ಕೂಲಿ ಕೆಲಸಕ್ಕೆ ಹೋಗಿದ್ದ ಇಬ್ಬರು ಮಹಿಳೆಯರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ನಗರದ ಹೊರವಲಯದಲ್ಲಿ ರವಿವಾರ ನಡೆದಿದೆ.
ನಗರದ ಹೊರವಲಯದ ತಾವರಗೇರಾ ಕ್ರಾಸ್ ಬಳಿ ಘಟನೆ ನಡೆದ ಬಗ್ಗೆ ವರದಿಯಾಗಿದೆ, ಕೆಕೆ ನಗರದ ನಿವಾಸಿ ಶರಣಮ್ಮ(47) ಮತ್ತು ತಾಜಾ ಸುಲ್ತಾನ್‌ಪುರ ಗ್ರಾಮದ ನಿವಾಸಿ ಚಂದಮ್ಮ(49) ಹತ್ಯೆಯಾದ ಮಹಿಳೆಯರು ಎಂದು ಗುರುತಿಸಲಾಗಿದೆ.
ನಗರದ ಗಂಜ್‌ನಿಂದ ಬಸ್‌ನಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದರು ಎನ್ನಲಾಗಿದೆ, ಆದರೆ, ಇಬ್ಬರು ಮಹಿಳೆಯರ ಕೊಲೆ ಯಾರು ಮಾಡಿದ್ದಾರೆ? ಯಾಕೆ ಮಾಡಿದ್ದಾರೆ ಎಂಬ ಮಾಹಿತಿ ನಿಖರವಾಗಿ ಗೊತ್ತಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಆರೆಸ್ಸೆಸ್ ಸಿದ್ಧಾಂತಕ್ಕೆ ಇಂದು ಮೋದಿ ಮುಖ – ನಾಳೆ ಮತ್ತೊಬ್ಬರ ಮುಖ: ಸ್ಟಾಲಿನ್
ಸ್ಥಳಕ್ಕೆ ಕಲಬುರಗಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.