ಬೀದರ್ ಜಿಲ್ಲಾ ಪೊಲೀಸ್ ಇಲಾಖೆಯ ದಕ್ಷ ಶ್ವಾನವೆಂದೇ ಗುರುತಿಸಿಕೊಂಡಿದ್ದ ʼಬ್ರುನೋʼ ಭಾನುವಾರ ನಿಧನ ಹೊಂದಿದೆ.
ಭಾನುವಾರ ಪೊಲೀಸ್ ಹೆಡ್‌ಕ್ವಾರ್ಟರ್‌ನಲ್ಲಿ ಪೊಲೀಸ್ ಗೌರವದೊಂದಿದೆ ಶ್ವಾನ ಬ್ರುನೋ ಅಂತ್ಯಕ್ರಿಯೆ ನಡೆಯಿತು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ ಡಿವೈಎಸ್‌ಪಿ ಶಿವನಗೌಡ ಪಾಟೀಲ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂತಿಮ ಗೌರವ ಸಲ್ಲಿಸಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, “ರಾಜ್ಯಾದ್ಯಂತ ಗಣ್ಯ ವ್ಯಕ್ತಿಗಳ ಭೇಟಿ ಸಂದರ್ಭದ ವೇಳೆ ಪೊಲೀಸ್ ಇಲಾಖೆಯ ಶ್ವಾನದಳದಲ್ಲಿ ಸ್ಪೋಟಕ ಪತ್ತೆ ಹಚ್ಚುವ ಕೆಲಸವನ್ನು ಬ್ರುನೋ ಬಹಳ ದಕ್ಷ ರೀತಿಯಲ್ಲಿ ಮಾಡಿದೆ. ಎಎಸ್‍ಸಿ ತಂಡದೊಂದಿಗೆ ಭದ್ರತಾ ತಪಾಸಣಾ ಕಾರ್ಯ ಚುರುಕಾಗಿ ಭಾಗಿಯಾಗಿದ್ದು ಹಾಗೂ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ ಮತ್ತು ಇತರೆ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಗಳಲ್ಲಿ ಕೂಡ ಭಾಗಿಯಾಗಿ ಪದಕ ವಿಜೇತವಾಗಿದ್ದು, ನಮ್ಮ ಬೀದರ್ ಜಿಲ್ಲಾ ಪೊಲೀಸ್ ಕೀರ್ತಿ ತಂದಿದ್ದ ಶ್ವಾನ ಬ್ರುನೋ ಅಕಾಲಿಕ ನಿಧನ ಹೊಂದಿರುವುದು ದುಃಖದ ವಿಷಯ” ಎಂದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಗರು ಮನುವಾದಿ, ಸರ್ವಾಧಿಕಾರಿ ಧೋರಣೆಯಲ್ಲಿ ನಂಬಿಕೆ ಇಟ್ಟವರು: ಸಚಿವ ರಾಮಲಿಂಗಾರೆಡ್ಡಿ
ಶ್ವಾನದಳದ ಅಧಿಕಾರಿ ಅಶೋಕ ಮಾತನಾಡಿ, “10 ವರ್ಷ 6 ತಿಂಗಳು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಬ್ರುನೋ ಗಣ್ಯರು ಭೇಟಿ ನೀಡಿದ ವೇಳೆ ಅತ್ಯಂತ ದಕ್ಷತೆಯಿಂದ ಕೆಲಸ ನಿರ್ವಹಿಸಿ ಸ್ಫೋಟಕ ಪತ್ತೆ ಹಚ್ಚುವ ಕೆಲಸ ಮಾಡಿದೆ. ಇಂದು ಬ್ರುನೋ ಅಕಾಲಿಕವಾಗಿ ನಮ್ಮನ್ನಗಳಿಲಿರುವುದು ಶ್ವಾನ ದಳಕ್ಕೆ ತುಂಬಲಾರದ ನಷ್ಟವಾಗಿದೆ” ಎಂದರು.