ತೈವಾನ್‌ನಲ್ಲಿ ಬುಧವಾರ 7.2 ತೀವ್ರತೆಯ ಭೂಕಂಪ ಸಂಭವಿಸಿದ್ದು ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. 25 ವರ್ಷಗಳಲ್ಲೇ ಅತ್ಯಂತ ಪ್ರಬಲ ಭೂಕಂಪ ಇದಾಗಿದ್ದು ಕಟ್ಟಡಗಳ ಅಡಿಪಾಯ ಅಲ್ಲಾಡಿದೆ, ಕೆಲವು ಕಟ್ಟಡಗಳು ಕುಸಿದಿದೆ. ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.
ಕೆಲವು ಜನರು ಭೂಕಂಪದಿಂದಾಗಿ ಕಟ್ಟದಲ್ಲಿಯೇ ಸಿಲುಕಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ನಾಲ್ವರು ಸಾವನ್ನಪ್ಪಿದ್ದು, ಸುಮಾರು 60ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದೆ ಎಂದು ವರದಿಯಾಗಿದೆ. ಇನ್ನು ಜಪಾನ್‌ನ ಹವಾಮಾನ ಸಂಸ್ಥೆಯು ಸಣ್ಣ ಸುನಾಮಿ ಅಲೆಗಳು ಓಕಿನಾವಾದ ದಕ್ಷಿಣ ಪ್ರಾಂತ್ಯದ ಭಾಗಗಳನ್ನು ತಲುಪಿದೆ ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ, ಅರುಣಾಚಲ ಪ್ರದೇಶದಲ್ಲಿ ಎರಡು ಬಾರಿ ಭೂಕಂಪ
ತೈವಾನ್ ಸಮಯ 10:14 ರ ಸುಮಾರಿಗೆ ಅಧಿಕಾರಿಗಳು ನಾಗರಿಕರಿಗೆ ತುರ್ತು ಸಂದೇಶ ಕಳುಹಿಸಿದ್ದಾರೆ. “ಭೂಕಂಪದಿಂದ ಉಂಟಾದ ಸುನಾಮಿ ಕ್ರಮೇಣ ತೈವಾನ್ ಕರಾವಳಿಯನ್ನು ತಲುಪಿದೆ” ಎಂದು ಈ ಸಂದೇಶವು ಹೇಳಿದೆ.
#WATCH | A very shallow earthquake with a preliminary magnitude of 7.5 struck in the ocean near Taiwan. Japan has issued an evacuation advisory for the coastal areas of the southern prefecture of Okinawa after the earthquake triggered a tsunami warning. Tsunami waves of up to 3… pic.twitter.com/2Q1gd0lBaD
— ANI (@ANI) April 3, 2024
” ಕರಾವಳಿ ಪ್ರದೇಶಗಳಲ್ಲಿನ ಜನರು ಜಾಗರೂಕರಾಗಿರಲು ಮತ್ತು ಕಟ್ಟುನಿಟ್ಟಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಸುನಾಮಿ ಅಲೆ ದಿಢೀರ್ ಎದ್ದರೆ ಉಂಟಾಗುವ ಅಪಾಯಗಳ ಬಗ್ಗೆ ಗಮನವಿರಲಿ” ಎಂದು ಎಚ್ಚರಿಕೆ ಸಂದೇಶದಲ್ಲಿ ತಿಳಿಸಲಾಗಿದೆ.
Breaking News :- more building , more house collalpse in tshunami in Taiwan,।
Lets pray for Taiwan People for safety।we stand with Taiwan People।
#Tsunami #Taiwan #earthquakepic.twitter.com/nYQ5m859Gs— PretMeena (@PretMeena) April 3, 2024
ಫಿಲಿಪೈನ್ಸ್ ಭೂಕಂಪನ ಏಜೆನ್ಸಿಯು ಹಲವಾರು ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಎಚ್ಚರಿಕೆಯನ್ನು ನೀಡಿದೆ. ಎತ್ತರದ ಪ್ರದೇಶಕ್ಕೆ ಸ್ಥಳಾಂತರವಾಗುವಂತೆ ತಿಳಿಸಿದೆ. ಇನ್ನು ಶಾಂಘೈನಲ್ಲಿ ಭೂಕಂಪದ ಅನುಭವವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇನ್ನು ತೈಪೆ ನಗರ ಸರ್ಕಾರವು ಹಾನಿಯ ಯಾವುದೇ ವರದಿಯಾಗಿಲ್ಲ ಎಂದಿದೆ. ಆದರೆ ವಿದ್ಯುತ್ ಆಪರೇಟರ್ ತೈಪವರ್ ತೈವಾನ್‌ನಲ್ಲಿ ಇನ್ನೂ 87,000 ಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್ ಇಲ್ಲ ಎಂದು ಹೇಳಿದ್ದಾರೆ.