ತುಮಕೂರು | ಹೊರಗುತ್ತಿಗೆ ಕಾರ್ಮಿಕರಿಗೆ ರಜೆ; ಕೆಎಂಎಫ್ ಅಧಿಕಾರಿಗಳ ವಿರುದ್ಧ ದಿಢೀರ್ ಪ್ರತಿಭಟನೆ

Date:

Advertisements

ಪಶು ಆಹಾರಕ್ಕೆ ಬೇಡಿಕೆ ಇಲ್ಲವೆಂಬ ಕಾರಣ ನೀಡಿ ಹೊರಗುತ್ತಿಗೆ ಆಧಾರದ ಕಾರ್ಮಿಕರಿಗೆ ಬಲವಂತ ರಜೆ ನೀಡಿದ ಕೆಎಂಎಫ್ ಅಧಿಕಾರಿಗಳ ವಿರುದ್ಧ ಸಂತ್ರಸ್ತ ನೂರಾರು ಕಾರ್ಮಿಕರು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಕಾರ್ಖಾನೆ ಮುಂಭಾಗ ದಿಢೀರ್ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡು ಆಕ್ರೋಶ ಹೊರ ಹಾಕಿದರು.

“ಸರ್ಕಾರ ಸ್ವಾಮ್ಯದ ಪಶು ಆಹಾರ ಘಟಕದಲ್ಲಿ ಬೇಡಿಕೆ ಕ್ಷೀಣಿಸಿದೆ ಎಂದರೆ ಆಲೋಚಿಸಬೇಕಿದೆ. ಕಳೆದ ನಾಲ್ಕು ತಿಂಗಳಿಂದ ಹೊರಗುತ್ತಿಗೆ ಆಧಾರದ ಕಾರ್ಮಿಕರಿಗೆ ರಜೆ ನೀಡಲಾಗುತ್ತಿದೆ. ಕಾರ್ಖಾನೆಯಲ್ಲಿರುವ ಮೂರು ಘಟಕದ ಪೈಕಿ ಒಂದು ಹಳೆಯ ಘಟಕ ಮುಚ್ಚುವ ಆಲೋಚನೆ ನಡೆದಿದೆ. ಈ ಹಿನ್ನಲೆಯಲ್ಲಿ ಬಲವಂತವಾಗಿ ರಜೆ ನೀಡಲಾಗುತ್ತಿದೆ. ಈ ಕೆಲಸ ನಂಬಿದ 150 ಮಂದಿ ಕಾರ್ಮಿಕ ಕುಟುಂಬಗಳು ಬೀದಿಗೆ ಬೀಳುತ್ತವೆ ಎನ್ನುವುದನ್ನು ಅರಿಯಬೇಕಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಮಧು ಮಾತನಾಡಿ, “ಇಲ್ಲಿನ ಕನಿಷ್ಟ ವೇತನ ನಂಬಿ ಹತ್ತು ಹಲವು ಆರ್ಥಿಕ ವಹಿವಾಟು ಮಾಡುತ್ತಿದ್ದ ಕಾರ್ಮಿಕರ ಬದುಕಿಗೆ ಬಿದ್ದ ಪೆಟ್ಟು ಯಾರಿಗೂ ಅರ್ಥ ಆಗುತ್ತಿಲ್ಲ. ಅಲ್ಲಿನ ಸಿಬ್ಬಂದಿಗಳು ಕಾರ್ಮಿಕರ ಮೇಲೆ ದೌರ್ಜನ್ಯವೆಸಗುವುದು ಇತ್ತೀಚೆಗೆ ಜಾಸ್ತಿಯಾಗಿದ್ದು, ಈಗಿನ ಜಿ ಎಂ ಗಿರೀಶ್ ನಾಯ್ಕ್ ಅವರು ನಮ್ಮ ಕಷ್ಟ ಅಲಿಸುತ್ತಿಲ್ಲ. ಪಶು ಆಹಾರಕ್ಕೆ ಬೇಡಿಕೆ ಇಲ್ಲವಾಗಿರುವುದಕ್ಕೆ ಸರಿಯಾದ ಕಾರಣ ತಿಳಿಯಬೇಕಿದೆ. ಸೂಕ್ತ ತನಿಖೆ ಮಾಡಿಸಿದರೆ ಅಲ್ಲಿನ ಕೆಲ ಸಿಬ್ಬಂದಿಗಳು, ಅಧಿಕಾರಿಗಳ ಭ್ರಷ್ಟಾಚಾರ ಹೊರ ಬರುತ್ತದೆ. ಆ ಕೆಲಸ ಮಾಡದೆ ಕಾರ್ಮಿಕರನ್ನು ಹೊಣೆ ಮಾಡಿ ಕೆಲಸದಿಂದ ಕಳುಹಿಸುವುದು ಸರಿಯಲ್ಲ. ಬದಲಿಗೆ ಕೇಂದ್ರ ವಲಯದ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾರ್ಮಿಕರಿಗೆ ತೊಂದರೆ ಕೊಡುವ ಸಿಬ್ಬಂದಿಗಳ ವಿರುದ್ದ ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದರು.

Advertisements

ಕಾರ್ಮಿಕ ಸತೀಶ್ ಗೌಡ ಮಾತನಾಡಿ, “ಬೇಜವಾಬ್ದಾರಿ ತೋರುವ ಜಿಎಂ ಅವರು ಕಾರ್ಮಿಕರ ಕಷ್ಟ ಆಲಿಸುತ್ತಿಲ್ಲ. ಅಲ್ಲಿರುವ ಅಧಿಕಾರಿಗಳಾದ ಮಹೇಶ್ವರ, ಪುನೀತ್, ಕೃಷ್ಣ ಎಂಬ ಅಧಿಕಾರಿಗಳು ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಹಸುಗಳು ಸಾಕಷ್ಟಿವೆ. ಹಾಲು ಉತ್ಪಾದನೆ ಸಹ ಅಚ್ಚುಕಟ್ಟಾಗಿದೆ. ಆದರೂ ಪಶು ಆಹಾರ ಬೇಡಿಕೆ ಇಲ್ಲವೆಂದರೆ ಯೋಚಿಸಬೇಕು. ಖಾಸಗಿ ಪಶು ಆಹಾರ ಉತ್ಪಾದನೆಗೆ ಬೇಡಿಕೆ ಇದೆ. ಇಲ್ಲಿನ ಘಟಕದ ಅವ್ಯವಹಾರ ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕಿದೆ. ಘಟಕಕ್ಕೆ ಬರುವ ಕಚ್ಛಾ ವಸ್ತುಗಳು ಗುಣಮಟ್ಟ ಕಳಪೆ ಎಂದು ವಾಪಾಸ್ ಕಳುಹಿಸಿ ಮತ್ತೆ ಹೊರಗಡೆ ಇದೇ ವಸ್ತುವನ್ನು ಮತ್ತೊಂದು ಲಾರಿಯಲ್ಲಿ ತಂದು ಗುಣಮಟ್ಟ ಓಕೆ ಎನ್ನುತ್ತಾರೆ. ಇಲ್ಲಿ ನಡೆಯುವ ಭ್ರಷ್ಟಾಚಾರ ತಿಳಿದೂ ಕೂಡಾ ನಮ್ಮದೇ ಘಟಕದ ಮರ್ಯಾದೆಗೆ ಸುಮ್ಮನಿದ್ದೇವೆ” ಎಂದು ಕಿಡಿಕಾರಿದರು.

“ಬೇಡಿಕೆ ಕಡಿಮೆ ಆಗಿರುವ ಬಗ್ಗೆ ತನಿಖೆ ಮಾಡಿ ಅಲ್ಲಿನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ, ಎಲ್ಲದಕ್ಕೂ ಕಾರ್ಮಿಕರನ್ನು ಹೊಣೆ ಮಾಡಿ ಹೊಟ್ಟೆಯ ಮೇಲೆ ಹೊಡೆಯಬೇಡಿ” ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಉಡುಪಿ-ಚಿಕ್ಕಮಗಳೂರು ಸೇರಿದಂತೆ 14 ಕ್ಷೇತ್ರಗಳಲ್ಲಿ ಕೆಆರ್‌ಎಸ್‌ ಪಕ್ಷದಿಂದ ನಾಮಪತ್ರ ಸಲ್ಲಿಕೆ

ಡಾ.ಬಿ.ಆರ್.ಅಂಬೇಡ್ಕರ್ ಅವರ ಪೋಟೋ ಜೊತೆಗೆ ಪ್ರತಿಭಟನೆ ಆರಂಭಿಸಿದ ಹೊರ ಗುತ್ತಿಗೆ ಆಧಾರದ ಕಾರ್ಮಿಕರು ಘೋಷಣೆ ಕೂಗುತ್ತಾ, ಅಧಿಕಾರಿಗಳ ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಿ ಆರ್ ಶಂಕರ್ ಕುಮಾರ್ ಮುತ್ತುರಾಜ್, ನಿಶ್ಚಿತ್, ಚಾಲುಕ್ಯ, ಬಾಸುಗೌಡ, ಚೇತನ್, ಮದನ್ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ದೇಶಕ್ಕೆ ಬರಹಗಾರರ ಕೊಡುಗೆ ಅನನ್ಯ

ದೇಶದ ಸ್ವಾತಂತ್ರ್ಯಕ್ಕೆ ಸಾಹಿತಿ, ಬರಹಗಾರರ ಕೊಡುಗೆ ಅನನ್ಯವಾಗಿದೆ. ಲೇಖನಿ ಖಡ್ಗಕ್ಕಿಂತ ಹರಿತವಾದದ್ದು,...

ಮೈಸೂರು | ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ; ಮೀಲಾದ್ ಘೋಷಣಾ ಜಾಥಾ

ಮೈಸೂರು ನಗರದ ಅಶೋಕ ರಸ್ತೆಯಲ್ಲಿರುವ ಮೀಲಾದ್ ಪಾರ್ಕ್ ವೃತ್ತದಲ್ಲಿ 'ಸುನ್ನಿ ಯುವಜನ...

ಮೈಸೂರು | ಗಣೇಶನ ವೇಷಧರಿಸಿ ರಕ್ತದಾನದ ಜಾಗೃತಿ

ಮೈಸೂರು ಜೀವಧಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಾಮಸ್ವಾಮಿ ವೃತದಲ್ಲಿ ವಾಹನ...

ಸಾಕ್ಷಿ ದೂರುದಾರನಿಗೆ ಆಶ್ರಯ: ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಎಸ್‌ಐಟಿ ಶೋಧ

ಸಾಕ್ಷಿ ದೂರುದಾರ ತಾನು ಉಜಿರೆಯಲ್ಲಿರುವ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ...

Download Eedina App Android / iOS

X