ಚಿತ್ರದುರ್ಗ | ಎನ್‌ಡಿಎ ಆಡಳಿತದಲ್ಲಿ ದೇಶದ ಪತ್ರಿಕಾ ಸ್ವಾತಂತ್ರ್ಯ ಸಂಪೂರ್ಣ ದಮನವಾಗಿದೆ: ಪಿ ಸಾಯಿನಾಥ್

Date:

Advertisements

ಮೋದಿ ನೇತೃತ್ವದ ಎನ್‌ಡಿಎ ಅವಧಿಯಲ್ಲಿ ದೇಶದ ಪತ್ರಿಕಾ ಸ್ವಾತಂತ್ರ್ಯ ಸಂಪೂರ್ಣ ದಮನವಾಗಿದೆ. ವಿಶ್ವಗುರು ಎಂದುಕೊಳ್ಳುವ ಮೋದಿ ಹತ್ತು ವರ್ಷಗಳಲ್ಲಿ ಒಮ್ಮೆಯೂ ಪತ್ರಿಕಾಗೋಷ್ಠಿಯನ್ನೇ ನಡೆಸದೇ ಪ್ರಜಾಪ್ರಭುತ್ವ ತತ್ವಗಳನ್ನು ಗಾಳಿಗೆ ತೂರಿದ್ದಾರೆ ಎಂದು ಪತ್ರಕರ್ತ ಮ್ಯಾಗ್ಗೆಸೆ ಪುರಸ್ಕೃತ ಪಿ.ಸಾಯಿನಾಥ್ ಹೇಳಿದರು.

ಚಿತ್ರದುರ್ಗ ನಗರದ ಎಸ್‌ಆರ್‌ಎಸ್ ಸಮೂಹ ಸಂಸ್ಥೆಯ ಡಾ. ಬಿ.ವಿ. ವೈಕುಂಠರಾಜು ವೇದಿಕೆಯಲ್ಲಿ ಸೋಮವಾರ (ಏ.1) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ಮೋದಿ ಮಾಧ್ಯಮ ರಂಗಕ್ಕೆ ಮಾಡಿದ ಒಂದೇ ಒಳ್ಳೆಯ ಕೆಲಸವೆಂದರೆ ಕೋವಿಡ್ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರವನ್ನು ಅಗತ್ಯ ಸೇವೆಗಳ ವ್ಯಾಪ್ತಿಗೆ ತಂದಿರುವುದು. ಇದು ಒಳ್ಳೆಯ ಬೆಳವಣಿಗೆ. ಆದರೆ, ಅಗತ್ಯ ಸೇವೆಗಳ ವ್ಯಾಪ್ತಿಗೆ ಪತ್ರಕರ್ತರು ಸೇರಿದರೂ ಸಾವಿರಾರು ಪತ್ರಕರ್ತರು ಕೆಲಸವನ್ನು ಕಳೆದುಕೊಂಡರು. ಮಾಧ್ಯಮ ಸಂಸ್ಥೆಗಳ ಮಾಲೀಕರ ಈ ಕಾನೂನು ಬಾಹಿರ ವರ್ತನೆಯನ್ನು ಕೇಂದ್ರ ಸರ್ಕಾರ ಗಮನಿಸಲೇ ಇಲ್ಲ. ಅಗತ್ಯ ಸೇವೆಯ ವ್ಯಾಪ್ತಿಯಲ್ಲಿರುವವರನ್ನು ಕೆಲಸದಿಂದ ತೆಗೆಯುವಂತಿಲ್ಲ. ಹೀಗೆ ಮೋದಿ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿಯೇ ತನ್ನ ನಿಲುವನ್ನು ಪ್ರದರ್ಶಿಸುತ್ತ ಹೋಗುತ್ತಿದೆ ಎಂದು ಟೀಕಿಸಿದರು.

Advertisements

ಕಾರ್ಪೊರೇಟ್  ಮಾಲೀಕರುಗಳು ಪತ್ರಕರ್ತರ ಸೇವಾ ಭದ್ರತೆಯನ್ನೂ ಪರಿಗಣಿಸದೇ ಬಹುದೊಡ್ಡ ಅನಾಚಾರವನ್ನು ಎಸಗುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮತ್ತು ನಂತರದ ಈ ವರ್ಷಗಳಲ್ಲಿ ದೇಶದ ಸುಮಾರು 3500 ಪತ್ರಕರ್ತರನ್ನು ಕೆಲಸದಿಂದ ತೆಗೆಯಲಾಗಿದೆ. ಭಾರತೀಯ ಪ್ರೆಸ್ ಕೌಂನ್ಸಿಲ್ ಬಗ್ಗೆ ವಿವರಣೆ ಕೇಳಿದಾಗ ಸರಿಯಾದ ಉತ್ತರವನ್ನೂ ಕೊಟ್ಟಿಲ್ಲ. ಮಾಲೀಕರುಗಳ ಇಂತಹ ಧೋರಣೆಗೆ ಪೂರಕವಾಗಿ ಇತ್ತೀಚಿನ ವರ್ಷಗಳಲ್ಲಿ ಹವ್ಯಾಸಿ ಪತ್ರಕರ್ತ ಎಂಬ ಹಣೆ ಪಟ್ಟಿಯೊಂದಿಗೆ ಉದ್ಯೋಗ ನೀಡಲಾಗುತ್ತಿದೆ. ಇದು ಆರೋಗ್ಯಕರ ಮಾಧ್ಯಮಕ್ಕೆ ವ್ಯತಿರಿಕ್ತವಾದ ಬೆಳವಣಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿನ ಸನ್ನಿವೇಶದಲ್ಲಿ ಎಲ್ಲ ಮಾಧ್ಯಮಗಳು ಬಂಡವಾಳ ಶಾಹಿಗಳ ಹಿಡಿತದಲ್ಲಿವೆ. ಪತ್ರಕರ್ತರು ಬರ ವಣಿಗೆಯ ಸ್ವಾತಂತ್ರ್ಯ , ತನ್ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ಎರಡನ್ನೂ ಕಳೆದುಕೊಂಡಿದ್ದಾರೆ. ಇದು ಒಳ್ಳೆಯ  ಬೆಳವಣಿಗೆ ಅಲ್ಲ ಎಂದರು. ಇಂದು ಮಾಧ್ಯಮವನ್ನು ದಮನ ಮಾಡುವ ವ್ಯವಸ್ಥಿತ ಹುನ್ನಾರವಾಗುತ್ತಿದೆ, ನಿಜವಾದ ವಿಷಯವನ್ನು ಜಗತ್ತಿಗೆ ತಿಳಿಸಬೇಕು ಎಂಬ ಪ್ರಾಮಾಣಿಕ ಪತ್ರಕರ್ತರೂ ಕೂಡ ‘ಮೋದಿ ಪ್ರಿಯ’ ಬಂಡವಾಳಶಾಹಿ ಮಾಲೀಕರಿಂದಾಗಿ ಅಸಹಾಯಕ ಮೌನ ತಳೆಯಬೇಕಿದೆ ಎಂದು ಸಾಯಿನಾಥ್ ಮಾರ್ಮಿಕವಾಗಿ ನುಡಿದರು.

ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಬೇಕಾದ ಹೊಣೆ ಪತ್ರಕರ್ತರ ಸಂಧರ್ಭಗಳಲ್ಲಿ ಸಂಪಾದಕೀಯಗಳ ಜವಾಬ್ದಾರಿ.  ಧೈರ್ಯವಾಗಿ ಸಂಪಾದಕೀಯ ಮುಖಾಂತರ ಸಮಾಜದ ಒಳಿತಿಗಾಗಿ ಧ್ವನಿ ಎತ್ತಬೇಕು. ಹೀಗಾಗದೇ ಇರುವುದು ದುರಂತ. ಫೆ.12ರಂದು ಹರಿಯಾಣದಲ್ಲಿ ರೈತರ ಮೇಲೆ ಡೋಣ್ ಮೂಲಕ ಅಶ್ರವಾಯು ಸಿಡಿಸಿದ್ದನ್ನೂ ಕೂಡ ಒಂದೇ ಒಂದು ಪತ್ರಿಕೆ ಸಂಪಾದಕೀಯದ ಮೂಲಕ ಖಂಡಿಸಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಕೆ.ರವಿ ಮಾತನಾಡಿ, ವಾಣಿಜ್ಯಕರಣ ಮತ್ತು ಖಾಸಗೀಕರಣ ಭರಾಟೆಯಲ್ಲಿ ಪತ್ರಕರ್ತರು ಇಡೀ ಸಮಾಜದ ರಕ್ಷಣೆ ಮಾಡುತ್ತಾರೆ. ಆದರೆ, ಪತ್ರಕರ್ತರಿಗೆ ಸೇವಾ ಭದ್ರತೆಯೇ ಇಲ್ಲದಂತಾಗಿದೆ. ಆಗಂತ ಹಣವೇ ಬೇಡ ಎಂದು ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಹೊಣೆಗಾರಿಕೆ ಇರುವ ಲಾಭದಾಯಕ ಉದ್ಯಮ ಇರಬೇಕು. ಜನರ ಹಿತ ಕಾಪಾಡುವುದಕ್ಕೆ ಮೊದಲ ಆದ್ಯತೆ ನೀಡುವುದು ಪತ್ರಿಕಾ ಧರ್ಮದ ಮೊದಲ ಆದ್ಯತೆ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಿ. ಲೋಕೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಎಸ್‌ಆರ್‌ಎಸ್ ಸಮೂಹ ಸಂಸ್ಥೆ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಇತರರು ಭಾಗವಹಿಸಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X