ಐಪಿಎಲ್‌ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ಹಣಾಹಣಿ ನಡೆಯಲಿದೆ. ಎರಡೂ ತಂಡಗಳು ತಲಾ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿವೆ. ಹೀಗಾಗಿ, ಎರಡು ತಂಡಗಳ ನಡುವಿನ ಪಂದ್ಯವು ಹೆಚ್ಚಿನ ಕುತೂಹಲ ಮೂಡಿಸಿದೆ.
ಈ ಟೂರ್ನಿಯಲ್ಲಿ ಎರಡು ತಂಡಗಳು ನಾಯಕರು ಬದಲಾಗಿದ್ದಾರೆ. ಮುಂಬೈ ತಂಡವನ್ನು ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ. ಚನ್ನೈ ತಂಡವನ್ನು ಧೋನಿ ಬದಲಿಗೆ ರುತುರಾಜ್ ಗಾಯಕ್ವಾಡ್ ಮುನ್ನಡೆಸುತ್ತಿದ್ದಾರೆ. ನಾಯಕತ್ವ ಬದಲಾಗಿದ್ದರೂ, ಆಟದಲ್ಲಿ ಹೊಸ ಹುರುಪು ಎರಡೂ ತಂಡದಲ್ಲಿ ಕಾಣಿಸುತ್ತಿಲ್ಲ. ಎರಡೂ ತಂಡಗಳು ಈವರೆಗೆ ತಲಾ ಐದು ಪಂದ್ಯಗಳು ಆಡಿವೆ, ಸಿಎಸ್‌ಕೆ ಮೂರರಲ್ಲಿ ಗೆದ್ದು, ಎರಡಲ್ಲಿ ಸೋಲುಂಡಿದೆ. ಎಂಐ ಮೂರರಲ್ಲಿ ಸೋತಿದ್ದು, ಎರಡರಲ್ಲಿ ಮಾತ್ರವೇ ಗೆಲುವು ಸಾಧಿಸಿದೆ.
ಇದೇ ವಾಂಖೆಡೆ ಪಿಚ್‌ನಲ್ಲಿ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎಂಐ 230 ರನ್ ಕಲೆ ಹಾಕಿತ್ತು. ಅಲ್ಲದೆ, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 200 ರನ್‌ಗಳೊಂದಿಗೆ ನಾಲ್ಕು ಓವರ್‌ಗಳ ಉಳಿವಿನ ಜೊತೆಗೆ ಎಂಐ ಗೆಲುವು ಸಾಧಿಸಿತ್ತು. ಹೀಗಾಗಿ, ಈಗ, ಇದೇ ಪಿಚ್‌ನಲ್ಲಿ ಎಂಐ ಬ್ಯಾಟರ್‌ಗಳು ಎಎಸ್‌ಕೆ ಬೌಲರ್‌ಗಳನ್ನು ಎದುರಿಸಿ, ಹೆಚ್ಚಿನ ರನ್ ಗಳಿಸಬಹುದು ಎಂಬ ನಿರೀಕ್ಷೆಗಳಿವೆ.
ಇನ್ನು, ಈಗಾಗಲೇ ಮೂರು ಪಂದ್ಯಗಳನ್ನು ಗೆದ್ದು, ಅಂಕಪಟ್ಟಿಯಲ್ಲಿ ಟಾಪ್-3ರಲ್ಲಿರುವ ಸಿಎಸ್‌ಕೆ ಕೂಡ, ಬ್ಯಾಟಿಂಗ್ ಮೂಲಕವೇ ಸಾಕಷ್ಟು ಭರವಸೆ ಹೊಂದಿದೆ. ಹೀಗಾಗಿ, ಅತೀ ಹೆಚ್ಚು ಬಾರಿ ಕಪ್‌ಗಳನ್ನು ಗೆದ್ದಿರುವ ಎರಡು ತಂಡಗಳು ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಎದುರಾಗುತ್ತಿದ್ದು, ಎಲ್ಲರ ಚಿತ್ತ ಸೆಳೆದಿವೆ.
ತಂಡಗಳು
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ (ಸಿ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಜಸ್ಪ್ರೀತ್ ಬುಮ್ರಾ, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೋಟ್ಜಿ, ಟಿಮ್ ಡೇವಿಡ್, ಶ್ರೇಯಸ್ ಗೋಪಾಲ್, ಇಶಾನ್ ಕಿಶನ್, ಅನ್ಶುಲ್ ಕಾಂಬೋಜ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್, ಕ್ವೆನಾ ಮಫಕಾ, ಮೊಹಮ್ಮದ್ ನಬಿ, ಶಮ್ಸ್ ಮುಲಾನಿ, ನಮನ್ ಧೀರ್, ಶಿವಾಲಿಕ್ ಶರ್ಮಾ, ರೊಮಾರಿಯೋ ಶೆಫರ್ಡ್, ಅರ್ಜುನ್ ತೆಂಡೂಲ್ಕರ್, ನುವಾನ್ ತುಷಾರ, ತಿಲಕ್ ವರ್ಮಾ, ವಿಷ್ಣು ವಿನೋದ್, ನೆಹಾಲ್ ವಧೇರಾ, ಲ್ಯೂಕ್ ವುಡ್.
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್ (ಸಿ), ಎಂಎಸ್ ಧೋನಿ, ಅರವೆಲ್ಲಿ ಅವನೀಶ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮೊಯಿನ್ ಅಲಿ, ಶಿವಂ ದುಬೆ, ಆರ್ ಎಸ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಜಾದವ್ ಮಂಡಲ್, ಡೆರಿಲ್ ಮಿಚೆಲ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ನಿಶಾಂತ್ ಸಿಂಧು, ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮುಸ್ತಫಿಜುರ್ ರೆಹಮಾನ್, ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಶಾರ್ದೂಲ್ ಠಾಕೂರ್, ಮಹೇಶ್ ತೀಕ್ಷಣ, ಸಮೀರ್ ರಿಜ್ವಿ.