ಹಿಂದುತ್ವದ ಕೋಟೆ ಮಹಾರಾಷ್ಟ್ರದಲ್ಲೇ ಉಳಿದುಕೊಂಡಿಲ್ಲ, ಸಾವರ್ಕರ್ ನಿರ್ಮಿಸಿದ ಹಿಂದುತ್ವದ ಕೋಟೆಯೇ ಪುಡಿಯಾಗಿದೆ. ಹಿಂದೆ ರಾಜ ಮಹಾರಾಜರು ಕಟ್ಟಿದ್ದ ಕೋಟೆಗಳೂ ಪುಡಿಯಾಗಿವೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಗೆದ್ದಿರುವುದು ಹಿಂದುತ್ವದ ಕೋಟೆಯಿಂದಲ್ಲ, ಕಾರಣಾಂತರಗಳಿಂದ ಗೆದ್ದಿದೆ” ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು.
ಮಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದರು.
ದೇಶ ವಿಭಜನೆ ಹೇಳಿಕೆ ನೀಡಿದವರಿಗೆ ಟಿಕೆಟ್ ಎಂಬ ಅಮಿತ್ ಶಾ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, “ಇಂದಿರಾ ಗಾಂಧಿ ಕಾಲದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ವಿಭಜನೆಯಾಗಿ ಬಾಂಗ್ಲಾದೇಶವನ್ನು ಪ್ರತ್ಯೇಕ ದೇಶ ಮಾಡಿದ್ದು ಇಂದಿರಾಗಾಂಧಿ. ಇಲ್ಲಿ ಹೇಳಿಕೆ ಕೊಟ್ಟರೆ ಎಲ್ಲಿ ದೇಶ ವಿಭಜನೆಯಾಗುತ್ತದೆ. ಮೋದಿಯವರು ಕಚ್ಚತೀವು ದ್ವೀಪವನ್ನು ಬಿಟ್ಟುಕೊಟ್ಟ ಹೇಳಿಕೆ ನೀಡಿದ್ದಾರೆ. ಅದು ಶ್ರೀಲಂಕಾದ ಭಾಗವೇ ಆಗಿತ್ತು ಅನ್ನೋದು ಅವರಿಗೆ ಗೊತ್ತಿಲ್ಲವೇ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಬಿಜೆಪಿ ಗ್ಯಾರಂಟಿಗೆ ಬೆಲೆ ಇಲ್ಲ, ಅಮಿತ್ ಶಾ ಸುಳ್ಳು ಹೇಳಿಕೊಂಡು ಹೋಗಿದ್ದಾರೆ: ದಿನೇಶ್ ಗುಂಡೂರಾವ್
“ಹಿಂದೆ ಸಿಕ್ಕಿಂ ದೇಶ ಇದ್ದುದನ್ನು ನಮ್ಮ ಜತೆಗೆ ಸೇರಿಸಿದ್ದು ಕಾಂಗ್ರೆಸ್, ಈಗ ಎರಡು ಸಾವಿರ ಚದರ ಕಿಮೀ ಭೂಮಿ ಚೀನಾ ಪಾಲಾಗಿದೆ. ಇದನ್ನು ಹೇಳಿಕೊಂಡಿದ್ದು ಬಿಜೆಪಿಯವರೇ, ನಾವೇನೂ ಹೇಳಿದ್ದಲ್ಲ. ಚೀನಾ ಅತಿಕ್ರಮಿಸಿದ್ದನ್ನು ಮರಳಿ ಯಾವಾಗ ತರುತ್ತಾರೆಂದು ಹೇಳಲಿ, ದೇಶವನ್ನು ಉಳಿಸಿಕೊಳ್ಳುವಂಥದ್ದು ಸರ್ಕಾರದ ಕೈಲಿರುತ್ತದೆ” ಎಂದು ಬಿ ಕೆ ಹರಿಪ್ರಸಾದ್ ಹೇಳಿದರು.
