- ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್ ಬಳಿ ಕಾರಿನ ಮೇಲೆ ಬಿದ್ದ ‘ಗಾಲ್ಫ್ ಬಾಲ್‘
- ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನ ಮುಂಭಾಗದ ಗ್ಲಾಸ್ ಮೇಲೆ ‘ಗಾಲ್ಫ್ ಬಾಲ್’ ಬಿದ್ದು ಕಾರಿನ ಗಾಜು ಜಖಂಗೊಂಡಿದೆ.
ಶುಕ್ರವಾರ ಬೆಳಗ್ಗೆ 10:30ರ ಸುಮಾರಿಗೆ ನಗರದ ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್ ಬಳಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಕಾರು ಚಾಲಕ ಗಿರೀಶ್ ಎಂಬುವವರಿಗೆ ಗಾಯಗಳಾಗಿದ್ದು, ಇವರು ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಧಿಕಾರಿಗಳ ವಾಹನಗಳಿಗಾಗಿ ₹220 ಕೋಟಿ ಬಿಬಿಎಂಪಿಯಿಂದ ದುರ್ಬಳಕೆ; ಎಎಪಿ ಆರೋಪ
ನಗರದ ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್ ಬಳಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ವಕೀಲ ಗಿರೀಶ್ ಅವರ ಕಾರಿಗೆ ಗಾಲ್ಫ್ ಬಾಲ್‌ವೊಂದು ಬಂದು ಬಿದ್ದಿದೆ. ಇದರಿಂದ ಕಾರಿನ ಗಾಜು ಸಂಪೂರ್ಣವಾಗಿ ಜಖಂಗೊಂಡಿದೆ. ಗಿರೀಶ್ ಅವರ ದೂರಿನ ಮೇರೆಗೆ ಗಾಲ್ಫ್ ಆಡಳಿತ ಮಂಡಳಿ ಹಾಗೂ ಆಟಗಾರರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.