ಡಾ. ಬಿ.ಆರ್.ಅಂಬೇಡ್ಕರ್ ಅವರು ಸರ್ವರ ಏಳಿಗೆಯನ್ನು ಬಯಸಿ ಸುಭದ್ರ ಭಾರತಕ್ಕೆ ಸಂವಿಧಾನ ರಚನೆ ಮಾಡುವ ಮೂಲಕ ನಮ್ಮೆಲ್ಲರಿಗೂ ಲಿಖಿತ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದು, ಸಂವಿಧಾನವನ್ನು ಯಶಸ್ವಿಗೊಳಿಸಲು ನಾವು ಶ್ರಮಿಸಬೇಕಾಗಿದೆ ಎಂದು ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಹೇಳಿದರು.
ಹಾವೇರಿ ನಗರದ ಕಾಗಿನೆಲೆ ರಸ್ತೆಯ ಶ್ರೀಮುರುಘ ರಾಜೇಂದ್ರಮಠದಲ್ಲಿ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ) ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದಡಿ ಎಲ್ಲರ ಏಳಿಗೆಗಾಗಿ ತಮ್ಮ ಶ್ರಮವಹಿಸಿ ಸುಭದ್ರ ಭಾರತ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.
ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಸಂದೇಶವೇ ನಮಗೆ ಮಾದರಿಯಾಗಿದೆ. ಕಷ್ಟಕರ ಸಂದರ್ಭದಲ್ಲಿ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತು ಎಲ್ಲರ ಆಶಾಕಿರಣವಾಗಿದ್ದಾರೆ. ಸಂವಿಧಾನ ನಮಗೆ ಮಹಾಗ್ರಂಥವಾಗಿದೆ. ಅವರ ಜೀವನ ತತ್ವ ಸಿದ್ದಾಂತ ಹಾಗೂ ಜೀವನ ಮಾರ್ಗದರ್ಶನದಿಂದ ನಾವೆಲ್ಲರೂ ಮುನ್ನಡಿಯಬೇಕಾಗಿದೆ. ಅವರ ತತ್ವ ಸಿದ್ದಾಂತ ಹಾಗೂ ವಿಚಾರಧಾರೆಗಳನ್ನು ನಾವು ಪಾಲಿಸುವುದು ಅಗತ್ಯವಾಗಿದೆ. ಮಾನವತವಾದಿತ್ವದ ಮೂಲಕ ಸಮಾಜದಲ್ಲಿ ನಾವೆಲ್ಲರೂ ಬಾಳಬೇಕಾಗಿದೆ. ಅವರ ಜೀವನ ಸಂದೇಶ ಅಳವಡಿಸಿಕೊಳ್ಳೋಣ ಎಂದು ಅವರ ಸಾಧನೆಯ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ ಮುಖಂಡರಾದ ಬಸವರಾಜ ಹೇಡಿಗೊಂಡ, ಎಸ್.ಜಿ.ಹೊನ್ನಪ್ಪನವರ, ವೈ.ಎನ್. ಮಾಸೂರ, ವಿಭೂತಿ ಶೆಟ್ಟಿ, ನಾಗರಾಜ ಮೇದಾರ, ಶಂಭುಲಿಂಗಪ್ಪ ದಿವಠರ, ರೇಣುಕಾ ಡೊಂಕಣ್ಣನವರ, ಬಸವರಾಜ ಕಾಳೆ, ಜಗದೀಶ ಹರಿಜನ, ಹನಮಂತಪ್ಪ ಸಿಡಿ, ಮಂಜಪ್ಪ ದೊಡ್ಡಮರೆಮ್ಮನವರ, ಮಹೇಶಪ್ಪ ಹರಿಜನ, ಡಾ.ಮಂಜುನಾಥ ವೇಷಗಾರ, ಮಂಜಪ್ಪ ಡಂಬಳ, ರಮೇಶ ವೇಷಗಾರ, ಶೋಭಾ ಮೇದಾರ, ಕರಬಸಪ್ಪ ಎಂ, ಲಲಿತಾ ಬಡಕ್ಕಣ್ಣನವರ, ಪ್ರಕಾಶ ಹರಿಜನ, ಬಸವರಾಜ ಚೌವ್ಹಾಣ, ಮರಿಸ್ವಾಮಿ ರಾಣೆಬೆನ್ನೂರ, ಸಂತೋಷ ಹರಿಜನ, ಮಾರುತಿ ಹರಿಜನ, ಹನಮಂತಪ್ಪ ತಗಡಿನಮನಿ, ಮೈಲಪ್ಪ ಡೊಳ್ಳಿನ, ಸೋಮಪ್ಪ ಬಸಾಪುರ, ರಾಮಪ್ಪ ಮುದಕಮ್ಮನವರ ಸೇರಿದಂತೆ ಅನೇಕರು ಇದ್ದರು.
