ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಉತ್ತರ ಪ್ರದೇಶ ಸಾರಿಗೆ ಇಲಾಖೆ ಹೊಸ ತಂತ್ರವನ್ನು ರೂಪಿಸಿದ್ದು, ಬಸ್‌ನ ಡ್ಯಾಶ್‌ಬೋರ್ಡ್‌ನಲ್ಲಿ ‘ಫ್ಯಾಮಿಲಿ ಫೋಟೋ’ (ಕುಟುಂಬದ ಚಿತ್ರ) ಇರಿಸಲು ಬಸ್ ಚಾಲಕರಿಗೆ ತಿಳಿಸಲಾಗಿದೆ.
ಎಲ್ಲಾ ವಾಣಿಜ್ಯ ವಾಹನಗಳು ಮತ್ತು ರಾಜ್ಯ ಬಸ್‌ಗಳ ಚಾಲಕರು ತಮ್ಮ ಕುಟುಂಬಸ್ಥರ ಚಿತ್ರವನ್ನು ಡ್ಯಾಶ್‌ಬೋರ್ಡ್‌ನಲ್ಲಿ ಇರಿಸುವಂತೆ ಸಾರಿಗೆ ಆಯುಕ್ತ ಚಂದ್ರಭೂಷಣ್ ಸಿಂಗ್ ಮನವಿ ಮಾಡಿದ್ದಾರೆ.
“ಈ ಕಾರ್ಯವನ್ನು ಮೊದಲು ಆಂಧ್ರಪ್ರದೇಶ ಮಾಡಲಾಗಿದೆ. ನಾವು ಆಂಧ್ರಪ್ರದೇಶದಂತಹ ಕ್ರಮವನ್ನು ಈಗ ಕೈಗೊಳ್ಳಲು ಮುಂದಾಗಿದ್ದೇವೆ” ಎಂದು ಎಂದು ಸಾರಿಗೆ ಪ್ರಧಾನ ಕಾರ್ಯದರ್ಶಿ ಎಲ್.ವೆಂಕಟೇಶ್ವರ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ ದಿನನಿತ್ಯ 34 ಮಂದಿ ರಸ್ತೆ ಅಪಘಾತದಲ್ಲಿ ಸಾವು: ಅಲೋಕ್ ಕುಮಾರ್
ಚಾಲಕರ ಮುಂದೆ ತನ್ನ ಕುಟುಂಬಸ್ಥರ ಫೋಟೋ ಇರುವುದರಿಂದ ಅವರು ಬಸ್ ಚಲಾಯಿಸುವಾಗ ಸುರಕ್ಷತೆಗೆ ಅಧಿಕ ಆದ್ಯತೆ ನೀಡುತ್ತಾರೆ. ಕುಟುಂಬವನ್ನು ನೋಡಿ ಅಂತ ಭಾವನೆ ಅವರು ಬೆಳೆಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಎಲ್.ವೆಂಕಟೇಶ್ವರ್ ತಿಳಿಸಿದ್ದಾರೆ.
“ಬಸ್ ಚಲಾಯಿಸುವಾಗ ಕುಟುಂಬಸ್ಥರ ಚಿತ್ರ ಎದುರಲ್ಲೇ ಇದ್ದರೆ ಚಾಲಕರಿಗೆ ತಮ್ಮ ಕುಟುಂಬದ ನೆನೆಪಾಗುತ್ತದೆ ಮತ್ತು ಇದು ಸುರಕ್ಷಿತವಾಗಿ ಬಸ್ ಚಲಾಯಿಸಲು ಇನ್ನಷ್ಟು ಪ್ರೋತ್ಸಾಹವನ್ನು ನೀಡಿದಂತಾಗುತ್ತದೆ” ಎಂದು ಅಧಿಕಾರಿ ಅಭಿಪ್ರಾಯಿಸಿದ್ದಾರೆ.
ಆಯುಕ್ತರ ಪ್ರಕಾರ, ಈ ಕ್ರಮವು ಆಂಧ್ರಪ್ರದೇಶದಲ್ಲಿ ರಸ್ತೆ ಅಪಘಾತಗಳನ್ನು ಯಶಸ್ವಿಯಾಗಿ ಕಡಿಮೆ ಮಾಡಿದೆ. ಇನ್ನು ಉತ್ತರ ಪ್ರದೇಶದಲ್ಲಿ 2022 ರಲ್ಲಿ 22,596 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, 2023 ರಲ್ಲಿ 23,652ಕ್ಕೆ ರಸ್ತೆ ಅಪಘಾತ ಪ್ರಕರಣಗಳ ಪ್ರಮಾಣ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯು ನವೀನ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.