ಬಾಬು ಜಗಜೀವನ್ ರಾಮ್ ಅವರನ್ನು ಪ್ರಧಾನಿ ಮಾಡಬೇಕೆಂದು ಆರೆಸ್ಸೆಸ್‌ ಪ್ರಯತ್ನಿಸಿತ್ತೇ?

Date:

Advertisements

ಇಂದು ಜಗಜೀವನ್ ರಾಮ್ ಅವರ ಹುಟ್ಟಿದ ದಿನ.

ಸಂಘಿಗಳು ಚುನಾವಣಾ ದೃಷ್ಟಿಯಿಂದ ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಇಬ್ಬರನ್ನು ತಮ್ಮವರೆಂದು ಪ್ರಚಾರ ಮಾಡಲು ಕಳೆದೆರಡು ದಶಕಗಳಿಂದ ಅಪಪ್ರಚಾರ ಮಾಡುತ್ತಲೇ ಬಂದಿದ್ದಾರೆ.

ಇದರ ಭಾಗವಾಗಿಯೇ ಹೋದವರ್ಷ ರಾಜ್ಯ ಶಾಸನಸಭಾ ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪನವರು ಮತ್ತು ಮೋದಿಯವರು 1977ರಲ್ಲಿ ಜನತಾ ಪಕ್ಷದ ಸರ್ಕಾರ ಬಂದಾಗ ಜಗಜೀವನ್ ರಾಮ್ ಅವರಿಗೆ ಪ್ರಧಾನಿ ಸ್ಥಾನ ಕೊಡಿಸಬೇಕೆಂದು ಪ್ರಯತ್ನಿಸಿದ್ದರೆಂಬ ಹಸಿಸುಳ್ಳನ್ನೂ ಹೇಳಿದ್ದರು, ಪ್ರಚಾರ ಮಾಡಲೂ ನೋಡಿದ್ದರು.

Advertisements

ಆದರೆ ಆ ವೇಳೆಗೆ ಮೋದಿ ರಾಷ್ಟ್ರಮಟ್ಟದಲ್ಲಿರಲಿ, ರಾಜ್ಯಮಟ್ಟದ ನಾಯಕನೂ ಆಗಿರಲಿಲ್ಲ. ಹೀಗಾಗಿ ಆ ಸುಳ್ಳು ಠುಸ್ ಪಟಾಕಿಯಾಯಿತು.

ಮೋದಿಯವರನ್ನು ಬಿಡಿ ಆರೆಸ್ಸೆಸ್‌ಗಾಗಲೀ, ಭಾರತೀಯ ಜನಸಂಘದ ಅಂದಿನ ರಾಷ್ಟ್ರೀಯ ನಾಯಕರಿಗಾಗಲೀ 1977ರಲ್ಲಿ ಜಗಜೀವನ್ ರಾಮ್ ಅವರನ್ನು ಪ್ರಧಾನಿಯವರನ್ನಾಗಿ ಮಾಡುವ ಉದ್ದೇಶವಿತ್ತೇ? ಖಂಡಿತಾ ಇಲ್ಲ. ಏಕೆಂದರೆ ಪ್ರಧಾನಿ ಹುದ್ದೆಗೆ ಅವರೆಲ್ಲರ ಸರ್ವಸಮ್ಮತ ಆಯ್ಕೆಯಾಗಿದ್ದುದು ಉಗ್ರ ಹಿಂದುತ್ವವಾದಿ ಮತ್ತು ಬ್ರಾಹ್ಮಣವಾದಿಯಾಗಿದ್ದ ಮುರಾರ್ಜಿ ದೇಸಾಯಿಯವರೇ ವಿನಾ ಜಗಜೀವನ್ ರಾಮ್ ಅವರಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಜಗಜೀವನ್ ರಾಮ್ ಅವರಿಗೆ ಆರೆಸ್ಸೆಸ್ ಮತ್ತು ಜನಸಂಘದ ಬಗ್ಗೆ ಏನು ಆಭಿಪ್ರಾಯವಿತ್ತು ಗೊತ್ತೇ?

ಇದರ ಬಗ್ಗೆ ಆರೆಸ್ಸೆಸ್ ಅಭಿಮಾನಿಯಾಗಿರುವ ಅಮೇರಿಕಾದ ವಿದ್ವಾಂಸ ವಾಲ್ಟರ್ ಕೆ. ಆಂಡರ್ಸನ್ ಮತ್ತು ಅಮೇರಿಕಾದ ಆರೆಸ್ಸೆಸ್ಸಿನ ಅಂಗಸಂಸ್ಥೆಯಾದ ಹಿಂದೂ ಸೇವಾ ಸಂಘದ ಶ್ರೀಧರ್ ದಾಮ್ಲೆಯವರು ಜೊತೆಗೂಡಿ ಆರೆಸ್ಸೆಸ್‌ನ ಇತಿಹಾಸದ ಬಗ್ಗೆ ರಚಿಸಿರುವ Brotherhood in Saffron ಪುಸ್ತಕದಲ್ಲಿ ಸೂಚ್ಯವಾಗಿ ದಾಖಲಿಸಿದ್ದಾರೆ.

ಇಂದಿರಾ ಸರ್ವಾಧಿಕಾರದ ವಿರುದ್ದ ಏರ್ಪಟ್ಟ ಮೈತ್ರಿ ಸರ್ಕಾರದಲ್ಲಿ ಅತಿ ದೊಡ್ಡ ಬಿಕ್ಕಟ್ಟು ಉಂಟಾಗಿದ್ದೇ ಭಾರತೀಯ ಜನಸಂಘಕ್ಕೆ ಕೋಮುವಾದಿ ಆರೆಸ್ಸೆಸ್ ಜೊತೆಗೆ ಇದ್ದ ನಂಟಿನ ಬಗ್ಗೆ. ಆರೆಸ್ಸೆಸ್ಸಿನ ಜೊತೆಗೆ ನಂಟು ದೇಶಕ್ಕಿಂತ ಮುಖ್ಯ ಎಂದು ಜನಸಂಘ ಭಾವಿಸಿದ್ದರಿಂದಲೇ ಜನತಾ ಸರ್ಕಾರ ಕುಸಿದು ಬಿತ್ತು. ಮತ್ತು 1980ರ ಚುನಾವಣೆಯಲ್ಲಿ ಜನತಾ ಪಕ್ಷ ಇಂದಿರಾ ಕಾಂಗ್ರೆಸ್ಸಿನ ಎದಿರು ಹೀನಾಯವಾಗಿ ಸೋತಿತು.

ಇದರ ಬಗ್ಗೆ ಜನತಾ ಪಕ್ಷದ ಆಗಿನ ಅಧ್ಯಕ್ಷ ಚಂದ್ರಶೇಖರ್ ಅವರಿಗೆ ಬರೆದ ಪತ್ರದಲ್ಲಿ ಬಾಬು ಜಗಜೀವನ್ ರಾಮ್ ಅವರಿಗೆ ಆರೆಸ್ಸೆಸ್ ಮತ್ತು ಜನಸಂಘದ ಬಗ್ಗೆ ಇದ್ದ ಅಭಿಪ್ರಾಯ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಇದು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ 1980ರ ಮಾರ್ಚ್ 8 ರ ಆವೃತ್ತಿಯಲ್ಲಿ ಪ್ರಕಟವಾಗಿದೆ.

ಇದನ್ನು ಆರೆಸ್ಸೆಸ್ ಅಭಿಮಾನಿ ಬರಹಗಾರರು ಬರೆದಿರುವ Brotherhood in Saffron ಪುಸ್ತಕದಲ್ಲಿ ದಾಖಲಿಸಿದ್ದಾರೆ: ಪಕ್ಷದ ಸೋಲಿಗೆ ‘hostile activities of the RSS’, -ಆರೆಸ್ಸೆಸ್‌ನ ಪಕ್ಷ ವಿರೋಧಿ ಚಟುವಟಿಕೆಗಳು ಕಾರಣವೆಂದೂ ಬಾಬು ಜಗಜೀವನ್ ರಾಮ್ ಬರೆದಿದ್ದರು.

ಅಷ್ಟು ಮಾತ್ರವಲ್ಲ, ‘secret agreement’ existed between the RSS and Mrs Gandhi’s Congress Party, -ಆರೆಸ್ಸೆಸ್ ಮತ್ತು ಇಂದಿರಾ ಗಾಂಧಿಯವರ ಕಾಂಗ್ರೆಸ್ಸಿನ ನಡುವೆ ಗುಪ್ತ ಒಪ್ಪಂದವೂ ಏರ್ಪಟ್ಟಿತ್ತು ಎಂದು ಬಹಿರಂಗವಾಗಿ ಆರೋಪಿಸಿದ್ದರು.

ಇದು ಬಾಬು ಜಗಜೀವನ್ ರಾಮ್ ಅವರಿಗೆ ಆರೆಸ್ಸೆಸ್ -ಜನಸಂಘದ ಬಗ್ಗೆ ಇದ್ದ ಅಭಿಪ್ರಾಯ. ಇದನ್ನು ವಿರೋಧಿಸಿ ಆರೆಸ್ಸೆಸ್‌ನ ‘ಆರ್ಗನೈಸರ್’ ಪತ್ರಿಕೆಯಲ್ಲಿ ಅಡ್ವಾಣಿಯವರು ಜಗಜೀವನ್ ರಾಮ್ ಅವರನ್ನು ಖಂಡಿಸಿ ತೀವ್ರವಾದ ಟೀಕಾತ್ಮಕ ಲೇಖನವನ್ನು ಬರೆದಿದ್ದರು. ಇದು ಬಾಬು ಜಗಜೀವನ್ ರಾಮ್ ಅವರ ಬಗ್ಗೆ ಆರೆಸ್ಸೆಸ್‌ಗಿರುವ ನೈಜ ಪ್ರೀತಿ!

-ಶಿವಸುಂದರ್

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ ತೀರ್ಪಿನ ಕಾರಣ ನನ್ನ ಸಮುದಾಯದಿಂದಲೇ ಟೀಕೆಗೊಳಗಾದೆ: ಸಿಜೆಐ

"ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ (ಒಳಮೀಸಲಾತಿ) ತೀರ್ಪಿನ ಕಾರಣದಿಂದಾಗಿ ನನ್ನ ಸಮುದಾಯದಿಂದಲೇ...

ಮೀರತ್ ಗಡಿಯಾರ ಗೋಪುರ ಹತ್ತಿ ವಿಡಿಯೋ ಮಾಡುವ ಸಾಹಸ ಮಾಡಿದ ‘ಸ್ಪೈಡರ್‌ಮ್ಯಾನ್’ ಬಂಧನ!

'ಸ್ಪೈಡರ್‌ಮ್ಯಾನ್' ವೇಷಭೂಷಣವನ್ನು ಧರಿಸಿ ಮೀರತ್‌ನ ಐತಿಹಾಸಿಕ ಗಡಿಯಾರ ಗೋಪುರವನ್ನು ಹತ್ತಿ ಅಪಾಯಕಾರಿ...

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

Download Eedina App Android / iOS

X