ವಿಜಯಪುರ ನಗರದ ವಾರ್ಡ್ ನಂ. 32, 33, 34ರಲ್ಲಿ ಪಾದಯಾತ್ರೆ ಹಾಗೂ ಪ್ರಚಾರ ಸಭೆಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊ.ರಾಜು ಆಲಗೂರ ಚಾಲನೆ ನೀಡಿ, ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಪ್ರಚಾರವನ್ನು ನಗರದಲ್ಲಿ ಅಧಿಕೃತವಾಗಿ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜು ಆಲಗೂರ್ ಅವರು, ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಸ್ಪಂದನೆಯಿದ್ದು, ಈ ಸಲ ಮತದಾರರು ಬದಲಾವಣೆ ಬಯಸಿದ್ದು ನಿಚ್ಚಳವಾಗಿದೆ. ರಾಜ್ಯದ ಸಿದ್ದರಾಮಯ್ಯನವರ ಸರ್ಕಾರದ ಸಾಧನೆ ಮನೆ ಮನೆ, ಮನ ಮುಟ್ಟಿದೆ. ಜಿಲ್ಲೆಯೊಂದರಲ್ಲೇ ನಾಲ್ಕು ಲಕ್ಷದಷ್ಟು ಮಹಿಳೆಯರು ಸರ್ಕಾರ ನೀಡಿದ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸಾಮಾನ್ಯರ ಬದುಕು ಸಹ್ಯವಾಗಿದೆ. ಗ್ಯಾರಂಟಿ ಯೋಜನೆಗಳು ಎಲ್ಲರ ಆರ್ಥಿಕ ಸ್ಥಿತಿ ಬದಲಾವಣೆ ಮಾಡಿದೆ ಎಂದರು.
ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪ್ರತೀ ಮಹಿಳೆಯರಿಗೆ ತಿಂಗಳಿಗೆ ಒಂದು ಲಕ್ಷ ರೂ. ಸಿಗವುದು ಸೇರಿದಂತೆ ಹತ್ತು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಇದರಿಂದ ಬಡವರ ಜೀವನ ಮಟ್ಟ ಸುಧಾರಿಸಲಿದೆ ಎಂದು ಹೇಳಿದರು.
ಬಬಲೇಶ್ವರ ನಾಕಾದಿಂದ ಆರಂಭಗೊಂಡ ಪಾದಯಾತ್ರೆ, ಜೋರಾಪುರಪೇಠ, ದರ‍್ಗಾದೇವಿ ಹಾಗೂ ಶಂಕರಲಿಂಗ ದೇವಸ್ಥಾನ, ಹೊಸ ನಿಲ್ದಾಣ, ಇಬ್ರಾಹಿಂ ರೋಜಾ ಪ್ರದೇಶದಲ್ಲಿ ಸಂಚರಿಸಿತು.
ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್‌ಹಮೀದ ಮುಶ್ರೀಫ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಮಹ್ಮದ ರಫೀಕ್ ಟಪಾಲ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ನಗರಸಭೆ ಮಾಜಿ ಸದಸ್ಯ ಅಬ್ದುಲ್‌ರಜಾಕ ಹೊರ್ತಿ, ಬಿಡಿಎ ಅಧ್ಯಕ್ಷ ಕನ್ನಾನ ಮುಶ್ರೀಫ್, ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಗಂಗಾಧರ ಸಂಬಣ್ಣಿ, ಚಂದ್ರಕಾಂತ ಶೆಟ್ಟಿ, ಆಜಾದ ಪಟೇಲ, ಸಂಗನಗೌಡ ಹರನಾಳ, ಮಹಾದೇವಿ ಗೋಕಾಕ, ಅಫ್ಜಲ ಜಾನವೆಕರ, ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಕೆಪಿಸಿಸಿ ಸಂಯೋಜಕ ವಿನೋದ ವ್ಯಾಸ, ಉಪ ಮಹಾಪೌರ ದಿನೇಶ ಹಳ್ಳಿ, ಮಹಾನಗರ ಪಾಲಿಕೆ ಸದಸ್ಯರುಗಳಾದ ಆರತಿ ಶಹಾಪೂರ, ಅಲ್ತಾಫ್ ಇಟಗಿ, ಅಪ್ಪು ಪೂಜಾರಿ, ಸದ್ದಾಮ ನಾಡೆವಾಲೆ, ಆಸೀಫ್ ಶಾನವಾಲೆ, ಇದ್ರೂಸ ಬಕ್ಷಿ, ಅಂಗ ಘಟಕಗಳ ಅಧ್ಯಕ್ಷರಾದ ವಿದ್ಯಾರಾಣಿ ತುಂಗಳ, ನಿಂಗಪ್ಪ ಸಂಗಾಪೂರ, ಬಾಪುಗೌಡ ಪಾಟೀಲ, ಅಮಿತ ಚವ್ಹಾಣ, ಆನಂದ ಜಾಧವ, ಮೆಂಡೆಗಾರ, ಲಾಲಸಾಬ ಕೊರಬು, ವಿಜಯಕುಮಾರ ಘಾಟಗೆ ಸೇರಿದಂತೆ,
ವಸಂತ ಹೊನಮೊಡೆ, ಅಷ್ಫಾಕ ಮನಗೂಳಿ, ಐ.ಎಂ. ಇಂಡಿಕರ, ಫಿರೋಜ ಶೇಖ, ಪಯಾಜ ಕಲಾದಗಿ, ಅಬ್ದುಲ್‌ಪೀರಾ ಜಮಖಂಡಿ, ಸಂತೋಷ ಬಾಲಗಾಂವಿ, ಹಾಜಿಲಾಲ ದಳವಾಯಿ, ಗಣೇಶ ಕಬಾಡೆ, ಪರಶುರಾಮ ಹೊಸಮನಿ, ಇಲಿಯಾಸಅಹ್ಮದ ಸಿದ್ದಿಕಿ, ಜಾಫರ ಸುತಾರ, ಅಕ್ರಮ ಮಾಶ್ಯಾಳಕರ, ಗಂಗೂಬಾಯಿ ಧುಮಾಳೆ, ದೀಪಾ ಕುಂಬಾರ, ಭಾರತಿ ಹೊಸಮನಿ, ಜಯಶ್ರೀ ಭಾರತೆ, ರಾಜೇಶ್ವರಿ ಚೋಳಕೆ, ಸಮಿಮಾ ಅಕ್ಕಲಕೋಟ, ಲಕ್ಷ್ಮೀ ಕ್ಷೀರಸಾಗರ, ಸವಿತಾ ಧನರಾಜ, ಕಾಶಿಬಾಯಿ ಹಡಪದ, ಅವಿನಾಶ ಹೇರಲಗಿ, ವಿಜಯಕುಮಾರ ಕಾಳೆ, ಪ್ರದೀಪ ಸೂರ್ಯವಂಶಿ, ತಾಜುದ್ದೀನ ಖಲೀಫಾ, ಅಡಿವೆಪ್ಪ ಸಾಲಗಲ್, ಸದಾಶಿವ ಹಟಗಾರ, ಸಿದ್ದು ತೊರವಿ, ಅಶೋಕ ನಾಯ್ಕೋಡಿ, ಕುಲದೀಪಸಿಂಗ ಪೋತಿವಾಲಾ, ವರ್ಷಾ ಭೋವಿ, ಅನಿಲ ಸೂರ್ಯವಂಶಿ, ರಮೇಶ ಕೊಕಟನೂರ, ಹಾಜಿ ಪಿಂಜಾರ, ಶಕೀರ ಖಾಜಿ, ಭಡೇಗರ, ಇಸಾಕ ಗುಲಬರ್ಗಾ, ಸುಂದರಪಾಲ ರಾಠೋಡ, ರೋಜೆವಾಲೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.