ದಕ್ಷಿಣ ಗೋವಾದಲ್ಲಿ ಶುಕ್ರವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಕನಿಷ್ಠ 15 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತಪಟ್ಟ ಅಪ್ರಾಪ್ತ ಬಾಲಕಿಯನ್ನು ಮುಂಜಾನೆ 3 ಗಂಟೆಗೆ ಘಟನೆ ಸಮಯದಲ್ಲಿ ಆಸ್ಪತ್ರೆಗೆ ಕರೆತರಲಾಗಿದ್ದು ಈ ಬಗ್ಗೆ ಆಸ್ಪತ್ರೆಯು ಪೊಲೀಸರಿಗೆ ಮಾಹಿತಿ ನೀಡಿದರು. ಸಂತ್ರಸ್ತೆಯ ಪೋಷಕರು ಪಶ್ಚಿಮ ಬಂಗಾಳದಿಂದ ವಲಸೆ ಬಂದ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಗೋವಾ ಎಸ್‌ಪಿ ಸುನೀತಾ ಸಾವಂತ್, “ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಕೊಚ್ಚಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಘಟನೆಯ ಸಮಯದಲ್ಲಿ ನಿರ್ಮಾಣ ಹಂತದ ಕಟ್ಟಡದ ಸುತ್ತಮುತ್ತ ಕೆಲಸ ಮಾಡುತ್ತಿದ್ದ 15ರಿಂದ 20 ಕಾರ್ಮಿಕರನ್ನು ಬಂಧಿಸಿದ್ದೇವೆ” ಎಂದು ತಿಳಿಸಿದ್ದಾರೆ.
#WATCH | Goa: On the rape and murder of a five-year-old girl in Vasco, SP South Goa, Sunita Sawant says, “The girl’s dead body has been examined by the police surgeon and a post-mortem has been conducted. The post-mortem has confirmed that the girl was sexually assaulted after… pic.twitter.com/AQo8HRx5Y9
— ANI (@ANI) April 13, 2024
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 302 (ಕೊಲೆ), ಪೋಕ್ಸೋ ಕಾಯ್ದೆ ಮತ್ತು ಗೋವಾ ಮಕ್ಕಳ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಕಾರ್ಮಿಕ ಮಹಿಳೆ ಮೇಲೆ ಅತ್ಯಾಚಾರವೆಸಗಿ ಭೀಕರ ಹತ್ಯೆ
“ಶುಕ್ರವಾರ ರಾತ್ರಿ ಬಾಲಕಿಯ ತಂದೆ ಕೆಲಸ ಮಾಡುತ್ತಿದ್ದಾಗ, ಅವರ ಐದು ವರ್ಷದ ಮಗಳು ಅವರೊಂದಿಗೆ ಇದ್ದಳು. 12.15 ರ ಸುಮಾರಿಗೆ, ಅವರು ತಮ್ಮ ಮಗಳನ್ನು ತಮ್ಮ ಮನೆಗೆ ಹೋಗಲು ತಿಳಿಸಿದ್ದಾರೆ” ಎಂದು ವರದಿಯಾಗಿದೆ.
“ಪೋಷಕರಿಗೆ ತಮ್ಮ ಮನೆಯ ಸಮೀಪವಿರುವ ಕಟ್ಟಡದ ಹಿಂದೆ ಬಾಲಕಿಯ ಮೃತದೇಹ ಕಂಡಿದ್ದು ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯಲ್ಲಿ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಬಾಲಕಿಯ ಮುಖ ಮತ್ತು ಕುತ್ತಿಗೆಯ ಮೇಲೆ ಕೆಲವು ಗಾಯದ ಗುರುತುಗಳಿವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.