“ನಾನು ಯಾವುದೇ ಪಕ್ಷಕ್ಕೂ ಸೇರುವುದಿಲ್ಲ ಅಥವಾ ಚುನಾವಣೆಯಲ್ಲಿಯೂ ಸ್ಪರ್ಧಿಸುವುದಿಲ್ಲ” ಎಂದು ಹೇಳುವ ಮೂಲಕ ನಟ ಸಂಜಯ್ ದತ್ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಹಾಗೆಯೇ ತಾನು ಯಾವುದಾದರೂ ಪಕ್ಷಕ್ಕೆ ಸೇರುವ ನಿರ್ಧಾರ ಮಾಡಿದರೆ ತಾನೇ ತಿಳಿಸುತ್ತೇನೆ ಎಂದಿದ್ದಾರೆ.
“ನಾನು ರಾಜಕೀಯಕ್ಕೆ ಸೇರುತ್ತೇನೆ ಎಂಬ ಎಲ್ಲಾ ವದಂತಿಗಳಿಗೆ ನಾನು ವಿರಾಮ ಹಾಕಲು ಬಯಸುತ್ತೇನೆ. ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ನಿರ್ಧರಿಸಿದರೆ ಅದನ್ನು ಘೋಷಿಸುವ ಮೊದಲ ವ್ಯಕ್ತಿ ನಾನೇ ಆಗಿರುತ್ತೇನೆ” ಎಂದು ಸಂಜಯ್ ದತ್ ಎಕ್ಸ್ (ಟ್ವಿಟ್ಟರ್) ಪೋಸ್ಟ್‌ನಲ್ಲಿ ಹೇಳಿದ್ದಾರೆ.
I would like to put all rumours about me joining politics to rest. I am not joining any party or contesting elections. If I do decide to step into the political arena then I will be the first one to announce it. Please refrain from believing what is being circulated in the news…
— Sanjay Dutt (@duttsanjay) April 8, 2024
ಹಾಗೆಯೇ “ಇಂತಹ ಸುಳ್ಳು ಸುದ್ದಿಗಳನ್ನು ನೀವು ದಯವಿಟ್ಟು ನಂಬಬೇಡಿ. ಸದ್ಯಕ್ಕೆ ನನ್ನ ಬಗ್ಗೆ ಏನೆಲ್ಲಾ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ” ಎಂದು ಪೋಸ್ಟ್‌ನಲ್ಲಿ ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಸ್ಪಷ್ಟನೆಯ ಬದಲು ಗೊಂದಲ ಸೃಷ್ಟಿಸಿದ ಪ್ರೇಮ್, ಸಂಜಯ್ ದತ್
ಸಂಜಯ್ ದತ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹರಿಯಾಣದ ಕರ್ನಾಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಹರಡಿತ್ತು. ಈ ಕ್ಷೇತ್ರದಲ್ಲಿ ಪ್ರಬಲ ನಾಯಕ, ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಆದ್ದರಿಂದ ಕಾಂಗ್ರೆಸ್ ಸಂಜಯ್ ದತ್ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ ಎಂದು ಕೆಲವು ವರದಿಗಳು ಆಗಿದ್ದವು.
2014 ಮತ್ತು 2019ರ ಚುನಾವಣೆಯಲ್ಲಿ ಕರ್ನಾಲ್ ಕ್ಷೇತ್ರವನ್ನು ಬಿಜೆಪಿ ಪಾಲಾಗಿದೆ. ಅದಕ್ಕೂ ಮೊದಲು ಎರಡು ಅವಧಿಗೆ ಕಾಂಗ್ರೆಸ್ ಇಲ್ಲಿ ಗೆಲುವು ಸಾಧಿಸಿತ್ತು.
ದತ್ ಅವರ ಪೂರ್ವಜರ ಗ್ರಾಮವು ಯಮುನಾನಗರ ಜಿಲ್ಲೆಯಲ್ಲಿದೆ. ಇದಕ್ಕೂ ಮುನ್ನ ಅವರು ಭಾರತೀಯ ರಾಷ್ಟ್ರೀಯ ಲೋಕದಳದ ನಾಯಕ ಅಭಯ್ ಸಿಂಗ್ ಚೌತಾಲಾ ಪರ ಪ್ರಚಾರ ಮಾಡಿದ್ದರು.
ಸಂಜಯ್ ದತ್ ಅವರ ತಂದೆ ಮತ್ತು ನಟ, ದಿವಂಗತ ಸುನೀಲ್ ದತ್ ಅವರು ಕಾಂಗ್ರೆಸ್ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರ ಸಹೋದರಿ ಪ್ರಿಯಾ ದತ್ ಕೂಡ ಕಾಂಗ್ರೆಸ್ ಸಂಸದೆಯಾಗಿದ್ದಾರೆ.