ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ: ವಿವರ ಇಲ್ಲಿದೆ

Date:

Advertisements

ರಾಜ್ಯದಲ್ಲಿ ವಾಡಿಕೆಯಂತೆ ಮಳೆಯಾಗದೆ. ಕರಾವಳಿ ಪ್ರದೇಶಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆ, ನದಿಗಳಿಗೆ ಒಳಹರಿವು ಸಂಪೂರ್ಣ ಕಡಿಮೆಯಾಗಿದೆ. ಅಲ್ಲದೇ, ಜಲಾಶಯಗಳ ನೀರಿನ ಮಟ್ಟ ಕುಸಿತ ಕಂಡಿದೆ.

ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ಬಿರು ಬಿಸಿಲಿನ ವಾತಾವರಣ ತುಂಬಿತ್ತು. ಇದೀಗ, ದಿನೇದಿನೆ ಏರಿಕೆಯಾಗುತ್ತಿರುವ ತಾಪಮಾನದಿಂದ ಜನರು ಬಿಸಿಲಿನ ಶಾಖಕ್ಕೆ ಕಂಗಾಲಾಗಿದ್ದಾರೆ. ಜಲಾಶಯಗಳಲ್ಲಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ಸದ್ಯ ಕೆಆರ್​ಎಸ್​ ಡ್ಯಾಂನಲ್ಲಿ ಕೇವಲ 13.08 ಟಿಎಂಸಿ ನೀರು ಮಾತ್ರ ಇದೆ. ಇನ್ನು ರಾಜ್ಯದ ಅತಿ ದೊಡ್ಡ ಜಲಾಶಯ ಎಂಬ ಖ್ಯಾತಿ ಗಳಿಸಿರುವ ತುಂಗಭದ್ರಾ ಆಣೆಕಟ್ಟಿನಲ್ಲಿ ಕೇವಲ 10.19 ಟಿಎಂಸಿ ನೀರು ಇದೆ.

Advertisements

ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಏ. 6; ಪ್ರಣಾಳಿಕೆಯಲ್ಲಿ ಪರಿಸರಕ್ಕಾಗಿ ಆದ್ಯತೆ ನೀಡಲು ‘ಪರಿಸರ ಪ್ರಣಾಳಿಕೆ’ ಬಿಡುಗಡೆ

ಏಪ್ರಿಲ್ 6ರಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ?

• ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಮಟ್ಟ 519.6 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 123.08 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 35.89 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 30.89 ಟಿಎಂಸಿ ಇತ್ತು. 0 ಕ್ಯೂಸೆಕ್ ಒಳಹರಿವು ಇದ್ದು, 16446 ಕ್ಯೂಸೆಕ್ ಹೊರಹರಿವು ಇದೆ.

• ತುಂಗಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 497.71 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 105.79 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 4.38 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 05.51 ಟಿಎಂಸಿ ಇತ್ತು. 0 ಕ್ಯೂಸೆಕ್ ಒಳಹರಿವು ಇದ್ದು, 960 ಕ್ಯೂಸೆಕ್ ಹೊರಹರಿವು ಇದೆ.

• ಮಲಫ್ರಭಾ ಜಲಾಶಯದ ಗರಿಷ್ಠ ನೀರಿನ ಮಟ್ಟ 633.8 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 37.73 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 10.19 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 12.04 ಟಿಎಂಸಿ ಇತ್ತು. 0 ಕ್ಯೂಸೆಕ್ ಒಳಹರಿವು ಇದ್ದು, 194 ಕ್ಯೂಸೆಕ್ ಹೊರಹರಿವು ಇದೆ.

• ಕೆ ಆರ್‌ ಎಸ್ ಜಲಾಶಯದ ಗರಿಷ್ಠ ನೀರಿನ ಮಟ್ಟ 38.04 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 49.45 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 13.08 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 19.35 ಟಿಎಂಸಿ ಇತ್ತು. 78 ಕ್ಯೂಸೆಕ್ ಒಳಹರಿವು ಇದ್ದು, 787 ಕ್ಯೂಸೆಕ್ ಹೊರಹರಿವು ಇದೆ.

• ಲಿಂಗನಮಕ್ಕಿ ಜಲಾಶಯದ ಗರಿಷ್ಠ ನೀರಿನ ಮಟ್ಟ 554.44 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 151.75 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 28.20 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 45.52 ಟಿಎಂಸಿ ಇತ್ತು. 0 ಕ್ಯೂಸೆಕ್ ಒಳಹರಿವು ಇದ್ದು, 3168 ಕ್ಯೂಸೆಕ್ ಹೊರಹರಿವು ಇದೆ.

• ಕಬಿನಿ ಜಲಾಶಯದ ಗರಿಷ್ಠ ನೀರಿನ ಮಟ್ಟ 696.13 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 19.52 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 09.10 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 06.58 ಟಿಎಂಸಿ ಇತ್ತು. 67 ಕ್ಯೂಸೆಕ್ ಒಳಹರಿವು ಇದ್ದು, 800 ಕ್ಯೂಸೆಕ್ ಹೊರಹರಿವು ಇದೆ.

• ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 657.73 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 18.24 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 39.91 ಟಿಎಂಸಿ ಇತ್ತು. 74 ಕ್ಯೂಸೆಕ್ ಒಳಹರಿವು ಇದ್ದು, 6347 ಕ್ಯೂಸೆಕ್ ಹೊರಹರಿವು ಇದೆ.

• ಘಟಪ್ರಭಾ ಜಲಾಶಯದ ಗರಿಷ್ಠ ನೀರಿನ ಮಟ್ಟ 662.91 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 51 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 24.36 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 13.83 ಟಿಎಂಸಿ ಇತ್ತು. 0 ಕ್ಯೂಸೆಕ್ ಒಳಹರಿವು ಇದ್ದು, 5028 ಕ್ಯೂಸೆಕ್ ಹೊರಹರಿವು ಇದೆ.

• ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 890.58 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 37.1 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 10.42 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 19.95 ಟಿಎಂಸಿ ಇತ್ತು. 8 ಕ್ಯೂಸೆಕ್ ಒಳಹರಿವು ಇದ್ದು, 330 ಕ್ಯೂಸೆಕ್ ಹೊರಹರಿವು ಇದೆ.

• ವರಾಹಿ ಜಲಾಶಯದ ಗರಿಷ್ಠ ನೀರಿನ ಮಟ್ಟ 594.36 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 31.1 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 6.00 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 6.46 ಟಿಎಂಸಿ ಇತ್ತು. 0 ಕ್ಯೂಸೆಕ್ ಒಳಹರಿವು ಇದ್ದು, 709 ಕ್ಯೂಸೆಕ್ ಹೊರಹರಿವು ಇದೆ.

• ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 871.38 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 8.5 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 3.19 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 2.87 ಟಿಎಂಸಿ ಇತ್ತು. 185 ಕ್ಯೂಸೆಕ್ ಒಳಹರಿವು ಇದ್ದು, 200 ಕ್ಯೂಸೆಕ್ ಹೊರಹರಿವು ಇದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X