ಮಹಿಳಾ ಬಸ್ ನಿರ್ವಾಹಕಿಯೊಬ್ಬರು ಮತ್ತೊಂದು ಬಸ್‌ನ ಕಂಡಕ್ಟರ್ ಮೇಲೆ ಹಲ್ಲೆಗೈದಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಉಡುಪಿಯ ಸಂತೆಕಟ್ಟೆ ಬಸ್ ನಿಲ್ದಾಣದಲ್ಲಿ ಭಾರತಿ ಬಸ್‌ನ ಕಂಡಕ್ಟರ್ ರೇಖಾ ಅವರು ದುರ್ಗಾಪ್ರಸಾದ್ ಬಸ್‌ನ ಕಂಡಕ್ಟರ್ ರಾಘವೇಂದ್ರ ನಡುವೆ ಗಲಾಟೆ ನಡೆದಿದೆ. ಜಗಳದಲ್ಲಿ ಅಶ್ಲೀಲವಾಗಿ ಪರಸ್ಪರ ನಿಂದಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
Conductors of two buses plying between #Kundapur and #Mangaluru engaged in a verbal altercation, with the female conductor of one bus showing her sandals to the male conductor of the other.
Rekha, the conductor of Bharati bus, confronted Raghavendra, the conductor of Durgaprasad… pic.twitter.com/TjXFIPoX4r
— Hate Detector 🔍 (@HateDetectors) April 11, 2024
ಕುಂದಾಪುರ ಮತ್ತು ಮಂಗಳೂರು ನಡುವೆ ಸಂಚರಿಸುವ ಎರಡು ಬಸ್‌ಗಳ ಕಂಡಕ್ಟರ್‌ಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಖಾಸಗಿ ಬಸ್‌ಗಳ ಟೈಮಿಂಗ್ ವಿಚಾರದಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದೆ.
ತಮಗಿಂತ ಮೊದಲೇ ಬಂದು ಬಸ್ ನಿಲ್ಲಿಸಿದ್ದಕ್ಕಾಗಿ ಮಹಿಳಾ ಕಂಡಕ್ಟರ್ ರೇಖಾ ಎಂಬವರು ಮತ್ತೊಂದು ಬಸ್‌ನ ಕಂಡಕ್ಟರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ, ರೇಖಾ ಅವರು ಚಪ್ಪಲಿ ಹಿಡಿದು ರಾಘವೇಂದ್ರ ಎಡೆಗೆ ತೋರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಭಿಕ್ಷಾಟನೆ ಮಾಡುತ್ತಿದ್ದ 47 ಮಕ್ಕಳನ್ನು ರಕ್ಷಿಸಿದ ಸಿಸಿಬಿ
ಈ ಘಟನೆ ಕಂಡ ಪ್ರಯಾಣಿಕರು ಕೆಲಕಾಲ ತಬ್ಬಿಬಾಗಿದ್ದಾರೆ. ಘಟನೆ ಬಳಿಕ ಕಂಡಕ್ಟರ್ ರಾಘವೇಂದ್ರ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂಪೂರ್ಣ ಗಲಾಟೆಯ ದೃಶ್ಯ ದುರ್ಗಾಪ್ರಸಾದ್ ಬಸ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರೇಖಾ ಅವರು ಉಡುಪಿಯ ಮೊದಲ ಮಹಿಳಾ ಬಸ್ ಕಂಡಕ್ಟರ್ ಎಂದು ಗುರುತಿಸಿಕೊಂಡಿದ್ದಾರೆ. ಅವರು ಹಲವಾರು ವರ್ಷಗಳಿಂದ ಭಾರತಿ ಮೋಟಾರ್ಸ್ ಬಸ್‌ನಲ್ಲಿ ಉಡುಪಿ ಮತ್ತು ಕುಂದಾಪುರ ನಡುವೆ ಕಾರ್ಯನಿರ್ವಹಿಸುತ್ತಿದ್ದಾರೆ.