ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಮುಖಂಡರು ಆ ಪಕ್ಷದಿಂದ ಈ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಲೇ ಇದೆ. ಈ ನಡುವೆ ಕಾಂಗ್ರೆಸ್ನಲ್ಲಿದ್ದುಕೊಂಡು ಎಲ್ಲ ಅಧಿಕಾರಗಳನ್ನು ಅನುಭವಿಸಿದವರೂ ಕೂಡ ಕಾಂಗ್ರೆಸ್ಗೆ ರಾಜೀನಾಮೆ ನೀಡಿ, ಕೆಲವೇ ಗಂಟೆಗಳಲ್ಲಿ ಬಿಜೆಪಿ ಸೇರುವ ಮೂಲಕ ಸುದ್ದಿಯಾಗುತ್ತಿದ್ದಾರೆ.
24 ಗಂಟೆಗಳ ಹಿಂದೆ ಪ್ರಧಾನಿ ಮೋದಿಯವರ ಆಡಳಿತವನ್ನು ಟೀಕಿಸುತ್ತಿದ್ದವರು, ರಾಹುಲ್ ಗಾಂಧಿಗೆ ಬೆಂಬಲ ಸೂಚಿಸುತ್ತಿದ್ದವರು ದಿನ ಬೆಳಗಾಗುವುದರೊಳಗೆ ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ ಅದಕ್ಕೆ ಪೂರಕ ಎಂಬಂತಹ ಘಟನೆಗಳು ಕೂಡ ನಡೆಯುತ್ತಿದೆ.
ಬಾಕ್ಸರ್ ವಿಜೇಂದರ್ ಸಿಂಗ್ ಹಾಗೂ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರ ಗೌರವ್ ವಲ್ಲಭ್ ಅವರು ಬಿಜೆಪಿ ಸೇರಿರುವುದು ಈಗ ಬಹಳಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಈ ನಡುವೆ ಪ್ರಧಾನಿ ಮೋದಿಯವರ ಆಡಳಿತ ವೈಫಲ್ಯಗಳ ಬಗ್ಗೆ ಬಹಳ ಕಟುವಾಗಿ ಟೀಕಿಸುತ್ತಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಬಿಜೆಪಿ ಸೇರುತ್ತಿದ್ದಾರೆ ಎಂಬ ವದಂತಿ ಹರಡಿತ್ತು.
Eminent actor Prakash Raj will join BJP today at 3 pm.
— THE SKIN DOCTOR (@theskindoctor13) April 4, 2024
ದೇಶದ ಹಲವು ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವ ಹಿನ್ನೆಲೆಯಲ್ಲಿ ಅದನ್ನು ವ್ಯಂಗ್ಯವಾಡುವ ಉದ್ದೇಶದಿಂದ ‘ಎಕ್ಸ್’ ಖಾತೆಯಲ್ಲಿ THE SKIN DOCTOR ಎಂಬ ಬಳಕೆದಾರರೋರ್ವರು, “ದೇಶದ ಖ್ಯಾತ ನಟ ಪ್ರಕಾಶ್ ರಾಜ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕಾಡ್ಗಿಚ್ಚಿನಂತೆ ವೈರಲಾಗಿದೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಗೌರವ್ ವಲ್ಲಭ್ ಬಿಜೆಪಿ ಸೇರ್ಪಡೆ
ಈ ಪೋಸ್ಟ್ಗೆ ಹಲವು ಮಂದಿ ಕಮೆಂಟ್ ಮಾಡಿ, “ಇದು ಅಸಾಧ್ಯ. ಆದರೂ ಈಗಿನ ಸಂದರ್ಭದಲ್ಲಿ ಯಾವುದನ್ನೂ ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಮೋದಿ ಹೇ ತೋ ಮುಮ್ಕಿನ್ ಹೈ” ಎಂದೆಲ್ಲ ತರಹೇವಾರಿ ಕಮೆಂಟ್ ಹಾಕಿದ್ದಾರೆ.
I guess they tried 😂😂😂 must have realised they were not rich enough (ideologically) to buy me.. 😝😝😝.. what do you think friends #justasking pic.twitter.com/CCwz5J6pOU
— Prakash Raj (@prakashraaj) April 4, 2024
ಈ ವದಂತಿ ಹರಡುತ್ತಿರುವ ಮಧ್ಯೆಯೇ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಾಕಿರುವ ಬಹುಭಾಷಾ ನಟ ಪ್ರಕಾಶ್ ರಾಜ್, “ಬಿಜೆಪಿಯವರು ನನ್ನನ್ನು ಖರೀದಿಸುವಷ್ಟು ಸೈದ್ಧಾಂತಿಕವಾಗಿ ಶ್ರೀಮಂತರಲ್ಲ ಎಂದು ಅವರು ಅರಿತುಕೊಂಡಿರಬೇಕು ಎಂದು ನಾನು ಭಾವಿಸುತ್ತೇನೆ. ನೀವು ಏನು ಯೋಚಿಸುತ್ತೀರಿ ಸ್ನೇಹಿತರೇ” ಎಂದು ಹೇಳಿ, ನಗುವಿನ ಇಮೋಜಿಯನ್ನು ಬಳಸಿದ್ದಾರೆ. ಆ ಮೂಲಕ ಬಿಜೆಪಿಯವರಿಗೆ ನನ್ನನ್ನು ಖರೀದಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ನುಡಿಗಳಲ್ಲಿ ತಿಳಿಸಿದ್ದಾರೆ.
Unlike Boxer Vijendra, ab Prakash Raj ji raat ko sote nai. https://t.co/JG9e6gie1B pic.twitter.com/cjddnZMgFA
— Smita Prakash (@smitaprakash) April 4, 2024
