ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ. ಜಾತಿ ನೋಡದೆ, ದೇಶದ ಉಳಿವಿಗಾಗಿ ಎಲ್ಲರೂ ಮತ ಹಾಕಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. “ಜಾರಕಿಹೊಳಿ ಕಾಲಿಗೆ ಯಾಕೆ ನಮಸ್ಕರ ಮಾಡ್ತೀರಿ. ಅವರನ್ನೇಕೆ ಸಾಹುಕಾರ್ ಅಂತೀರಿ. ನಿಮಗೆ ಸ್ವಾಭಿಮಾನ ಇಲ್ಲವೇ? ಯಾರಿಗೂ ನಮಸ್ಕರ ಮಾಡಬೇಡಿ. ಪ್ರಧಾನಿ ಮೋದಿ ಕಾಲಿಗೆ ನಮಸ್ಕಾರ ಮಾಡಿಸಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.
“ಎಲ್ಲರೂ ಗ್ಯಾರಂಟಿ ಅಂತ ಮಾತನಾಡುತ್ತಿದ್ದಾರೆ. ದೇಶ ಉಳಿದರೆ, ಗ್ಯಾರಂಟಿ ಜಾರಿಯಲ್ಲಿರುತ್ತದೆ. ಮುಸ್ಲಿಮರೆಲ್ಲ ಒಂದಾದರೆ ಹಿಂದುಗಳ ಆಸ್ತಿ ಉಳಿಯಲ್ಲ. ನಮ್ಮ ಅಜ್ಜ, ಮುತ್ತಜ್ಜರು ಟಿಪ್ಪು ಸುಲ್ತಾನ್, ಔರಂಗಜೇಬನ ವಿರುದ್ಧ ಹೋರಾಡಿದ್ದಕ್ಕೆ ಹಿಂದುಗಳು ಉಳಿದಿದ್ದೇವೆ” ಎಂದು ಮತ್ತೆ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಬಿತ್ತುವ ಮಾತನಾಡಿದ್ದಾರೆ.