ಬೆಂಗಳೂರು | ‘ಸೂರ್ಯ ಬಂಡಲ್ ಬ್ಯಾಂಕ್’: ಬಿಜೆಪಿಯ ತೇಜಸ್ವಿ ಸೂರ್ಯ ವಿರುದ್ಧ ವಿನೂತನ ಕ್ಯಾಂಪೇನ್

Date:

Advertisements

ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದಾರೆ. ಅಲ್ಲದೆ ಆರೋಪ-ಪ್ರತ್ಯಾರೋಪಗಳನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್‌ 13ರಂದು ಗುರು ರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ ಹಗರಣದಿಂದಾಗಿ ಠೇವಣಿ ಕಳೆದುಕೊಂಡಿದ್ದ ಸಂತ್ರಸ್ತರ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು. ಈ ಸಭೆಯಲ್ಲಿ ಠೇವಣಿದಾರರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತೇಜಸ್ವಿ ಸೂರ್ಯ ಪರಾರಿಯಾದ ಘಟನೆ ನಡೆದಿತ್ತು. ಈ ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿತ್ತು.

ಈಗ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ‘ಸೂರ್ಯ ಬಂಡಲ್ ಬ್ಯಾಂಕ್’ ಎಂಬ ವಿಶಿಷ್ಟ ಕ್ಯಾಂಪೇನ್ ಆರಂಭಿಸಿದ್ದಾರೆ.

Advertisements

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 40 ಪಸೆಂಟ್ ಕಮಿಷನ್ ವಿಚಾರವನ್ನು ಇಟ್ಟುಕೊಂಡು, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಫೋಟೋ ಬಳಸಿಕೊಂಡು, ಪೇಸಿಎಂ ಅಭಿಯಾನವನ್ನು ಕಾಂಗ್ರೆಸ್ ನಡೆಸಿತ್ತು. ಇದರ ಪರಿಣಾಮ ಚುನಾವಣೆಯ ಫಲಿತಾಂಶದಲ್ಲೂ ಕಂಡು ಬಂದಿತ್ತು. ಈಗ ಅಂಥದ್ದೇ ಹೊಸ ಪ್ರಯೋಗವನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯನ ವಿರುದ್ಧ ಪ್ರಯೋಗಿಸಿದ್ದಾರೆ.

ಎಟಿಎಂ ಕಾರ್ಡ್‌ನ ರೂಪದಲ್ಲೇ, ‘ಸೂರ್ಯ ಬಂಡಲ್ ಬ್ಯಾಂಕ್’ ಎಂಬ ಕಾರ್ಡ್‌ನ್ನು ಮುದ್ರಿಸಲಾಗಿದ್ದು, ಅದನ್ನು ಮತದಾರರಿಗೆ ವಿತರಿಸುವ ಮೂಲಕ, ಕಾಂಗ್ರೆಸ್ ಮತ ಬ್ಯಾಂಕ್ ಗಟ್ಟಿ ಮಾಡಲು ವಿನೂತನ ಪ್ರಯೋಗಕ್ಕೆ ‘ಕೈ’ ಹಾಕಿದೆ.

ಗುರು ರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ ಹಗರಣದಿಂದಾಗಿ ಠೇವಣಿ ಕಳೆದುಕೊಂಡಿದ್ದವರ ₹2500 ಕೋಟಿ ಸಂತ್ರಸ್ತರಿಗೆ ಮತ್ತೆ ಸಿಗುವಂತಾಗಲು ತೇಜಸ್ವಿ ಸೂರ್ಯ ವಿಫಲವಾಗಿದ್ದರು. ಇದು ಈಗ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ವಿಚಾರವಾಗಿ ಮಾರ್ಪಟ್ಟಿದೆ. ಹೀಗಾಗಿಯೇ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ವಿನೂತನ ಪ್ರಚಾರದ ಐಡಿಯಾವನ್ನು ಮಾಡಿದೆ.

ಎಸ್‌ಬಿಐ ಬ್ಯಾಂಕ್‌ನಂತೆಯೇ ಕಾಣುವ ಲೋಗೋ ಹಾಗೂ ಎಸ್‌ಬಿಬಿ ಎಂದು ಇಂಗ್ಲಿಷ್‌ನಲ್ಲಿ ಈ ಕಾರ್ಡ್‌ನ ಮೇಲೆ ಬರೆಯಲಾಗಿದೆ. ಅಲ್ಲದೇ, #DontBankOnSurya ಎಂಬ ಇಂಗ್ಲಿಷ್ ಪದವನ್ನು ಹ್ಯಾಷ್‌ಟ್ಯಾಗ್ ಬಳಸಿ ಬರೆಯಲಾಗಿದೆ. ಅಲ್ಲದೇ, ಈ ಕಾರ್ಡ್‌ನ ಮಾನ್ಯತೆ ಇರುವುದು 2024ರ ಜೂನ್ 4ರವರೆಗೆ ಮಾತ್ರ ಎಂದು ನಮೂದಿಸಿದ್ದು, “ಏನಿಲ್ಲ, ಏನಿಲ್ಲ, ನಿಮ್ಮ ದುಡ್ಡು ವಾಪಸ್ ಬರಲ್ಲ” ಎಂದು ಕೂಡ ಬರೆಯಲಾಗಿದೆ.

ಇದನ್ನು ಓದಿದ್ದೀರಾ? ಬ್ಯಾಂಕ್‌ ಹಣ ಕಳಕೊಂಡಿದ್ದವರ ಪ್ರಶ್ನೆಗೆ ಉತ್ತರಿಸಲಾಗದೆ ಓಡಿ ಹೋದ ತೇಜಸ್ವಿ ಸೂರ್ಯ: ವಿಡಿಯೋ ವೈರಲ್

ತೇಜಸ್ವಿ ಸೂರ್ಯ ಅವರ ಅರ್ಧ ಫೋಟೋ ಬಳಸಿ, ಅವರ ಬಾಯಲ್ಲಿ ₹500 ರೂಪಾಯಿಯ ನೋಟಿನ ಕಂತೆಯನ್ನು ಕೂಡ ‘ಸೂರ್ಯ ಬಂಡಲ್ ಬ್ಯಾಂಕ್’ ಎಂಬ ಕಾರ್ಡ್‌ನ ಮೇಲೆ ಮುದ್ರಿಸಿದ್ದಲ್ಲದೇ, ಅದನ್ನು ಮತದಾರರಿಗೆ ಹಂಚುವ ಮೂಲಕ ವಿನೂತನ ಕ್ಯಾಂಪೇನ್ ಆರಂಭಿಸಿದೆ. ಇದು ಎಷ್ಟರಮಟ್ಟಿಗೆ ಕಾಂಗ್ರೆಸ್‌ಗೆ ಲಾಭ ತಂದುಕೊಡಲಿದೆ ಎಂಬುದು ಜೂ.4ರಂದು ತಿಳಿದುಬರಲಿದೆ. ಬಿಜೆಪಿಯ ತೇಜಸ್ವಿ ಸೂರ್ಯ ಅವರ ವಿರುದ್ಧ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಬೆಂಗಳೂರು ದಕ್ಷಿಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ.

ಈ ಬೆಳವಣಿಗೆಯ ನಡುವೆಯೇ ಕನ್ನಡ ಚಿತ್ರರಂಗದ ಗಾಯಕ ಗುರು ಕಿರಣ್ ಅವರು ವಿಷ್ಣುವರ್ಧನ್, ರಮೇಶ್ ಅರವಿಂದ್ ನಟನೆಯ “ಏಕದಂತ” ಸಿನಿಮಾಕ್ಕಾಗಿ ಹಾಡಿರುವ ‘ಬಂಡಲ್ ಬಡಾಯಿ ಮಹಾದೇವ’ ಎಂಬ ಹಾಡಿನ ಶೈಲಿಯಲ್ಲೇ ‘ಬಂಡಲ್ ಬಡಾಯಿ ಸೂರ್ಯ’ ಎನ್ನುವ ಹಾಡು ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ಇದನ್ನು ರಚಿಸಿದವರು ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಹಾಡನ್ನು ಕಾಂಗ್ರೆಸ್‌ನವರು ಸೇರಿದಂತೆ ಹಲವರು ತಮ್ಮ ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್

ಬಿಹಾರದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ(SIR) ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತ...

ಕರಾವಳಿಯಲ್ಲಿ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ: ಡಿಸಿಎಂ ಡಿ ಕೆ ಶಿವಕುಮಾರ್

"ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ...

ಚಿತ್ರದುರ್ಗ | ಚಳ್ಳಕೆರೆ ನಗರದಲ್ಲಿ ರಸ್ತೆ ಗುಂಡಿಗಳ ಪೂಜೆ; ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿನೂತನ ಪ್ರತಿಭಟನೆ

ಚಳ್ಳಕೆರೆ ನಗರದ ಬಹುತೇಕ ವಾರ್ಡುಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ, ಅಲ್ಲದೆ ತಾಲೂಕಿನ...

ವಿಧಾನಸಭೆಯ ಮುಂಗಾರು ಅಧಿವೇಶನ ಮುಕ್ತಾಯ: ಒಟ್ಟು 39 ವಿಧೇಯಕ ಅಂಗೀಕಾರ

ಕಳೆದ ಆಗಸ್ಟ್ 11ರಿಂದ ಆರಂಭಗೊಂಡಿದ್ದ 16ನೇ ವಿಧಾನಸಭೆಯ ಮುಂಗಾರು ಅಧಿವೇಶನವು ಇಂದು(ಆ.22)...

Download Eedina App Android / iOS

X