ಐಪಿಎಲ್-2024ರ ಟೂರ್ನಿಯಲ್ಲಿ ಶನಿವಾರ ನಡೆದ ರಾಜಸ್ಥಾನ ರಾಯಲ್ಸ್ (ಆರ್‌ಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 113 ರನ್ ಗಳಿಸಿದರು. ಆದರೂ, ಆರ್‌ಆರ್ ಎದುರು ಆರ್‌ಸಿಬಿ ಮಂಡಿಯೂರಿ ಸೋಲುಂಡಿತು. ಶನಿವಾರದ ಪಂದ್ಯದಲ್ಲಿ ಉಭಯ ತಂಡಗಳು ಒಂದೊಂದು ಶತಕಗಳನ್ನು ಗಳಿಸಿದವು. ಕೊಹ್ಲಿ 113ರನ್ ಗಳಿಸಿದರೆ, ಆರ್‌ಆರ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ 100 ರನ್‌ಗಳನ್ನು ಗಳಿಸಿದರು. ಇದೆಲ್ಲದರ ನಡುವೆ, ಮೊದಲು ಇನ್ನಿಂಗ್ಸ್ ಶುರು ಮಾಡಿದ ಆರ್‌ಸಿಬಿ 200+ ರನ್‌ಗಳನ್ನು ಗಳಿಸಬಹುದೆಂದು ಭಾವಿಸಿದ್ದಾಗಿ ಆರ್‌ಆರ್ ಹೇಳಿದೆ. ಆದರೆ, ಆರ್‌ಸಿಬಿ ಕೇವಲ 183 ರನ್‌ಗಳನ್ನು ಮಾತ್ರವೇ ಕಲೆ ಹಾಕಿತು.
ಸಾಮಾಜಿಕ ಜಾಲತಾಣದಲ್ಲಿ ರನ್‌ಗಳ ಬಗ್ಗೆ ಪೋಸ್ಟ್ ಮಾಡಿರುವ ಆರ್‌ಆರ್, “200+ ರನ್‌ಗಳು ಸಾಧ್ಯವಿರುವ ದಿನದಲ್ಲಿ 184 ರನ್‌ಗಳು ಆರಾಮದಾಯ” ಎಂದಿದೆ. ಅದೂ, ಆರ್‌ಆರ್ ಬ್ಯಾಟಿಂಗ್ ಆರಂಭಿಸುವ ಮುನ್ನವೇ ಈ ಪೋಸ್ಟ್ ಹಾಕಲಾಗಿದೆ. ಆ ಮೂಲಕ ಆರ್‌ಸಿಬಿಯನ್ನು ಆರ್‌ಆರ್ ಟ್ರೋಲ್ ಮಾಡಲು ಯತ್ನಿಸಿದೆ ಎಂದು ಹಲವರು ಭಾವಿಸಿದ್ದಾರೆ.
184 sounds good on a day when 200+ was possible 👍 pic.twitter.com/Cm47TNbN7Q
— Rajasthan Royals (@rajasthanroyals) April 6, 2024
ಪಂದ್ಯದ ನಂತರ ಮಾತನಾಡಿದ ಕೊಹ್ಲಿ, “ಪಿಚ್ ಸಮತಟ್ಟಾಗಿರುವ ಇರುವಂತೆ ಕಾಣುತ್ತದೆ. ಆದರೆ, ಅದು ಆ ರೀತಿಯಲ್ಲಿಲ್ಲ. ಆದ್ದರಿಂದ, ಬ್ಯಾಟಿಂಗ್ ವೇಗವನ್ನು ಹೆಚ್ಚಿಸಲು ಕಷ್ಟವಾಯಿತು” ಎಂದಿದ್ದಾರೆ.
That’s good way of trolling 😭😭😭
— Div🦁 (@div_yumm) April 6, 2024
“ಪಿಚ್‌ನಲ್ಲಿ ಚೆಂಡಿನ ವೇಗ ಬಹಳ ಬೇಗನೆ ಬದಲಾಗುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮ್ಮ ಗುರಿ ಆರಂಭದಲ್ಲಿ 190, 195 ಆಗಿತ್ತು. ಆದರೆ, ಪಿಚ್‌ನಲ್ಲಿ ಅದು ನಿಧಾನವಾಯಿತು. ಆದರೂ, 180-185 ರನ್‌ಗಳನ್ನು ನಾವು ಕಲೆಹಾಕಿದ್ದೇವೆ. ಇದು ಈ ಪಿಚ್‌ನಲ್ಲಿ ಅತ್ಯಂತ ಪರಿಣಾಮಕಾರಿ ಮೊತ್ತವೆಂದು ನಾನು ಭಾವಿಸುತ್ತೇನೆ” ಎಂದು ಕೊಹ್ಲಿ ಹೇಳಿದ್ದಾರೆ.
ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿದ ಆರ್‌ಆರ್ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.