ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆಯನ್ನು ಗ್ರಾಮಸ್ಥರು ಆಚರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ ಈಳಿಗೇರ, “ಡಾ. ಅಂಬೇಡ್ಕರ್ ಅವರು ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದಿಂದ ಗೌರವವಾಗಿ ಬದುಕಲು ಅವಕಾಶ ಕಲ್ಪಿಸಿದ್ದಾರೆ. ಅಂಬೇಡ್ಕರ್ ಅವರು ಸಮಾನತೆ, ಜಾತಿಪದ್ಧತಿ ವಿರುದ್ಧ ಹೋರಾಟ, ಎಲ್ಲರಿಗೂ ಶಿಕ್ಷಣ ದೊರೆಯಬೇಕೆಂದು ತಮ್ಮ ಬದುಕನ್ನ ದೇಶಕ್ಕೋಸ್ಕರ ಮುಡಿಪಾಗಿಟ್ಟವರು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಂ,ಪಂ, ಸದಸ್ಯ ನಾನಪ್ಪ ಲಮಾಣಿ, ಕೃಷ್ಣ ಲಮಾಣಿಯವರು, ಮಧುಮಾಲತಿ ಈಳಿಗೇರ, ಗ್ರಾಂ,ಪಂ, ಅಭಿವೃದ್ಧಿ ಅಧಿಕಾರಿ ಮಾಳವಾಡ ಗ್ರಾಂ, ಪಂ,ಕಾರ್ಯದರ್ಶಿ ರಾಮಯ್ಯ ಗುರವಿನ, ಊರಿನ ಹಿರಿಯರಾದ ದೇವಿಂದ್ರಪ್ಪ ತೋಟದ, ಎನ್,ಎಚ್, ಹಡಪದ, ಹನುಮಂತಪ್ಪ ಮಕರಬ್ಬಿ, ನಿಂಗಪ್ಪ ಮಕರಬ್ಬಿ, ಹೊನ್ನಪ್ಪ ಶ್ಯಾಬಳ, ರವಿ ಭಜಕ್ಕ, ಕೃಷ್ಣ ಮಣ್ಣಮ್ಮ, ಶರಣಪ್ಪ ತಳಗೇರಿ, ಅಣ್ಣಯ್ಯ ತಳಗೇರಿ, ಪ್ರವೀಣ್ ಭಜಕ್ಕನ, ಶರಣಪ್ಪ ಪ್ಯಾಟಿ, ಮಂಜುನಾಥ ತಳಗೇರಿ, ರಾಮು ಗುಡಿಮನಿ, ಮಂಜುನಾಥ ಮತ್ತೂರ, ಪ್ರಕಾಶ್ ಮಕರಬ್ಬಿ, ಶರಣಪ್ಪ ಮತ್ತೂರ, ಮಂಜುನಾಥ ಶ್ಯಾಬಳ ಇದ್ದರು.
ವರದಿ : ಮಲ್ಲೇಶ ಮಣ್ಣಮ್ಮನವರ, ಲಕ್ಷ್ಮೇಶ್ವರ ಸಿಟಿಜನ್ ಜರ್ನಲಿಸ್ಟ್