ಲೋಕಸಭೆ ಚುನಾವಣೆಯಲ್ಲಿ ಪ್ರಸ್ತುತ ಸಂಸದರಾಗಿರುವ ವಯನಾಡು ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ದೇಶವು ಪ್ರಸ್ತುತ ನಿರ್ಣಾಯಕ ಘಟ್ಟದಲ್ಲಿ ನಿಂತಿದೆ” ಎಂದು ಹೇಳಿದರು.
ಗುರುವಾರ ಟ್ವೀಟ್ (ಎಕ್ಸ್) ಮಾಡಿರುವ ರಾಹುಲ್ ಗಾಂಧಿ, “ಪ್ರತಿಯೊಂದು ವಿಭಾಗವು ‘ದೇಶವನ್ನು ಕಟ್ಟಿದವರು’ ಮತ್ತು ‘ದೇಶವನ್ನು ಹಾಳು ಮಾಡುವವರ’ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕಾಗುತ್ತದೆ” ಎಂದು ಅಭಿಪ್ರಾಯಿಸಿದರು.
देश इस वक्त निर्णायक मोड़ पर खड़ा है!
हर वर्ग को ‘देश बनाने’ और ‘देश बिगाड़ने’ वालों के बीच का फर्क पहचानना होगा।
कांग्रेस और INDIA मतलब:
– युवाओं की पहली नौकरी पक्की
– किसानों को MSP की गारंटी
– हर गरीब महिला लखपति
– श्रमिक को न्यूनतम 400 रू प्रतिदिन
– जातिगत गिनती और…— Rahul Gandhi (@RahulGandhi) April 4, 2024
“ಕಾಂಗ್ರೆಸ್ ಮತ್ತು ‘ಇಂಡಿಯಾ’ ಬಣವು ಅಧಿಕಾರದಲ್ಲಿ ಇದ್ದಾಗ ಯುವಕರಿಗೆ ಮೊದಲು ಉದ್ಯೋಗ ಖಾತರಿ, ರೈತರಿಗೆ ಎಂಎಸ್‌ಪಿ ಖಾತರಿ ನೀಡುತ್ತದೆ. ಪ್ರತಿಯೊಬ್ಬ ಬಡ ಮಹಿಳೆಯು ಲಕ್ಷಾಧಿಪತಿ ಆಗುತ್ತಾರೆ. ಕಾರ್ಮಿಕರಿಗೆ ದಿನಕ್ಕೆ ಕನಿಷ್ಠ 400 ರೂಪಾಯಿ ಸಿಗಲಿದೆ. ಜಾತಿ ಗಣತಿ ಮತ್ತು ಆರ್ಥಿಕ ಸಮೀಕ್ಷೆ ನಡೆಸಲಾಗುತ್ತದೆ. ಸಂವಿಧಾನ ಮತ್ತು ನಾಗರಿಕರ ಹಕ್ಕುಗಳು ಸುರಕ್ಷಿತವಾಗಿರಿಸುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಇದನ್ನು ಓದಿದ್ದೀರಾ? ಇವಿಎಂಗಳು, ಮ್ಯಾಚ್ ಫಿಕ್ಸಿಂಗ್ ಇಲ್ಲದೆ ಬಿಜೆಪಿ 180 ಸೀಟು ದಾಟುವುದಿಲ್ಲ: ರಾಹುಲ್ ಗಾಂಧಿ
“ಬಿಜೆಪಿ ಅಧಿಕಾರಲ್ಲಿದೆ ಎಂದರೆ ನಿರುದ್ಯೋಗ ದೃಢಪಡಿಸುವುದು, ರೈತರ ಮೇಲೆ ಸಾಲದ ಹೊರೆ ಹಾಕಲಾಗುತ್ತದೆ, ಅಸುರಕ್ಷಿತ ಮತ್ತು ಹಕ್ಕುರಹಿತ ಮಹಿಳೆಯರು ಇರುತ್ತಾರೆ, ಬಲವಂತದ ಮತ್ತು ಅಸಹಾಯಕ ಕಾರ್ಮಿಕರು ಇರುತ್ತಾರೆ, ಹಿಂದುಳಿದವರ ಮೇಲೆ ತಾರತಮ್ಯ ಮತ್ತು ಶೋಷಣೆ ನಡೆಯುತ್ತದೆ, ಸರ್ವಾಧಿಕಾರ ಮತ್ತು ಬರೀ ನೆಪಕ್ಕೆ ಪ್ರಜಾಪ್ರಭುತ್ವ ಇರುತ್ತದೆ” ಎಂದು ಆರೋಪಿಸಿದರು.
“ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಆಲೋಚಿಸಿ, ಅರ್ಥಮಾಡಿಕೊಳ್ಳಿ ಮತ್ತು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ” ಎಂದು ತಿಳಿಸಿದರು.