ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ(ಎನ್‌ಡಿಆರ್‌ಎಫ್) ಅಡಿಯಲ್ಲಿ ರಾಜ್ಯಕ್ಕೆ 18,171 ಕೋಟಿ ರೂ. ಬರ ಪರಿಹಾರ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, “ಎಲ್ಲ ವಿಚಾರಗಳಿಗೂ ರಾಜ್ಯಗಳು ನಮ್ಮಲ್ಲಿಗೆ ಬರಬೇಕಾ?” ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್ ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ಪೀಠವು, ಸೋಮವಾರ ಅರ್ಜಿಯ ವಿಚಾರಣೆ ನಡೆಸಿತು.
ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, “ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕಳೆದ ವರ್ಷ ಡಿಸೆಂಬರ್ನಲ್ಲೇ ಕರ್ನಾಟಕ ಸರ್ಕಾರ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ. ಈ ಕಾರಣಕ್ಕಾಗಿ ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸುವಂತಾಯಿತು” ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಪರಿಹಾರದ ಹಣದ ವಿಚಾರವಾಗಿ ವಿವಿಧ ರಾಜ್ಯಗಳು ನಮ್ಮಲ್ಲಿಗೆ ಬರುತ್ತಿದೆ. ಇದು ಪುನರಾವರ್ತನೆಯಾಗುತ್ತಿದೆ. ಎಲ್ಲ ವಿಚಾರಗಳಿಗೂ ರಾಜ್ಯಗಳು ಸುಪ್ರೀಂಕೋರ್ಟ್ಗೆ ಬರಬೇಕಾ?” ಎಂದು ಕೇಳಿತು.
Karnataka’s Plea In Supreme Court For Drought Relief : AG & SG Agree To Get Instructions From Union Govt. |@DebbyJain #SupremeCourt #Karnataka https://t.co/PIOkU7ypmn
— Live Law (@LiveLawIndia) April 8, 2024
ಇದಕ್ಕೆ ಉತ್ತರಿಸಿದ ತುಷಾರ್ ಮೆಹ್ತಾ, ಆರ್ಟಿಕಲ್ 32ರ ಅಡಿಯಲ್ಲಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುವ ಬದಲು ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಸಿದಿದ್ದರೆ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಎರಡು ವಾರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ” ಎಂದು ಭರವಸೆ ನೀಡಿದರು. ಅಲ್ಲದೇ, ನೋಟಿಸ್ ನೀಡಬೇಡಿ ಎಂದು ನ್ಯಾಯಪೀಠದ ಎದುರು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ವಿಭಾಗೀಯ ಪೀಠವು, ಅರ್ಜಿಯ ಮುಂದಿನ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.
ನೋಟಿಸ್ ಕೊಡಬೇಡಿ ಅಂತ ಕೂಡ ಕೇಳಿಕೊಂಡಿದ್ದಾರೆ: ಕೃಷ್ಣಬೈರೇಗೌಡ
“ವಾದ ಬಗೆಹರಿಸುತ್ತೇವೆ ಎಂದು ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರ ಹೇಳಿದೆ. ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಹಾಜರಾಗಿದ್ದರು. ಎರಡು ವಾರದಲ್ಲಿ ಪ್ರತಿಕ್ರಿಯೆ ನೀಡುತ್ತೇವೆ ಎಂದಿದ್ದಾರೆ. ನೋಟಿಸ್ ಕೊಡಬೇಡಿ ಅಂತ ಕೂಡ ಕೇಳಿಕೊಂಡಿದ್ದಾರೆ. ಎಲ್ಲಿ ಕೇಂದ್ರಕ್ಕೆ ಮುಜುಗರ ಆಗುತ್ತದೋ ಎಂಬ ಆತಂಕವಿದೆ. ಹಾಗಾಗಿ ನೋಟಿಸ್ ಕೊಡಬೇಡಿ ಎಂದು ಕೇಂದ್ರ ಕೇಳಿದೆ” ಎಂದು ಸುಪ್ರೀಂ ಕೋರ್ಟ್‌ನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
Hon. Supreme Court directs Government of India to take a decision and file a statement in 2 weeks. Hon. Supreme Court said “how many times the states have to come to Court?”
Government of India said they will resolve the issue and come back to Court. pic.twitter.com/7XQSiX1k5x
— Krishna Byre Gowda (@krishnabgowda) April 8, 2024

ಕೇಂದ್ರಕ್ಕೆ ಸೋಲು
ರಾಜ್ಯಕ್ಕೆ ಗೆಲುವು l
ಸುಳ್ಳಿಗೆ ಸೋಲು
ಸತ್ಯಕ್ಕೆ ಗೆಲುವು l