ಆಮ್ ಆದ್ಮಿ ಪಕ್ಷ (ಎಎಪಿ) ಬುಧವಾರ ರಾಮನವಮಿ ದಿನದಂದು ‘ಎಎಪಿ ಕಾ ರಾಮ್‌ರಾಜ್ಯ’ ವೆಬ್‌ಸೈಟ್ಅನ್ನು ಪ್ರಾರಂಭಿಸಿದೆ. ‘ರಾಮ ರಾಜ್ಯ’ ಪರಿಕಲ್ಪನೆಯ ಅಡಿಯಲ್ಲಿ ಈ ವೆಬ್‌ಸೈಟ್‌ಅನ್ನು ಆರಂಭಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿ ಶ್ರೀರಾಮನ ಆದರ್ಶಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ವೆಬ್‌ಸೈಟ್‌ನಲ್ಲಿ ಎಎಪಿ ಹೇಳಿಕೊಂಡಿದೆ.
सियावर रामचंद्र जी की जय🏹🙏
रामनवमी के शुभ अवसर पर AAP की Loksabha Campaign Website https://t.co/Xv5AfD6a19 का हुआ शुभारंभ
इस Website में क्या है खास? जानिए👇🏻#AAPKaRamRajya pic.twitter.com/TpDhVJlpgO
— AAP (@AamAadmiParty) April 17, 2024
ಬುಧವಾರ ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ದಿನವೇ ಎಎಪಿ ತನ್ನ ವೆಬ್‌ಸೈಟ್ಅನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಲೋಕಸಭೆಯ ಮೊದಲ ಹಂತದ ಮತದಾನ ಶುಕ್ರವಾರ ನಡೆಯಲಿದ್ದು, ಇದಕ್ಕೂ ಮುನ್ನ ವೆಬ್‌ಸೈಟ್ ಬಿಡುಗಡೆಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಯತ್ನ: ಎಎಪಿ ಆರೋಪ
ಈ ಬಗ್ಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, “ವೆಬ್‌ಸೈಟ್ ಎಎಪಿಯ ‘ರಾಮ ರಾಜ್ಯ’ ಪರಿಕಲ್ಪನೆಯನ್ನು ಮತ್ತು ಎಎಪಿ ಸರ್ಕಾರಗಳು ಮಾಡಿದ ಕೆಲಸದ ಮಾಹಿತಿ ಒಳಗೊಂಡಿರುತ್ತದೆ” ಎಂದು ಹೇಳಿದರು.
‘ರಾಮರಾಜ್ಯ’ ಸಾಕಾರಕ್ಕಾಗಿ ಕಳೆದ 10 ವರ್ಷಗಳಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅದ್ಭುತವಾದ ಕೆಲಸಗಳನ್ನು ಮಾಡಿದ್ದಾರೆ. ಉತ್ತಮ ಶಾಲೆಗಳು, ಮೊಹಲ್ಲಾ ಚಿಕಿತ್ಸಾಲಯಗಳು, ಉಚಿತ ನೀರು ಮತ್ತು ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಎಂದು ಕೂಡಾ ಸಂಜಯ್ ಸಿಂಗ್ ತಿಳಿಸಿದರು.
ಇದನ್ನು ಓದಿದ್ದೀರಾ? ‘ಗೋಲ್‌ಪೋಸ್ಟ್’ ಬದಲಿಸುತ್ತಿರುವವರು ಒಲಿಂಪಿಕ್ಸ್ ಬಗ್ಗೆ ಮಾತನಾಡುತ್ತಾರೆ: ಬಿಜೆಪಿ ಪ್ರಣಾಳಿಕೆಗೆ ಕಾಂಗ್ರೆಸ್, ಎಎಪಿ ಟೀಕೆ
“ರಾಮ ನವಮಿಯಂದು ಅರವಿಂದ್ ಕೇಜ್ರಿವಾಲ್ ಅವರು ಜನರ ನಡುವೆ ಇಲ್ಲದಿರುವುದು ಇದೇ ಮೊದಲು. ಸುಳ್ಳು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಆಧಾರರಹಿತವಾದ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ” ಎಂದು ಆರೋಪಿಸಿದರು.
ಎಎಪಿ ಮುಖಂಡರಾದ ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಜಾಸ್ಮಿನ್ ಶಾ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಆಮ್ ಆದ್ಮಿ ಪಾರ್ಟಿ ನಾಯಕ ಸಿಎಂ ಕೇಜ್ರಿವಾಲ್ ಅವರ ಪಕ್ಷದವರದೆಲ್ಲಾ ಎಡಪಂಥೀಯ ವಿಚಾರಗಳು.. ಈ ಜನರಕ್ಕೆ ರಾಮ, ಕೃಷ್ಣ ಸೇರಿದಂತೆ ದೇವ್ರ ಖಂಡ್ರೆ ಆಗದ ಕಾಂಗ್ರೆಸ್ ಜೊತೆ ಸೇರಿ ಇಂಡಿಯಾ ಒಕ್ಕೂಟ ರಚಿಸಿಕೊಂಡಿದ್ದಾರೆ. ಅದ್ರೆ, ಈಗ ರಾಮ್ ರಾಜ್ಯ ವೆಬ್ ಸೈಟ್ ಬಿಡುಗಡೆ ಮಾಡಿರೋದು ನೋಡಿದ್ರೆ. ಈ ಜನ್ರ ಗೋಸುಂಬೆತನ ಪ್ರದರ್ಶನಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ…ಜನ್ರ ಮುಂದೆ ನಿಮ್ಮಗಳ ಡ್ರಾಮಾ ಎಂದೂ ನಡೆಯದು. ಇಂಡಿಯಾ ಒಕ್ಕೂಟಕ್ಕೆ ಬಿಜೆಪಿ ದೊಡ್ಡ ತಲೆನೋನಾಗಿದೆ.