ಕಾಂಗ್ರೆಸ್ ಆಂಧ್ರ ವಿಧಾನಸಭೆಯ 114 ಅಭ್ಯರ್ಥಿಗಳು ಹಾಗೂ ನಾಲ್ಕು ರಾಜ್ಯಗಳ 17 ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಲೋಕಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶದ ಐದು, ಬಿಹಾರದ ಮೂರು, ಒಡಿಶಾದ 7 ಹಾಗೂ ಪಶ್ಚಿಮ ಬಂಗಾಳದ ಒಬ್ಬರು ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಆಂಧ್ರ ಪ್ರದೇಶ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ವೈ ಎಸ್ ಶರ್ಮಿಳಾ ಅವರಿಗೆ ಕಡಪಾ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬರಗಾಲಕ್ಕೆ ಬರಲಿಲ್ಲ, ಪರಿಹಾರ ಕೊಡಲಿಲ್ಲ, ಓಡೋಡಿ ಬರುತ್ತಿದ್ದಾರೆ ಓಟಿಗಾಗಿ!
ಶರ್ಮಿಳಾ ಅವರು ತಮ್ಮ ಸಂಬಂಧಿ ವೈಎಸ್‌ಆರ್‌ಸಿಪಿ ಹಾಲಿ ಸಂಸದ ವೈ ಎಸ್ ಅವಿನಾಶ್ ರೆಡ್ಡಿ ಅವರ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ. ಶರ್ಮಿಳಾ ಅವರು ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್‌ಮೋಹನ್ ರೆಡ್ಡಿ ಅವರ ಸಹೋದರಿ.
ಆಂಧ್ರ ಪ್ರದೇಶದಲ್ಲಿ ಐದು ಮೀಸಲು ಕ್ಷೇತ್ರ ಒಳಗೊಂಡು ಒಟ್ಟು 25 ಲೋಕಸಭಾ ಕ್ಷೇತ್ರಗಳು ಹಾಗೂ 175 ವಿಧಾನಸಭಾ ಕ್ಷೇತ್ರಗಳಿವೆ.
ಆಂಧ್ರದ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳ ಚುನಾವಣೆ ಮೇ 13 ರಂದು ಒಂದೇ ಹಂತದಲ್ಲಿ ಏಕಕಾಲದಲ್ಲಿ ನಡೆಯಲಿದೆ. ಫಲಿತಾಂಶ ಜೂನ್ 6 ರಂದು ಪ್ರಕಟಗೊಳ್ಳಲಿದೆ.
APCC chief @realyssharmila will contest from Kadapa Lok Sabha. She will face her cousin YS Avinash Reddy from her brother @ysjagan’s @YSRCParty . @INCIndia today announced names for 114 assembly segments in Andhra along with 5 LS segments#Andhra #AndhraPradesh #AndhraPolitics… pic.twitter.com/pHSbas0fiO
— SNV Sudhir (@sudhirjourno) April 2, 2024
