“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಶಿಕ್ಷಣ ಇಲಾಖೆಯಲ್ಲಿನ 18 ಪದವಿ ಪೂರ್ವ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಒಟ್ಟು 2,427 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 1889 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.78ರಷ್ಟು ಫಲಿತಾಂಶ ಬಂದಿದೆ” ಎಂದು ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪಾಲಿಕೆ, “ಬಿಬಿಎಂಪಿ ಭೈರವೇಶ್ವರ ನಗರ ಪದವಿ ಪೂರ್ವ ಕಾಲೇಜು ಶೇ.94.96% ಫಲಿತಾಂಶವನ್ನು ಪಡೆದು ಅಗ್ರಸ್ಥಾನದಲ್ಲಿದೆ. ಪಾಲಿಕೆಗೆ ಕೀರ್ತಿ ತಂದಿದೆ. ಒಟ್ಟು 29 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ” ಎಂದು ತಿಳಿಸಿದೆ.
“ಬಿಬಿಎಂಪಿ ಪದವಿ ಪೂರ್ವ ಕಾಲೇಜು ಕಸ್ತೂರಿಬಾ ನಗರ ಶೇ.88.10 ಫಲಿತಾಂಶವನ್ನು ನೀಡಿ ಎರಡನೇ ಸ್ಥಾನವನ್ನು ಪಡೆದಿದೆ. ಒಟ್ಟು 36 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಬಿಬಿಎಂಪಿಯ ಪದವಿ ಪೂರ್ವ ಕಾಲೇಜು ಕಾವೇರಿಪುರ ಶೇ.87.69 ಫಲಿತಾಂಶವನ್ನು ಪಡೆದು ಮೂರನೇ ಸ್ಥಾನವನ್ನು ಗಳಿಸಿದೆ. ಒಟ್ಟು 7 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ” ಎಂದು ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯುಸಿ ಪರೀಕ್ಷೆ-2 ಅಂತಿಮ ವೇಳಾಪಟ್ಟಿ ಬಿಡುಗಡೆ
“2022-23ನೇ ಸಾಲಿನಲ್ಲಿ ಶೇ.63.18% ರಷ್ಟು ಫಲಿತಾಂಶ ಬಂದಿದೆ. ಪ್ರಸ್ತುತ ವರ್ಷದಲ್ಲಿ ಕಳೆದ ವರ್ಷಕ್ಕಿಂತ ಶೇಕಡ 15% ರಷ್ಟು ಹೆಚ್ಚು ಫಲಿತಾಂಶ ಬಂದಿದ್ದು, ಪಾಲಿಕೆಯ ಪದವಿ ಪೂರ್ವ ಕಾಲೇಜುಗಳ ಫಲಿತಾಂಶವು ಉತ್ತಮಗೊಂಡಿದೆ. 2023-24ನೇ ಸಾಲಿನಲ್ಲಿ ಒಟ್ಟು 227 ವಿದ್ಯಾರ್ಥಿಗಳು ಶೇಕಡ 85% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ” ಎಂದಿದೆ.
“ಕ್ಲೀವ್ ಲ್ಯಾಂಡ್ ಟೌನ್-62 2. ಕಸ್ತೂರಿಬಾ ನಗರ-36, 3. ಭೈರವೇಶ್ವರ ನಗರ-28, 4. ಶ್ರೀರಾಂಪುರ-25 ವಿದ್ಯಾರ್ಥಿಗಳು ಶೇಕಡ 85% ಕ್ಕಿಂತ ಹೆಚ್ಚು ಅಂಕ ಪಡೆದು ಪಾಲಿಕೆಗೆ ಕೀರ್ತಿ ತಂದಿದ್ದಾರೆ” ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ರವರು ತಿಳಿಸಿದ್ದಾರೆ.