ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್-ಬಿಜೆಪಿ ನಾಯಕ ಹೆಚ್.ಡಿ. ಕುಮಾರಸ್ವಾಮಿ ಕ್ಷಮೆಯಾಚಿಸುವಂತೆ ಕೆ. ಪಿ ಸಿ. ಸಿ ಉಪಾಧ್ಯಕ್ಷರು, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಅಕ್ಕೈ ಪದ್ಮಶಾಲಿ ಅವರು ಒತ್ತಾಯಿಸಿದ್ದಾರೆ.
“ತಾವು ಕ್ಷಮೆಯಾಚಿಸಲೇಬೇಕು. ಕುಮಾರಸ್ವಾಮಿಯವರೇ ತಮ್ಮ ಸ್ತ್ರೀ ವಿರೋಧಿ ಹೇಳಿಕೆ ಖಂಡನನೀಯ” ಎಂದು ಅಕ್ಕೈ ಪದ್ಮಶಾಲಿ ಹೇಳಿದ್ದಾರೆ.
“ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಚನೆಗಳು ಮಹಿಳಾ ಸಬಲೀಕರಣದ ಭಾಗವಾಗಿದ್ದರೆ, ತಾವು ಮಹಿಳಾ ವಿರೋಧಿ ಮನಸ್ಥಿತಿಯನ್ನು ಹೊಂದಿರುವುದು ಮಹಿಳಾ ಘನತೆಗೆ ಮಾಡಿದ ಅಪಮಾನವಾಗಿದೆ. ಹಾಗಾಗಿ ತಾವು ಈ ಕೂಡಲೇ ರಾಜ್ಯದ ಘನತೆಯ ಮಹಿಳೆಯರಿಗೆ ಕ್ಷಮೆಯಾಚಿಸಿ” ಎಂದು ಅಕ್ಕೈ ಪದ್ಮಶಾಲಿ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ: ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ
ತುಮಕೂರಿನ ತುರುವೇಕೆರೆಯಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಕುಮಾರಸ್ವಾಮಿ ಪ್ರಚಾರ ನಡೆಸುತ್ತಿದ್ದಾಗ “ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿತಪ್ಪಿದ್ದಾರೆ” ಎಂದು ಹೇಳಿಕೆ ನೀಡುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿವಾದಕ್ಕೆ ನಾಂದಿ ಹಾಡಿದ್ದಾರೆ.
“ಸ್ವಲ್ಪ ಗಮನ ಇಟ್ಟು ಎರಡು ಮಾತುಗಳನ್ನು ಕೇಳಬೇಕು. ಇಂದಿನ ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣೆಯಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿದ್ದರಿಂದ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಪ್ರೀ ಗ್ಯಾರಂಟಿಗಳನ್ನು ನೀಡುವ ಮೂಲಕ ಜನ್ರನ್ನು ಸೋಮರಿಗಳನ್ನಾಗಿಸಿದೆ. ಈ ಗ್ಯಾರಂಟಿಗಳನ್ನು ನೀಡೋ ಬದಲು ದಿನ ನಿತ್ಚದ ವಸ್ತುಗಳ ಮೇಲಿನ ತೆರಿಗೆ, ಬೆಲೆ ಕಡಿಮೆಯಾದ್ರೂ ಮಾಡಿದ್ರೆ ಜನರಿಗೆ ನೆರವಾಗುತ್ತಿತ್ತು. 60 ವರ್ಷವಾದ್ರೂ ಕಾಂಗ್ರೆಸ್ ಪಕ್ಷ ಜನರ ಅಭಿವೃದ್ಧಿಗೆ ಶ್ರಮಿಸದೇ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರನ್ನು ವಿಭಜನೆಯಾಗಿಯಿಟ್ಟುಕೊಂಡು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರದಿಂದ ಎಂದಿಗೂ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ದೇಶದ ಭದ್ರತೆ, ಐಕ್ಯತೆಯಂತೂ ಮರೀಚಿಕೆಯೇ ಸರಿ… ಅದ್ದರಿಂದ ಜನ್ರು ದೇಶದ ಸಮಗ್ರತೆ, ಭದ್ರತೆ, ಐಕ್ಯತೆ ಕಾಯುವ ಹಾಗು ಕಾಪಾಡುವಂತಹ ಸರ್ಕಾರವನ್ನು ಜನ್ರು ಆರಿಸಬೇಕಿದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರೀ ಗ್ಯಾರಂಟಿಗಳನ್ನು ನೀಡುವ ಮೂಲಕ ಜನ್ರನ್ನು ಸೋಮರಿಗಳನ್ನಾಗಿಸಿದೆ. ಈ ಗ್ಯಾರಂಟಿಗಳನ್ನು ನೀಡೋ ಬದಲು ದಿನ ನಿತ್ಚದ ವಸ್ತುಗಳ ಮೇಲಿನ ತೆರಿಗೆ, ಬೆಲೆ ಕಡಿಮೆಯಾದ್ರೂ ಮಾಡಿದ್ರೆ ಜನರಿಗೆ ನೆರವಾಗುತ್ತಿತ್ತು. 60 ವರ್ಷವಾದ್ರೂ ಕಾಂಗ್ರೆಸ್ ಪಕ್ಷ ಜನರ ಅಭಿವೃದ್ಧಿಗೆ ಶ್ರಮಿಸದೇ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರನ್ನು ವಿಭಜನೆಯಾಗಿಯಿಟ್ಟುಕೊಂಡು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರದಿಂದ ಎಂದಿಗೂ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ದೇಶದ ಭದ್ರತೆ, ಐಕ್ಯತೆಯಂತೂ ಮರೀಚಿಕೆಯೇ ಸರಿ… ಅದ್ದರಿಂದ ಜನ್ರು ದೇಶದ ಸಮಗ್ರತೆ, ಭದ್ರತೆ, ಐಕ್ಯತೆ ಕಾಯುವ ಹಾಗು ಕಾಪಾಡುವಂತಹ ಸರ್ಕಾರವನ್ನು ಜನ್ರು ಆರಿಸಬೇಕಿದೆ.
ಜನಸಾಮಾನ್ಯರ ಬದುಕು ದುಸ್ತರ ಆಗಿರುವುದನ್ನು ಅರಿಯದ ಅನಿವೇಕಿಗಳು ಅಧಿಕಾರದಾಹಕ್ಕಾಗಿ ಮಹಿಳಾ ವಿರೋಧಿ ಹೇಳಿಕೆಗಳಾಗಿವೆ. 133 ನೇ ವರ್ಷದ ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಆಚರಿಸುತ್ತಿ ದ್ದರೂ ಇವರನ್ನು ಇವರ ಅಭಿಪ್ರಾಯದಂತೆ ಯಾವುದೇ ಒಂದು ದೇಶದ ಅಭಿವೃದ್ಧಿ ಯನ್ನು ಅಳತೆ ಮಾಡುವ ಮಾನದಂಡವು ಆ ದೇಶದ ಮಹಿಳಾ ಸಬಳೀಕರಣವನ್ನು ಪರಿಗಣಿಸಬೇಕಾಗುತ್ತದೆ ಎಂದಿದ್ದರು. ಆದರೆ ಬಾಬಾಸಾಹೇಬರವರನ್ನು & ಸಂವಿಧಾನದ ಆಶಯಗಳನ್ನು ಅರಿಯದ ಅವಿವೇಕಿಗಳ ಹೇಳಿಕೆಗಳು ಬಾಲಿಷ ವಾಗಿವೆ.
ಗುಡಿಬಂಡೆ ಗಂಗಪ್ಪ