ಸಿರಿಯಾದಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಇರಾನ್ ಶೀಘ್ರವೇ ಇಸ್ರೇಲ್ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತದೆ ಎಂಬ ನಿರೀಕ್ಷೆಯನ್ನು ಹೊಂದಿರುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಹೇಳಿದ್ದಾರೆ. ಜೊತೆಗೆ ದಾಳಿ ಮಾಡದಂತೆ ಇರಾನ್ಗೆ ಎಚ್ಚರಿಕೆ ನೀಡಿದರು.
“ನಾವು ಇಸ್ರೇಲ್ ರಕ್ಷಣೆಗೆ ಬದ್ಧರಾಗಿದ್ದೇವೆ, ನಾವು ಇಸ್ರೇಲ್ ಅನ್ನು ಬೆಂಬಲಿಸುತ್ತೇವೆ, ನಾವು ಇಸ್ರೇಲ್ ಅನ್ನು ರಕ್ಷಿಸಲು ಸಹಾಯ ಮಾಡುತ್ತೇವೆ ಮತ್ತು ಇರಾನ್ ಯುದ್ಧದಲ್ಲಿ ಯಶಸ್ವಿಯಾಗದು” ಎಂದು ಜೋ ಬೈಡನ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಲೆಬನಾನ್ ಮೇಲೆ ಇಸ್ರೇಲ್ನಿಂದ ವೈಮಾನಿಕ ದಾಳಿ: ಪ್ರಾದೇಶಿಕ ಸಂಘರ್ಷದ ಆತಂಕ
ಡಮಾಸ್ಕಸ್ ಇರಾನ್ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿಯನ್ನು ತನ್ನ ಸ್ವಂತ ಪ್ರದೇಶದಲ್ಲಿ ನಡೆದ ದಾಳಿಗೆ ಸಮಾನವೆಂದು ಇರಾನ್ ಪರಿಗಣಿಸಿದೆ. ಈ ಕಾರಣದಿಂದಾಗಿ ಇರಾನ್ ಇಸ್ರೇಲ್ ನೆಲದ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ.
ಆದರೆ ಈ ದಾಳಿಯ ಹೊಣೆಯನ್ನು ಇಸ್ರೇಲ್ ಒಪ್ಪಿಕೊಂಡಿಲ್ಲ. ಇದಾದ ಬಳಿಕವೂ ಇಸ್ರೇಲ್ ಮೇಲೆ ದಾಳಿಯ ಆರೋಪ ಮಾಡಿರುವ ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಇಸ್ರೇಲ್ ಮೇಲೆ ಪ್ರತಿದಾಳಿಯ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಭಾರತ, ಫ್ರಾನ್ಸ್ ಮತ್ತು ರಷ್ಯಾ ಸೇರಿದಂತೆ ಹಲವು ದೇಶಗಳು ತಮ್ಮ ನಾಗರಿಕರಿಗೆ ಇಸ್ರೇಲ್ ಮತ್ತು ಇರಾನ್ ದೇಶಕ್ಕೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಿವೆ.