹರಾವ್ ದೇಶಪಾಂಡೆ ಅವರು ನಿವಾಸದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು, ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದು, ಇದೀಗ ರಾಜಕೀಯದ ಮೂಲಕ ಸೇವೆ ಮಾಡಲು ನನಗೊಂದು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ರಾಂಪುರ ರಸ್ತೆಯಲ್ಲಿರುವ ಸೆಂಟ್ರಲ್ ಮೆಥಡಿಸ್ಟ್ ಚರ್ಚ್‌ಗೆ ಬೇಟಿ ನೀಡಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡುವುದಾಗಿ ತಿಳಿಸಿದರು, ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದರು.
ಚರ್ಚಿನ ಡಿ.ಎಸ್. ರವರೆಂಡ್ ಸೀಮೋನ್ ಅವರು ಪ್ರಾರ್ಥಿಸಿ ಕಾಂಗ್ರೆಸ್ ಅಭ್ಯರ್ಥಿಯಾದ ಕುಮಾರ್ ನಾಯಕರಿಗೆ ಶುಭ ಹಾರೈಸಿ ಸನ್ಮಾನಿಸಿದರು. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಆಶೀರ್ವದಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಕಾಂಗ್ರೆಸ್ ಮುಖಂಡ ಕೆ. ಶಾಂತಪ್ಪ, ಮೊಹ್ಮದ್ ಶಾಲಂ, ಜಂಬಣ್ಣ, ದೊಡ್ಡ ಖಾಜನಗೌಡ, ಈರಪ್ಪ ಗೌಡ, ಕೆ. ಹನುಮಂತಪ್ಪ, ಶರಣಪ್ಪ ಕಡಗೋಲ್, ಸುರೇಖಾ, ಈರಮ್ಮ ವಕೀಲ್, ಗಾಯತ್ರಿ ಜಿಂದಪ್ಪ, ಅಂಜಲಿ, ಇಶಾಮುದ್ದಿನ್, ಮೌಲಾನಾ ಫರೀದ್, ಆದಮ್ ಮಾನ್ವಿ, ಅಸ್ಲಾಂ ಸಾಬ್, ಏಜಾಜ್ ಸಾಬ್, ಇಮ್ತಿಯಾಜ್ ಇಂಜಿನಿಯರ್, ಗಫೂರು, ವೀರಶೈವ ಲಿಂಗಾಯತ ಸಮಾಜ ಮುಖಂಡರಾದ ಹರವಿ ನಾಗನಗೌಡ, ಉಪಾದ್ಯಕ್ಷರಾದ ಅಶೋಕ್ ಕುಮಾರ್ ಪಾಟೀಲ್, ಕಾರ್ಯದರ್ಶಿ ವಿರುಪನಗೌಡ ಬಂಡಿ, ಬಸವರಾಜ ರೆಡ್ಡಿ, ಶರಣರಡ್ಡಿ, ಕಲ್ಲಯ್ಯ ಸ್ವಾಮಿ, ವಿಜಯ ಬಾಸ್ಕರ್, ಆನಂದ ಪಾಟೀಲ್, ಚನ್ನಬಸವ, ಜಿ.ಶಿವಮೂರ್ತಿ, ಬಸವರಾಜ ಪಾಟೀಲ್ ಅತ್ತನೂರು, ರಾಘವೇಂದ್ರ, ಗೋಪಾಲ್, ಸಾವಿತ್ರಿ ಪುರುಷೋತ್ತಮ, ಪದ್ಮರಾಜ್ ಅಯ್ಯ, ಜಯಂತರಾವ್ ಪತಂಗೆ, ಎಂ.ಆರ್. ದತ್ತು, ಚಾಗಿ ವೆಂಕಟೇಶ, ಚಿತ್ರಾಲ್ ರಮೇಶ, ವಿನೋದ್ ಕುಮಾರ್, ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಗರಾವ್ ದೇಶಪಾಂಡೆ, ಆನಂದ ಫಡ್ನೀಸ್, ಪ್ರಹಲ್ಲಾದ್ ರಾವ್, ವೆಂಕಟೇಶ ಕೋಲಾರ್, ಸುಧೀರ್, ಗುರುರಾಜರಾವ್ ಕುಲಕರ್ಣಿ, ಕಾಂಗ್ರೆಸ್ ಮುಖಂಡರಾದ ಬಸವರಾಜರೆಡ್ಡಿ, ಬಿ.ರಮೇಶ ಸೇರಿದಂತೆ ಅನೇಕರಿದ್ದರು.
