ಸುಮಾರು 100 ವರ್ಷಗಳ ಹಿಂದಿನ ಸಮಾಜದಲ್ಲಿ ಜಾತಿ ವವ್ಯಸ್ಥೆ ಬೇರೆ ಬಿಟ್ಟು ಸಮಾಜದಲ್ಲಿ ಒಂದು ಬಹುದೊಡ್ಡ ಕಂದಕವನ್ನೇ ನಿರ್ಮಿಸಿ ಶಿಕ್ಷಣ ಎನ್ನುವುದು ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಕಾಲಘಟ್ಟದಲ್ಲಿ ದಲಿತ, ಶೋಷಿತ, ನಿರ್ಗತಿಕ, ಹಿಂದುಳಿದ ಪುರುಷ ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಸಮಾಜದಲ್ಲಿರುವ ತಾರತಮ್ಮಗಳ ಎದುರಿಸಿ ಅನೇಕ ರೀತಿಯ ಸವಾಲುಗಳ ಮಧ್ಯ ಅಕ್ಷರ ಬಿಜೆಪಿ ತುವಾದರೊಂದಿಗೆ ಬಹುದೊಡ್ಡ ಹೋರಾಟ ಮಾಡಿದ ಮಹಾನ್ ಮಹಾತ್ಮ ಜ್ಯೋತಿಬಾ ಪೂಜೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ಮುಖಂಡ ಪ್ರಜ್ವಲ್ ಅಬ್ಜಲ್ಪುರ್ ಹೇಳಿದರು.
ವಿಜಯಪುರ ಜಿಲ್ಲೆಯ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಮಹಾತ್ಮ ಜ್ಯೋತಿಬಾಪುಲೆ ಅವರ ಜಯಂತೋತ್ಸವವನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವಮೂಲಕ ಆಚರಿಸಿದ ನಂತರ ಅವರು ಮಾತನಾಡಿದರು.
ತನ್ನ ಧರ್ಮಪತ್ನಿಯಾದ ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಜೊತೆಗೂಡಿ ಶಿಕ್ಷಣದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿ, ನೆರೆಯ ಮಹಾರಾಷ್ಟ್ರದಲ್ಲಿ ಪ್ರಾರಂಭವಾದ ಈ ಶಿಕ್ಷಣ ಕ್ರಾಂತಿ, ದೇಶದ ಎಲ್ಲಾ ಕಡೆಗೂ ಪಸರಿಸಿ ಈ ನಾಡಿನಲ್ಲಿ ಎಲ್ಲರೂ ಶಿಕ್ಷಣವಂತರಾಗಲು ಈ ದಂಪತಿಗಳ ಪಾತ್ರ ಎಂದಿಗೂ ಅಜರಾಮರ ಎಂದರು.
ಆದ್ದರಿಂದ ಪ್ರತಿದಿನ ಇಂತಹ ಮಹಾನ್ ಸಾಧಕರ ಸಾಧನೆಯನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಂತೋಷ ಪೂಜಾರಿ, ರಮೇಶ ಚಲವಾದಿ, ಮಹಾಂತೇಶ ಚಲವಾದಿ ಸೇರಿದಂತೆ ಅನೇಕರು ಇದ್ದರು.
