ಭಾರತದ ಯುವಕರದು ವಿರಾಟ್ ಕೊಹ್ಲಿ ರೀತಿಯ ಮನಸ್ಥಿತಿ: ರಘುರಾಂ ರಾಜನ್

Date:

Advertisements

ಬೃಹತ್ ಸಂಖ್ಯೆಯ ಭಾರತದ ಯುವಕರು ವಿದೇಶಗಳಿಗೆ ಹೋಗಿ ಅಲ್ಲಿ ತಮ್ಮ ಉದ್ಯಮವನ್ನು ಆರಂಭಿಸುತ್ತಿದ್ದಾರೆ. ಏಕೆಂದರೆ ಅವರು ಭಾರತದಲ್ಲಿ ಸಂತೋಷದಿಂದಿಲ್ಲ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದರು.

ಅಮೆರಿಕದ ಜಾರ್ಜ್ ವಾಷಿಂಗ್ಟನ್ ವಿವಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ರಘುರಾಂ ರಾಜನ್ ಮಾತನಾಡಿದರು. ಭಾರತದ ಯುವಕರದು ವಿರಾಟ್ ಕೊಹ್ಲಿ ರೀತಿಯ ಮನಸ್ಥಿತಿ. ತಮಗೆ ಅಂತಿಮ ಮಾರುಕಟ್ಟೆಗಳು ಎಲ್ಲಿ ಸುಲಭವಾಗಿ ಪ್ರವೇಶ ದೊರೆಯುತ್ತದೆಯೋ ಅಲ್ಲಿಗೆ ತೆರಳುತ್ತಾರೆ. ಅವರು ಜಾಗತಿಕವಾಗಿ ಹೆಚ್ಚು ವಿಸ್ತರಿಸಿಕೊಳ್ಳಲು ಬಯಸುತ್ತಾರೆ. ಜಗತ್ತಿನಲ್ಲಿ ಯಾರಿಗೂ ನಾನು ಎರಡನೆಯವನಲ್ಲ ಎಂದು ಅವರಿಗೆ ಅನಿಸಿದೆ ಎಂದು ತಿಳಿಸಿದರು.

“ಇತ್ತೀಚಿನ ವರ್ಷಗಳಲ್ಲಿ ಅಸಂಖ್ಯಾತ ಭಾರತದ ನವೋದ್ಯಮಿಗಳು ಸಿಂಗಾಪುರ ಅಥವಾ ಅಮೆರಿಕದ ಸಿಲಿಕಾನ್ ವ್ಯಾಲಿಗೆ ತೆರಳುತ್ತಿದ್ದಾರೆ. ಅಲ್ಲಿ ತಮ್ಮ ಮಾನವ ಬಂಡವಾಳ ಸುಧಾರಣೆ ಹಾಗೂ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಗಮನ ನೀಡುತ್ತಿದ್ದಾರೆ” ಎಂದು ರಘುರಾಂ ರಾಜನ್ ಹೇಳಿದರು.

Advertisements

“ಯುವಕರು ಭಾರತದ ಬದಲಿಗೆ ಹೊರಗಡೆ ತಮ್ಮ ತಮ್ಮ ಶಕ್ತಿಯನ್ನು ವಿನಿಯೋಗಿಸಲು ಕೇಳಲು ಬಯಸುತ್ತೇನೆ? ವಾಸ್ತವ ಏನಂದರೆ ಈ ಉದ್ಯಮಿಗಳು ತವು ಜಾಗತಿಕವಾಗಿ ತಾವು ಸುಧಾರಣೆಗೊಳ್ಳಲು ಆಕಾಂಕ್ಷೆ ಹೊಂದಿದ್ದಾರೆ. ಹೆಚ್ಚಿನವರಲ್ಲಿ ಬಹುತೇಕರು ಭಾರತದೊಂದಿಗೆ ಸಂತಸ ಹೊಂದಿಲ್ಲ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

“ನಾವು ಜನಸಂಖ್ಯೆಗೆ ನೀಡುವ ಲಾಭಾಂಶದ ಪಾಲನ್ನು ಅರ್ಧದಷ್ಟು ಸರಿಯಾಗಿ ತಲುಪುತ್ತಿಲ್ಲ. ಸಮಸ್ಯೆ ಏನೆಂದರೆ ಅನುಕೂಲಗಳನ್ನು ಎಲ್ಲರಿಗೂ ಸಮರ್ಪಕವಾಗಿ ಹಂಚಲಾಗುತ್ತಿಲ್ಲ. ಜನತೆಗೆ ಲಾಭಾಂಶ ನೀಡುವ ಹಂತದಲ್ಲಿ ನಾವು ಚೀನಾ ಹಾಗೂ ಕೊರಿಯಾಗಿಂತಲೂ ಕೆಳಗಿದ್ದೇವೆ. ಇದು ಹೆಚ್ಚು ಜಟಿಲವಾಗುತ್ತಿದೆ. ನಾವು ಜನಸಂಖ್ಯಾ ಲಾಭಾಂಶ ಮಾತ್ರವಲ್ಲ ಯುವಕರಿಗೆ ಉದ್ಯೋಗವನ್ನು ನೀಡಲಾಗುತ್ತಿಲ್ಲ” ಎಂದು ರಘುರಾಂ ರಾಜನ್ ಹೇಳಿದರು.

ಭಾರತವು ಚಿಪ್ ತಯಾರಿಕೆಗೆ ಸಬ್ಸಿಡಿ ಸಹಿತವಾಗಿ ಬಿಲಿಯನ್‌ಗಟ್ಟಲೆ ಡಾಲರ್ ಹಣ ವ್ಯಯ ಮಾಡುತ್ತಿದೆ. ಆದರೆ ಯುವಕರಿಗೆ ಉದ್ಯೋಗ ದೊರಕುವ ಚರ್ಮೋದ್ಯಮ ಕ್ಷೇತ್ರದಂತಹ ಹಲವು ವಲಯಗಳಲ್ಲಿ ಹೆಚ್ಚಿನ ಬಂಡವಾಳ ಹೂಡಲಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ನಿರುದ್ಯೋಗ ಹೆಚ್ಚಾಗುತ್ತಿದೆ. ಕಾರ್ಮಿಕ ಪಾಲ್ಗೊಳ್ಳುವಿಕೆಯು ತೀರ ಕೆಳಗಿದೆ. ಮಹಿಳಾ ಕಾರ್ಮಿಕ  ಪಾಲ್ಗೊಳ್ಳುವಿಕೆ ಕೂಡ ತುಂಬಾ ಕೆಳಗಿದೆ. ಇತ್ತೀಚಿಗೆ ಹೆಚ್ಚುತ್ತಿರುವ ಕೃಷಿ ಕ್ಷೇತ್ರದಂತ ಕೆಲವು ಕ್ಷೇತ್ರಗಳಲ್ಲಿ ಉದ್ಯೋಗಿಗಳ ಸಂಖ್ಯೆ  ಕಡಿಮೆಯಿದೆ. ಇದಕ್ಕೆ ಹೆಚ್ಚು ಹಮನಹರಿಸಲಾಗುತ್ತಿಲ್ಲ. ಪಿಹೆಚ್‌.ಡಿ, ಸ್ನಾತಕೋತ್ತರ ಪದವಿ ಪಡೆದ ಹಲವು ಉದ್ಯೋಗಾಂಕ್ಷಿಗಳು ಸರ್ಕಾರಿ ಪಾರಿಚಾರಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರುವುದು ನಿರುದ್ಯೋಗದ ದುಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ಕಳೆದ 10 ವರ್ಷಗಳಿಂದ ನಾವು ಯಾವುದೇ ಉದ್ಯೋಗವನ್ನು ಸೃಷ್ಟಿಸಿಲ್ಲ. ಇದು ಖಂಡಿತಾ ಎಚ್ಚರಿಕೆ ಗಂಟೆಯಾಗಿದೆ” ಎಂದು ರಾಜನ್ ಕಳವಳ ವ್ಯಕ್ತಪಡಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X