ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಲಕ್ಕಸಂದ್ರ ಮೇಟ್ರೋ ನಿಲ್ದಾಣ ಕಾಮಗಾರಿ ಹಿನ್ನಲೆ, ಮೈಕೋ ಬಂಡೆ ಸಿಗ್ನಲ್‌ನಿಂದ ಅನೇಪಾಳ್ಯ ಜಂಕ್ಷನ್‌ವರೆಗಿನ ರಸ್ತೆಯಲ್ಲಿ ಏಪ್ರಿಲ್ 5ರಿಂದ ಒಂದು ವರ್ಷಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ನಗರ ಸಂಚಾರ ಪೊಲೀಸ್ ತಿಳಿಸಿದೆ.
ಬನ್ನೇರುಘಟ್ಟ ರಸ್ತೆಯ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಏಪ್ರಿಲ್ 5 ರಿಂದ ಒಂದು ವರ್ಷದವರೆಗೆ ಮುಚ್ಚಲಾಗುತ್ತಿದೆ. ಹಾಗಾಗಿ, ತಾತ್ಕಾಲಿಕ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.
ಸಂಚಾರ ಮಾರ್ಗ ಬದಲಾವಣೆ
ಡೈರಿ ಸರ್ಕಲ್ ಕಡೆಯಿಂದ ಆನೆಪಾಳ್ಯ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಮೈಕೋಬಂಡೆ ಸಿಗ್ನಲ್‌ನಲ್ಲಿ ಬಲ ತಿರುವು ಪಡೆದು ನ್ಯೂ ಮೈಕೋ ಲಿಂಕ್ ರಸ್ತೆ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ, ಎಡ ತಿರುವು ಪಡೆದು ಆನೇಪಾಳ್ಯ ಜಂಕ್ಷನ್ ಕಡೆಗೆ ತೆರಳುವುದು.
ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಕಡೆಗೆ ಚಲಿಸುವ ವಾಹನಗಳು ಮೊದಲಿನಂತೆಯೇ, ಆನೆಪಾಳ್ಯ ಜಂಕ್ಷನ್ ಕಡೆಯಿಂದ ಡೈರಿ ಸರ್ಕಲ್ ಕಡೆಗೆ ಸಾಗಬಹುದು.
‘Traffic Advisory’ /’ಸಂಚಾರ ಸಲಹೆ’ pic.twitter.com/ZgHG9O7aRz
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) April 4, 2024
ಡೈರಿ ಸರ್ಕಲ್ ಕಡೆಯಿಂದ, ಮೈಕೋ ಬಂಡೆ ಸಿಗ್ನಲ್ ಕಡೆಯಿಂದ ವಿಲ್ಸನ್ ಗಾರ್ಡನ್, ಶಾಂತಿನಗರ ಕಡೆಗೆ ಸಂಚರಿಸುವ ವಾಹನಗಳು ಮೈಕೋಬಂಡೆ ಸಿಗ್ನಲ್ ದಾಟಿ ಮುಂದೆ ಹೋಗಿ ವಿಲ್ಸನ್ ಗಾರ್ಡನ್ 7ನೇ ಮುಖ್ಯ ರಸ್ತೆ( ಚಿನ್ನಯ್ಯನ ಪಾಳ್ಯ ಕ್ರಾಸ್)ಯಲ್ಲಿ ಎಡ ತಿರುವು ಪಡೆದು ವಿಲ್ಸನ್ ಗಾರ್ಡನ್ ಶಾಂತಿನಗರ ಕಡೆಗೆ ಸಂಚರಿಸಬಹುದು.
ಲಕ್ಕಸಂದ್ರ ಮೆಟ್ರೋ ನಿಲ್ದಾಣವು 21.26 ಕಿ.ಮೀ ಪಿಂಕ್ ಲೈನ್‌ನ ಭಾಗವಾಗಿದ್ದು, ಮುಂದಿನ ವರ್ಷ ತೆರೆಯಲಿದೆ.
ಈ ಸುದ್ದಿ ಓದಿದ್ದೀರಾ? ತೇಜಸ್ವಿ ಸೂರ್ಯ ನಾಮಪತ್ರ ಸಮಾವೇಶದ ವೇಳೆ ‘ದ್ವೇಷ ಪಂಚರ್ ಮಾಡಿ’ ಬ್ಯಾನರ್ ಪ್ರದರ್ಶಿಸಿದ ಸಾಮಾಜಿಕ ಕಾರ್ಯಕರ್ತರು
ವಾರಂತ್ಯ ರಜೆ ದಿನ ಸಂಚಾರ ದಟ್ಟಣೆ
ವಾರಾಂತ್ಯ ರಜೆ, ಸರ್ಕಾರಿ ರಜೆ ಹಾಗೂ ಹಬ್ಬ ಇರುವುದರಿಂದ ಸಾರ್ವಜನಿಕರು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಹೋಗುವ ಕಾರಣ ಏ.5 ಮತ್ತು 6ರಂದು ಓ ಎಂ ರೋಡ್, ಟಿ.ಸಿ ಪಾಳ್ಯ, ಭಟ್ಟರಹಳ್ಳಿ ಜಂಕ್ಷನ್ ಸುತ್ತಮುತ್ತ ಸಂಚಾರದಟ್ಟಣೆ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದೆ.
ಏಕ ವಚನ ಬಹುವಚನ ಸರಿಯಾಗಿ ಪ್ರಯೋಗಿಸಬೇಕು, ಒಂದು ವರ್ಷಗಳ ಕಾಲ ಅಂದ್ರೆ ಏನ್ಸಾರ್, ಯಾರ್ಸಾರ್ ತಮಿಗೆ ಕನ್ನಡ ಕಲಿಸಿದ್ದು!?