ತಮ್ಮ 11 ವರ್ಷದ ಮಗನಿಗೆ ಕಬ್ಬಿಣದ ಕಾದ ಸಲಾಕೆಯಿಂದ ಅಚ್ಚೆ ಹಾಕಿದ ದೇವಸ್ಥಾನದ ಮಂಡಳಿಯ ವಿರುದ್ಧ ಭಾರತೀಯ ಮೂಲದ ವ್ಯಕ್ತಿಯೊಬ್ಬರು10 ಲಕ್ಷ ಡಾಲರ್ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಘಟನೆ ಅಮೆರಿಕ ದ ಹ್ಯೂಸ್ಟನ್ ನಗರದಲ್ಲಿ ನಡೆದಿದೆ.
ಫೋರ್ಟ್ ಬೆಂಡ್ ಕೌಂಟಿ ನಗರ ವಾಸಿಯಾದ ವಿಜಯ್ ಚೆರುವು ಅವರು, ತಮ್ಮ ಪುತ್ರನಿಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಟಾಕ್ಸಸ್‌ನ ಶುಗರ್‌ಲ್ಯಾಂಡ್‌ನ ಅಷ್ಟಲಕ್ಷ್ಮಿ ಹಿಂದೂ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ಹಾಗೂ ತಮ್ಮ ಮಗನ ಅನುಮತಿಯನ್ನು ಪಡೆಯದೆ ಕಾದ ಕಬ್ಬಿಣದ ಸಲಾಕೆಯಿಂದ ಅಚ್ಚೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಈ ಅಚ್ಚೆಯಿಂದಾಗಿ ತಮ್ಮ ಮಗ ತುಂಬ ನೋವಿನಿಂದ ಬಳಲುತ್ತಿದ್ದು, ಶಾಶ್ವತ ಕಲೆ ಉಂಟಾಗಿದೆ ಎಂದು ಕೋರ್ಟಿನಲ್ಲಿ ಸಲ್ಲಿಸಿರುವ ದಾವೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಂದೋ ಕೈತಪ್ಪಿದ ‘ಕಚ್ಚತೀವು’ ಕಥೆ ಇರಲಿ; ಚೀನಾ ಅತಿಕ್ರಮಣ ಬಗ್ಗೆ ಮೋದಿ ಮಾತಾಡಲಿ
ಈ ನಷ್ಟವನ್ನು ತುಂಬಿಕೊಡುವ ಸಲುವಾಗಿ ದೇವಸ್ಥಾನ ಹಾಗೂ ಅದರ ಪೋಷಕ ಮಂಡಳಿಯ ವಿರುದ್ಧ ಚೆರುವು ಅವರು ನ್ಯಾಯಾಲಯದಲ್ಲಿ 10 ಲಕ್ಷ ಡಾಲರ್ ದಾವೆ ಹೂಡಿದ್ದಾರೆ.
“ನನಗೆ ಇದರಿಂದ ಆಘಾತ ಉಂಟಾಯಿತು. ಈ ಘಟನೆಯನ್ನು ಹೇಗೆ ನಿರ್ವಹಿಸುವುದೆಂದು ನನಗೆ ಗೊತ್ತಿರಲಿಲ್ಲ. ನನ್ನ ಮೊದಲ ಕಾಳಜಿ ನನ್ನ ಮಗನ ಆರೋಗ್ಯವನ್ನು ನೋಡಿಕೊಳ್ಳುವುದಾಗಿದೆ” ಎಂದು ಚೆರುವು ತಿಳಿಸಿದ್ದಾರೆ.
ಅಚ್ಚೆ ಹಾಕಿದ್ದರಿಂದ ಬಾಲಕನ ಎರಡು ಕೈಗಳಿಗೆ ತೀವ್ರ ಹಾನಿಯಾಗಿ ಶಾಶ್ವತ ಕಲೆಯುಂಟಾಗಿದೆ. ನಂತರದ ದಿನಗಳಲ್ಲಿ ಸೋಂಕು ಹೆಚ್ಚಾಗಿದೆ. ಬಾಲಕ ತಮ್ಮ ತಾಯಿಯ ಜೊತೆ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಯಾರಿಗೂ ತಿಳಿಸದಂತೆ ಅಚ್ಚೆ ಹಾಕಲಾಗಿದೆ ಎಂದು ಚೆರುವು ಅವರ ವಕೀಲರು ತಿಳಿಸಿದ್ದಾರೆ.
