ಕೂಲಿ-ಕಾರ್ಮಿಕರು ಗುಳೆ ಹೋಗುವುದನ್ನ ತಡೆಗಟ್ಟಲು ತಂದ ‘ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ’ ಅಡಿಯಲ್ಲಿ ಗದಗಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಗ್ರಾಮದಲ್ಲಿ ಕೆಲಸ ಆರಂಭಿಸಲಾಗಿದೆ.
ಬರಗಾಲ ಪೀಡಿತ ಪ್ರದೇಶದಿಂದ ಮತ್ತು ಹಳ್ಳಿಗಳಿಂದ ಬಡವರು, ರೈತರು, ಕೂಲಿ-ಕಾರ್ಮಿರು ಜನ ಗುಳೆವು ಹೋಗುವುದನ್ನ ತಡೆಗಟ್ಟಲು ಮನಮೋಹನ್ ಸಿಂಗ ಅವರು ಪ್ರಧಾನಿಯಾದಾಗ ಜಾರಿಗೆ ತಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕಾರಿಯಾಗಿದೆ.
ಸತತವಾಗಿ ಮೂರು ವರ್ಷದ ಅತಿವೃಷ್ಟಿಯಿಂದ ಭೂಮಿ ಜವಳು ಬಿದ್ದು ಅತೀ ತಂಪಿನಿಂದ ಬೆಳೆದ ಬೆಳೆ ಕೈಗೆ ಸಿಗದೇ ನಾಶವಾಗಿತ್ತು ಮತ್ತು ಕಳೆದ ವರ್ಷದ ಬರಗಾಲದಿಂದ ಉತ್ತರ ಕರ್ನಾಟಕದ ಜನ ತತ್ತರಿಸಿ, ಕಂಗಾಲಾಗಿದ್ದರು. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಗುಳೆ ಕೂಡ ಹೋಗಿದ್ದರು.
ನೂರಾರು ಸಂಖ್ಯೆಯಲ್ಲಿ ಗ್ರಾಮದ ಬಡ ರೈತ ಕೂಲಿ-ಕಾರ್ಮಿಕರು ಕೆಲಸ ಸಿಕ್ಕಿದ್ದರಿಂದ ಹರ್ಷಗೊಂಡಿದ್ದಾರೆ. ಕೇಂದ್ರ ಸರ್ಕಾರದ ಈ ‘ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ’ಯು ಬಡವರಿಗೆ, ನಿರ್ಗತಿಕ ಕೂಲಿಕಾರ್ಮಿರಿಗೆ, ಬಡ ರೈತರಿಗೂ ಇದು ಎರಡೊತ್ತಿನ ಊಟಕ್ಕ ಅನುಕೂಲವಾಗಿದೆ. ಸರ್ಕಾರದ ಆದೇಶದ ಅನ್ವಯ ನಾವು ನೂರು ದಿನ ಕೆಲಸ ಕೊಡ್ತಿದ್ದೆವೆ ಮತ್ತು ಕೂಲಿ-ಕಾರ್ಮಿರು, ಬಡವರು ಗುಳೆವು ಹೋಗುವದನ್ನ ಬಿಟ್ಟು ಸರ್ಕಾರದ ಈ ಒಳ್ಳೆಯ ಯೋಜನೆ ಬಳಸಿಕೊಳ್ಳಬೇಕು ಎಂದು ಈ ಮಾದ್ಯಮದ ಮೂಲಕ ಕೇಳಿಕೋಳ್ತೆನಿ, ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖನಗೌಡ್ರ ವಡಕನಗೌಡ್ರ ಹೇಳಿದರು.
ವರದಿ: ಕೇಶವ ಕಟ್ಟಿಮನಿ, ಲಕ್ಷ್ಮೇಶ್ವರ ಸಿಟಿಜನ್ ಜರ್ನಲಿಸ್ಟ್
