‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ಯಾರು’ ಎಂಬ ಪ್ರಶ್ನೆ ಅಪ್ರಸ್ತುತ ಎಂದು ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರ್ ಹೇಳಿದ್ದಾರೆ.
ಈ ಬಗ್ಗೆ ಶಶಿ ತರೂರ್ ಎಕ್ಸ್ (ಟ್ವೀಟ್) ಮಾಡಿದ್ದಾರೆ. “ನರೇಂದ್ರ ಮೋದಿಗೆ ಪರ್ಯಾಯ ಯಾರೆಂದು ಮತ್ತೆ ಪತ್ರಕರ್ತರೊಬ್ಬರು ನನ್ನನ್ನು ಪ್ರಶ್ನಿಸಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ ಇಂತಹ ಪ್ರಶ್ನೆಯೇ ಅಪ್ರಸ್ತುತ. ಅಧ್ಯಕ್ಷೀಯ ವ್ಯವಸ್ಥೆಯಂತೆ ನಾವು ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡುವುದಿಲ್ಲ. ಭಾರತದ ವೈವಿಧ್ಯತೆ, ಬಹುತ್ವ ಮತ್ತು ಬೆಳವಣಿಗೆಯನ್ನು ಕಾಪಾಡುವ ಪಕ್ಷವನ್ನು ಅಥವಾ ಪಕ್ಷಗಳ ಒಕ್ಕೂಟವನ್ನು ಆಯ್ಕೆ ಮಾಡುತ್ತೇವೆ” ಎಂದು ಹೇಳಿದ್ದಾರೆ.
Yet again a journalist has asked me to identify an individual who is the alternative to Mr Modi.
The question is irrelevant in the Parliamentary system. We are not electing an individual (as In a presidential system), but a party, or coalition of parties, that represents a set…
— Shashi Tharoor (@ShashiTharoor) April 3, 2024
“ಪ್ರಧಾನಿ ಮೋದಿ ಅವರಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ವೈಯಕ್ತಿಕ ಅಹಂಕಾರವಿಲ್ಲದ ಅನುಭವಿ, ಸಮರ್ಥ, ವೈವಿಧ್ಯತೆ ಹೊಂದಿರುವ ಭಾರತೀಯ ನಾಯಕರ ಗುಂಪು ಪರ್ಯಾಯವಾಗಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸಿಎಎ ರದ್ದು: ಶಶಿ ತರೂರ್
“ಈ ಗುಂಪು ಯಾವ ನಿರ್ದಿಷ್ಟ ವ್ಯಕ್ತಿಯನ್ನು ಪ್ರಧಾನಿಯಾಗಲು ಆಯ್ಕೆ ಮಾಡುತ್ತಾರೆ ಎಂಬುವುದು ಬೇರೆ ವಿಚಾರ. ಆದರೆ ನಮ್ಮ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯನ್ನು ರಕ್ಷಿಸುವುದು ಮೊದಲು ಬರುತ್ತದೆ” ಎಂದು ಹೇಳಿದರು.
ಕೇರಳದ ತಿರುವನಂತಪುರಂನಲ್ಲಿ ಮೂರು ಬಾರಿ ಸಂಸದರಾಗಿರುವ ಶಶಿ ತರೂರ್ ಅವರು ಅದೇ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಕಣಕ್ಕಿಳಿದಿದ್ದಾರೆ. ಶಶಿ ತರೂರ್ ಎದುರು ಬಿಜೆಪಿಯಿಂದ ಕೇಂದ್ರ ಸಚಿತ ರಾಜೀವ್ ಚಂದ್ರಶೇಖರನ್ ಮತ್ತು ಎಡಪಕ್ಷದಿಂದ ಪನ್ಯನ್ ರವಿಂದ್ರನ್ ಸ್ಪರ್ಧಿಸಲಿದ್ದಾರೆ.