ತುಮಕೂರು | ಭಾರತ ಸಂವಿಧಾನ ರಕ್ಷಣೆಗಾಗಿ ಸ್ಲಂ ಜನರ ಮತ; ಚುನಾವಣೆಗೆ ಸ್ಲಂ ಜನರ ಪ್ರಣಾಳಿಕೆ ಬಿಡುಗಡೆ

Date:

Advertisements

ಲೋಕಸಭಾ ಚುನವಾಣೆ ಪೂರಕವಾಗಿ ಸ್ಲಂ ಜನಾಂದೋಲನ ಕರ್ನಾಟಕ 16 ಕ್ಷೇತ್ರಗಳಲ್ಲಿ ಸ್ಲಂ ಜನರಲ್ಲಿ ರಾಜಕೀಯ ಜಾಗೃತಿ ಜಾಥವನ್ನು ಕೈಗೊಳ್ಳುತ್ತಿದ್ದು ಏ.2ರಂದು ತುಮಕೂರಿನ ಜನಚಳುವಳಿ ಕೇಂದ್ರದಲ್ಲಿ ಸ್ಲಂ ಜನರ ಪ್ರಣಾಳಿಕೆಯನ್ನು ಕರ್ನಾಟಕದ ಗದ್ದರ್ ಅಂಬಣ್ಣ ಅರೋಲಿಕರ್ ಮತ್ತು ಹಿರಿಯ ಚಿಂತಕ ಕೆ.ದೊರೈರಾಜ್ ಬಿಡುಗಡೆಗೊಳಿಸಿದರು.

ಕರ್ನಾಟಕ ಗದ್ದರ್ ಮತ್ತು ಹಾಡುಗಾರರಾದ ಅಂಬಣ್ಣ ಅರೋಲಿಕರ್  ಮಾತನಾಡಿ, ಸಂವಿಧಾನ ಕಳೆದ 10 ವರ್ಷಗಳಲ್ಲಿ ಮೋದಿಯ ಆರ್‌ಎಸ್‌ಎಸ್ ಆಡಳಿತ ನಿರ್ಜೀವಗೊಳಿಸಿದೆ. ಹಾಗಾಗಿ ಪರಿಶಿಷ್ಟ ಜಾತಿಯ 101 ಸಮುದಾಯಗಳು, ಸ್ಲಂ ನಿವಾಸಿಗಳು ಮತ್ತು ಅಲೆಮಾರಿ ಸಮುದಾಯಗಳು 10 ವರ್ಷಗಳ ಮೋದಿ ಆಡಳಿತ ಸಾಕು ಮಾಡಲು ಮುಂದಿನ ಅಪಾಯ ತಪ್ಪಿಸಲು, ಈ ಚುನಾವಣೆಯಲ್ಲಿ ಬಿಜೆಪಿ ಹೊರತುಪಡಿಸಿ ಬೇಷರತ್ತಾಗಿ ಕಾಂಗ್ರೆಸ್‌ನ್ನು ಬೆಂಬಲಿಸಬೇಕಾಗಿದೆ ಎಂದರು.

ಸಂವಿಧಾನ ಉಳಿದರೆ ಮಾತ್ರ ಮೂಲಭೂತ ಹಕ್ಕುಗಳಲು ಉಳಿಯುತ್ತವೆ. ಆಗ ಮಾತ್ರ ಸ್ಲಂ ಜನರ ಪ್ರಣಾಳಿಕೆಯಲ್ಲಿರುವ ವಸತಿ ಹಕ್ಕು ಕಾಯಿದೆ, ನಗರ ಲ್ಯಾಂಡ್‌ಬ್ಯಾಂಕ್ ನೀತಿ, ರೈಟ್ ಟು ಹೆಲ್ತ್, ರಾಷ್ಟ್ರೀಯ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲು ಸಾಧ್ಯ. ಹಾಗಾಗಿ ಎಲ್ಲಾ ವಂಚಿತ ಸಮುದಾಯಗಳು ಆಶ್ರಯ, ಆರೋಗ್ಯ, ಆಹಾರ, ಶಿಕ್ಷಣ ಮತ್ತು ಉದ್ಯೋಗ ಖಾತ್ರಿಗಾಗಿ ಮತ ಚಲಾಯಿಸುವ ಮೂಲಕ ಸನಾತನವಾದಿಗಳಿಗೆ ಉತ್ತರ ನೀಡಬೇಕು, ಈ ಆಶಯದಲ್ಲಿ ಸ್ಲಂ ಜನಾಂದೋಲನ ಸಂಘಟನೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮತ ಜಾಗೃತಿ ಜಾಥ ಸ್ಲಂ ಜನರಲ್ಲಿ ರಾಜಕೀಯ ಚಿಂತನೆ ರೂಪಿಸಲು ಸಾಧ್ಯವಾಗುತ್ತದೆ ಎಂದರು.

Advertisements

ವಿಶ್ವಗುರುವಿನ ವಿಕಸಿತ ಗಣಿತ ಬಡವರ ಆದಾಯ ಕಡಿಮೆಯಾದರು ಖರ್ಚು ಜಾಸ್ತಿ ಮಾಡುತ್ತಿದ್ದಾರೆ, ಎಂಬ ಮೋದಿ ಗಣಿತ ಬಡವರ ವಿರೋಧಿಯಾಗಿದ್ದು ಸಂವಿಧಾನದ ಹಕ್ಕುಗಳು ಖಾಸಗೀಕರಣವಾಗಿ ಕರ್ತವ್ಯಗಳು ರಾಷ್ಟ್ರೀಕರಣವಾಗುತ್ತಿವೆ ಎಂದು ಹಿರಿಯ ಚಿಂತಕರಾದ ಕೆ.ದೊರೈರಾಜ್ ಹೇಳಿದರು.

ಹೋರಾಟಗಾರರು ತುರ್ತಾಗಿ ಮಾಡಬೇಕಿರುವ ಕೆಲಸ ಈ ಚುನಾವಣೆಯಲ್ಲಿ ನಮ್ಮ ಉಳಿವಿಗಾಗಿ ನಮ್ಮ ಸುತ್ತುಮುತ್ತಲ ಜನರನ್ನು ಜಾಗೃತಿಗೊಳಿಸಿ ಬಿಜೆಪಿಗೆ ವೋಟು ಹಾಕುವುದನ್ನು ತಪ್ಪಿಸಬೇಕಿದೆ. ಬಿಜೆಪಿ ಸೋತರೆ ಮಾತ್ರ ಸಂವಿಧಾನ ರಕ್ಷಣೆಯಾಗುತ್ತದೆ. ಸಾಮಾನ್ಯ ಜನರು ಉಳಿಯುತ್ತೇವೆ. ಇತ್ತೀಚೆಗೆ ಸ್ಲಂಗಳಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ನುಸುಳಿ ದ್ವೇಷ ಬಿತ್ತುತ್ತಿವೆ ಸಣ್ಣಪುಟ್ಟ ಮುಖಂಡರನ್ನು ಹಣಬಲದಿಂದ ವಶಪಡಿಸಿಕೊಂಡು ನಮ್ಮ ಕಣ್ಣನ್ನು ನಾವೆ ಚುಚ್ಚಿಕೊಳ್ಳುವಂತೆ ಮಾಡುತ್ತಿದ್ದಾರೆ ಹಾಗಾಗಿ ನಾವು ತಾಳ್ಮೆ ಕಳೆದುಕೊಳ್ಳದೇ ನಮ್ಮ ಕಾಲಕ್ಕಾಗಿ ಕಾಯಬೇಕು ಎಂದರು.

ಸ್ಲಂ ಜನಾಂದೋಲನ ಕರ್ನಾಟಕ ಪ್ರತೀ ಚುನವಾಣೆಯಲ್ಲಿ ಸ್ಲಂ ಜನರನ್ನು ಜಾಗೃತಗೊಳಿಸುವ ಆಂದೋಲನಗಳನ್ನು ರೂಪಿಸುತ್ತಿದ್ದು ಸಂಸತ್ ಸದಸ್ಯರ ನಿಧಿಯಲ್ಲಿ ಸ್ಲಂಗಳಿಗೆ ಹಣ ಮೀಸಲಿಡುವ ದೇಶಾದ್ಯಂತ ಎಸ್‌ಸಿ/ಎಸ್‌ಟಿ ಜನಸಂಖ್ಯೆಗನುಗುಣವಾಗಿ ಬಜೆಟ್‌ನಲ್ಲಿ ಹಣ ಮೀಸಲಿಡುವ ಕಾಯಿದೆ ಜಾರಿಗೆ ಮತ್ತು ಜಾತಿ ಜನಗಣತಿ ಸಮಾನ ಶಿಕ್ಷಣ ಒತ್ತಾಯಿಸುತ್ತಿರುವುದು ಸಂಸತ್‌ನ ನೀತಿಗಳ ರೂಪಿಸುವ ಉದ್ದೇಶದ ಭಾಗವಾಗಿದ್ದು, ಈ ಆಯಾಮದಲ್ಲಿ ನಮ್ಮ ಪ್ರಶ್ನೆಗಳು ಇರಬೇಕಾಗುತ್ತದೆ, ಬಡವರ ಆದಾಯ ಕಡಿಮೆಯಾದರು, ಖರ್ಚು ಜಾಸ್ತಿ ಮಾಡುತ್ತಿದ್ದಾರೆ ಎಂಬ ಮೋದಿ ಗಣಿತ ವಿಶ್ವಗುರುವಿನ ವಿಕಸಿತ ಗಣಿತವಲ್ಲವೇ ಎಂದು ಕುಟುಕಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ, 2014ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಕೂಟದ ಮೋದಿ ಸರ್ಕಾರದಲ್ಲಿ ಸ್ಲಂ ನಿವಾಸಿಗಳಿಗೆ ಸಿಕ್ಕಿದ್ದು ಮಾತ್ರ ಶೂನ್ಯ. ವಸತಿ ಸಬ್ಸಿಡಿಯನ್ನು 1.5 ಲಕ್ಷಕ್ಕೆ ಇಳಿಸಿ ಇದರಲ್ಲಿ 1.38 ಲಕ್ಷ ಜಿಎಸ್‌ಟಿ ಹಿಂಪಡೆದು 12 ಸಾವಿರ ರೂಪಾಯಿಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿ ಪ್ರಧಾನಮಂತ್ರಿ ಆವಾಸ್ ಯೋಜನೆ ಪಿಎಂಎವೈ ಸರ್ವರಿಗೂ ಸೂರು ಬಡಜನ ವಿರೋಧಿಗೆ ಸಕ್ಷಿಯಾಗಿದೆ. ಕಲ್ಯಾಣ ರಾಜ್ಯಗಳ ಪರಿಕಲ್ಪನೆಯಿಂದ ಮೋದಿ ಗ್ಯಾರಂಟಿ ಸರ್ವಾಧಿಕಾರದತ್ತ ಹೋಗುವ ಸಂವಿಧಾನ ವಿರೋಧಿ ಮತ್ತು ಕಾರ್ಪೊರೇಟ್ ಕಂಪನಿಗಳ ಕೈಗೊಂಬೆಯಾಗಿದೆ. ಸ್ಲಂ ಜನರ ಭೂಮಿಯನ್ನು ಸಾರ್ವಜನಿಕ ಸಂಪನ್ಮೂಲ ಎಂದು ಘೊಷಿಸಿದ್ದು ಬಿಟ್ಟರೆ ಬಡತನ ನಿರ್ಮೂಲನೆ ಅಥವಾ ಬಡವರ ಆದಾಯವನ್ನು ದ್ವಿಗುಣಗೊಳಿಸಲು ಯಾವುದೇ ಯೋಜನೆಗಳನ್ನು ಈ 10 ವರ್ಷಗಳಲ್ಲಿ ಜಾರಿಗೆ ತರಲಿಲ್ಲ ಎಂದರು.

ರಾಜ್ಯದ 16 ಲೋಕಪಸಭಾ ಕ್ಷೇತ್ರಗಳಲ್ಲಿ ಸ್ಲಂ ಜನರ ಮತ ಜಾಗೃತಿ ಜಾಥಾ ಇಂದಿನಿಂದ ಪ್ರಾರಂಭವಾಗಿದ್ದು 1500 ಕೊಳಚೆ ಪ್ರದೇಶಗಳಲ್ಲಿ 2 ಲಕ್ಷ ಜನರನ್ನು ತಲುಪುವ ಗುರಿ ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಚರಕ ಆಸ್ಪತ್ರೆಯ ಡಾ.ಬಸವರಾಜು, ಹಿರಿಯ ದಸಂಸ ಮುಖಂಡರಾದ ನರಸೀಯಪ್ಪ, ರಾಜ್ಯ ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ಬಸವರಾಜ್ ಕೌತಾಳ್, ಡಾ.ಅರುಂಧತಿ, ತೃತೀಯ ಲಿಂಗಿಗಳ ಮುಖಂಡರಾದ ದೀಪಿಕಾ, ಯುವಮುಖಂಡರಾದ ಕೊಟ್ಟಶಂಕರ್, ಪಿ.ಎನ್. ರಾಮಯ್ಯ, ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್, ಉಪಸ್ಥಿತರಿದ್ದರು ಸ್ವಾಗತವನ್ನು ಅರುಣ್, ನಿರೂಪಣೆಯನ್ನು ಟಿ.ಸಿ ರಾಮಯ್ಯ, ವಂದನಾರ್ಪಣೆಯನ್ನು ಕೃಷ್ಣಮೂರ್ತಿ ನೆರವೇರಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X