ಬಿಜೆಪಿ ಭಾನುವಾರ (ಏಪ್ರಿಲ್ 14) ತನ್ನ ಲೋಕಸಭೆ ಚುನಾವಣೆ ಪ್ರಣಾಳಿಕೆ ಅಥವಾ ‘ಸಂಕಲ್ಪ ಪತ್ರ’ವನ್ನು ‘ಮೋದಿ ಕಿ ಗ್ಯಾರಂಟಿ’ ಎಂಬ ಅಡಿಬರಹದೊಂದಿಗೆ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ನವದೆಹಲಿಯಲ್ಲಿನ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.
2024ರ ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ 27 ಸದಸ್ಯರ ಪ್ರಣಾಳಿಕೆ ಸಮಿತಿಯನ್ನು ಬಿಜೆಪಿ ನೇಮಿಸಿತ್ತು. ಈ ಸಮಿತಿಯು ಜನರ ಅಭಿಪ್ರಾಯವನ್ನು ಸಂಗ್ರಹಿಸಿ, ಎರಡು ಬಾರಿ ಸಭೆ ನಡೆಸಿ ಈಗ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಇಡೀ ದೇಶವೇ ಬಿಜೆಪಿಯ ‘ಸಂಕಲ್ಪ ಪತ್ರ’ಕ್ಕಾಗಿ ಕಾಯುತ್ತಿದೆ. 10 ವರ್ಷಗಳಲ್ಲಿ ನಮ್ಮ ಪಕ್ಷ ತನ್ನ ಭರವಸೆ ಈಡೇರಿಸಿದೆ. 60,000 ಹೊಸ ಗ್ರಾಮಗಳಿಗೆ ಪಕ್ಕಾ ರಸ್ತೆಗಳ ಸಂಪರ್ಕ ಕಲ್ಪಿಸುವ ಕೆಲಸ ಮಾಡಲಾಗಿದೆ” ಎಂದು ಹೇಳಿದ್ದಾರೆ.
#WATCH | On the release of party’s election manifesto – ‘Sankalp Patra’ for Lok Sabha polls, PM Narendra Modi says, “The entire country waits for the BJP’s ‘Sankalp Patra’. There is a big reason behind it as in the last 10 years, the BJP has implemented every point of its… pic.twitter.com/BIPDnNtS0D
— ANI (@ANI) April 14, 2024
“ಪ್ರಣಾಳಿಕೆಯು ವೀಕ್ಷಿತ ಭಾರತದ ನಾಲ್ಕು ಸ್ತಂಭಗಳಾದ ಮಹಿಳಾ ಶಕ್ತಿ, ಯುವ ಶಕ್ತಿ, ರೈತರು ಮತ್ತು ಬಡವರ ಮೇಲೆ ಕೇಂದ್ರೀಕರಿಸಿದೆ. ಇದು ಜೀವನದ ಘನತೆ ಮತ್ತು ಜೀವನದ ಗುಣಮಟ್ಟ, ಅವಕಾಶದ ಪ್ರಮಾಣ ಮತ್ತು ಅವಕಾಶದ ಗುಣಮಟ್ಟದ ಮೇಲೆ ಕೇಂದ್ರಿಕರಿಸಿದೆ. ಎಲ್ಲಾ ಮನೆಗಳಿಗೆ ಪೈಪ್ಡ್ ಗ್ಯಾಸ್ (ಅನಿಲ ಕೊಳವೆ ಮಾರ್ಗ) ಮತ್ತು ಸೌರಶಕ್ತಿಯ ಮೂಲಕ ಉಚಿತ ವಿದ್ಯುತ್ ಒದಗಿಸಲು ರ್ಕಾರ ಗಮನಹರಿಸಲಿದೆ” ಎಂದು ಪ್ರಧಾನಿ ಮೋದಿ ತಿಳಿಸಿದರು.
ಇದನ್ನು ಓದಿದ್ದೀರಾ? ನ್ಯಾಯ ಸಂಕಲ್ಪ ಪಾದಯಾತ್ರೆ ಕೈಗೊಂಡ ರಾಹುಲ್ ಗಾಂಧಿ: ಇಂಡಿಯಾ ಒಕ್ಕೂಟದ ನಾಯಕರು ಭಾಗಿ
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ ಕಾರ್ಯಗಳ ಪ್ರಸ್ತಾಪ ಮಾಡಿದರು. “ಹಳ್ಳಿಗಳು ಸಬಲೀಕರಣಗೊಳ್ಳುತ್ತವೆ ಅಥವಾ ಆಪ್ಟಿಕಲ್ ಫೈಬರ್ ಹಳ್ಳಿಗಳನ್ನು ತಲುಪುತ್ತದೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ. ಆದರೆ ಇಂದು ನಿಮ್ಮ ನಾಯಕತ್ವದಲ್ಲಿ 1.2 ಲಕ್ಷ ಪಂಚಾಯತ್‌ಗಳನ್ನು ಆಪ್ಟಿಕಲ್ ಫೈಬರ್‌ನ ಸಂಪರ್ಕವಿದೆ. ಇಂಟರ್ನೆಟ್ ಸೌಲಭ್ಯವಿದೆ ಎಂಬುವುದು ನನಗೆ ಸಂತೋಷವಾಗಿದೆ” ಎಂದು ತಿಳಿಸಿದರು.
“ನಮ್ಮ ಅಧಿಕಾರವಧಿಯಲ್ಲಿ ಭಾರತದ ಜನಸಂಖ್ಯೆಯ 25 ಕೋಟಿ ಜನರು ಈಗ ಬಡತನ ರೇಖೆಯಿಂದ ಮೇಲಕ್ಕೆ ಏರಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ, ಭಾರತದಲ್ಲಿ ತೀವ್ರ ಬಡತನವು ಈಗ ಶೇಕಡ 1ಕ್ಕಿಂತ ಕಡಿಮೆಯಿದೆ” ಎಂದೂ ಹೇಳಿದರು.