ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಕಕ್ಕರಗೊಳ್ಳ ಪರ ಮಹಿಳಾ ಮುಖಂಡರು, ಸ್ತ್ರೀಶಕ್ತಿ ಗುಂಪಿನ ಸದಸ್ಯರು ಪ್ರಚಾರ ನಡೆಸಿ ಮತಯಾಚಿಸಿದರು.
ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕುಂಕ್ಕುವಾಡ, ಹಳೆ ಕೊಳೇನಳ್ಳಿ, ಹೊಸ ಕೊಳೇನಳ್ಳಿ, ಕನಗಗೊಂಡನಹಳ್ಳಿ, ಬಲ್ಲೂರು, ಜಡಗನಹಳ್ಳಿ, ಬಲ್ಲೂರು, ಸಿರಿಗನಹಳ್ಳಿ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಪ್ರಚಾರ ಮಾಡಿದರು. ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 800ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡಿರುವ ವಿನಯ್ ಕುಮಾರ್ ರವರಿಗೆ ಮತ ನೀಡಿ ಗೆಲ್ಲಿಸಿದರೆ ಮಹಿಳೆಯರ, ಮತ್ತು ಗ್ರಾಮೀಣ ಸಮಸ್ಯೆಗಳ ನಿವಾರಣೆಗೆ ಅನುಕೂಲವಾಗುತ್ತದೆ ಎಂದು ಪ್ರಚಾರ ನೆಡೆಸಿದರು.
ಕಕ್ಕರಗೊಳ್ಳ ಗ್ರಾಮದ ಯುವಕ, ವಿದ್ಯಾವಂತ, ಉನ್ನತ ಅಧಿಕಾರಿಗಳನ್ನು ಕೊಡುಗೆ ನೀಡಿದಂತಹ ಶೈಕ್ಷಣಿಕ ಕ್ರಾಂತಿಕಾರ, ಬಡವರ, ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸದಾ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವ ವಿನಯ್ ಕುಮಾರ್ ಅವರಂಥವರಿಗೆ ಮತ ಹಾಕಿ ಗೆಲ್ಲಿಸಿದರೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ,ಹಿಂದುಳಿದ ವರ್ಗಗಳ, ಬಡವರ ಏಳಿಗೆಗೆ ಬೇಕಾದ ಯೋಜನೆ ಜಾರಿಗೆ ತರಲು ಶ್ರಮಿಸಿ , ಅವರ ಏಳಿಗೆಗೆ ಬೇಕಾದ ನೆರವು ನೀಡುತ್ತಾರೆ, ಹಾಗಾಗಿ ವಿನಯ್ ಕುಮಾರ್ ರವರಿಗೆ ಮತ ನೀಡಲು ಮನವಿ ಮಾಡಿದರು.
ಕಕ್ಕರಗೊಳ್ಳ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ, ಸ್ತ್ರೀಶಕ್ತಿ ಸಂಘಗಳ ತಾಲೂಕು ಒಕ್ಕೂಟ ಅಧ್ಯಕ್ಷರಾದ ಕೆ.ಬಿ. ಶಕುಂತಲಾ ಬಸವರಾಜಪ್ಪ, ಶೈಲಾ ಬಿ.ವಿ, ಕೊಳೇನಳ್ಳಿ ಸುನಂದಾ ವರ್ಣಿಕರ್, ಸ್ತ್ರೀಶಕ್ತಿ ಒಕ್ಕೂಟದ ಸದಸ್ಯರಾದ ವನಜಾಕ್ಷಮ್ಮ, ರುದ್ರೇಶ್ ಜಿ.ಎನ್. ಹೊಸಕೋಳೆನಳ್ಳಿ, ಪುರಂದರ ಲೋಕಿಕೆರೆ, ಚಿಕ್ಕಣ್ಣ ಮಲ್ಲಾಯಕನಹಳ್ಳಿ ಸೇರಿದಂತೆ ಮಹಿಳಾ ಮುಖಂಡರು ಭಾಗವಹಿಸಿದ್ದರು.
