ಬೆಂಗಳೂರಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೋಲೆ ಬಸವ ಬೈಕ್ ಸವಾರನೊಬ್ಬನಿಗೆ ಏಕಾಏಕಿ ಗುದ್ದಿ ಓಡಿ ಹೋಗಿದೆ. ಪರಿಣಾಮ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ಚಾಲಕನ ಸಮಯಪ್ರಜ್ಞೆಯಿಂದ ಬೈಕ್ ಸವಾರನ ಜೀವ ಉಳಿದಿದೆ.
ನಗರದ ಮಹಾಲಕ್ಷ್ಮೀ ಲೇಔಟ್ ಸ್ವಿಮ್ಮಿಂಗ್ ಪೂಲ್ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Aa bail mujhe maar?
Biker narrowly escapes an angry bull on streets of Mahalakshmi Layout in #Bengaluru.. thankfully the truck beside wasn’t speeding 🫨 pic.twitter.com/nc35P3EIer
— Nabila Jamal (@nabilajamal_) April 5, 2024
ಬೆಂಗಳೂರಿನಲ್ಲಿ ರಸ್ತೆ ಬದಿ ಮಹಿಳೆಯೊಬ್ಬರು ಕೋಲೆ ಬಸವನನ್ನು ಹಿಡಿದುಕೊಂಡು ಬರುತ್ತಿದ್ದರು. ಈ ವೇಳೆ, ಎದುರಿಗೆ ಬರುತ್ತಿದ್ದ ಬೈಕ್ ಸವಾರನ ಮೇಲೆ ಕೋಲೆ ಬಸವ ಎರಗಿ ಓಡಿ ಹೋಗಿದೆ. ಈ ವೇಳೆ, ಬೈಕ್ ಸವಾರನ ವಿರುದ್ಧ ದಿಕ್ಕಿನಲ್ಲಿ ಕ್ಯಾಂಟರ್ ವಾಹನ ಬರುತ್ತಿತ್ತು. ಬೈಕ್ ಸವಾರ ಕ್ಯಾಂಟರ್ ಚಕ್ರದಡಿಗೆ ಬಿದ್ದಿದ್ದಾನೆ. ತಕ್ಷಣ ಎಚ್ಚೆತ್ತ ಚಾಲಕ ಬ್ರೇಕ್ ಹಾಕಿ ಕ್ಯಾಂಟರ್ ನಿಲ್ಲಿಸಿದ್ದಾನೆ. ಇದರಿಂದ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನು ಓದಿದ್ದೀರಾ? ಏಪ್ರಿಲ್ 8ರ ಬಳಿಕ ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಈ ಘಟನೆ ವೇಳೆ, ಸ್ಕೂಟರ್ ಸವಾರ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಬೇಕಿತ್ತು. ಆದರೆ, ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅಪಘಾತ ತಪ್ಪಿದಂತಾಗಿದೆ.
ಕೋಲೆ ಬಸವ ಈ ರೀತಿ ಒಮ್ಮಿಂದೊಮ್ಮೆಲೇ ವರ್ತಿಸಿದ್ದು, ಜನರಲ್ಲಿ ಭಯ ಬೀಳಿಸುವಂತಿದೆ. ಸದ್ಯ ಈ ಅಪಘಾತದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಅಲ್ಲದೇ, ಈ ಘಟನಾ ಸ್ಥಳದಲ್ಲಿ ವಾಹನಗಳು ಸಂಚರಿಸಲು ಎರಡು ಬದಿ ರಸ್ತೆಗಳಿವೆ. ಆದರೆ, ಒಂದು ಬದಿಯ ರಸ್ತೆಯ ಮೇಲೆ ವಾಹನಗಳನ್ನು ಪಾರ್ಕ್ ಮಾಡಲಾಗಿದೆ. ಪಾದಚಾರಿಗಳು ಈ ರಸ್ತೆಯಲ್ಲಿ ನಡೆದುಕೊಂಡು ಓಡಾಡುವಂತಾಗಿದೆ. ಅಲ್ಲದೇ, ದನಗಳು ಕೂಡ ರಸ್ತೆಯಲ್ಲಿ ಓಡಾಡುವಂತಾಗಿದೆ. ಸರಿಯಾದ ಪಾದಚಾರಿ ಮಾರ್ಗ ಇಲ್ಲದಿರುವುದು ಈ ಘಟನೆಗೆ ಕಾರಣ ಎಂದು ಹಲವರು ಆರೋಪಿಸಿದ್ದಾರೆ.