ದೇಶಾದ್ಯಂತ ಪರಿಶಿಷ್ಟ ಜಾತಿಗಳ (ಎಸ್‌ಸಿ) ಜನರು ಇನ್ನೂ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಪರಿಶಿಷ್ಠರಿಗೆ ದೇವಸ್ಥಾನಗಳಲ್ಲಿ ಈಗಲೂ ಪ್ರವೇಶವಿಲ್ಲ. ಬಿಜೆಪಿ ಸರ್ಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಹಿಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ‘ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು’ ಎಂಬ ಕಾರಣಕ್ಕೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಕೀಯದ ಕಾರಣದಿಂದಾಗಿ ಕಾಂಗ್ರೆಸ್ ರಾಮಮಂದಿರದ ಶಂಕುಸ್ಥಾಪನೆಯಲ್ಲಿ ಭಾಗವಹಿಸಲಿಲ್ಲ ಎಂಬ ಮೋದಿ ಅವರ ಆರೋಪಕ್ಕೆ ಅವರು ತಿರುಗೇಟು ನೀಡಿದರು.
“ಇನ್ನೂ ಅನೇಕ ದೇವಾಲಯಗಳಲ್ಲಿ ಪರಿಶಿಷ್ಟ ಜಾತಿಗಳ ಜನರಿಗೆ ಪ್ರವೇಶ ನೀಡಲಾಗುತ್ತಿಲ್ಲ. ನಾನು (ಅಯೋಧ್ಯೆಗೆ) ಹೋಗಿದ್ದರೆ ಮೋದಿ ಸಹಿಸಿಕೊಳ್ಳುತ್ತಿದ್ದರೇ” ಎಂದು ಪ್ರಶ್ನಿಸಿದರು.
“ಅಯೋಧ್ಯೆಯಲ್ಲಿನ ರಾಮ ಮಂದಿರದ ಶಂಕುಸ್ಥಾಪನೆ ಮತ್ತು ಹೊಸ ಸಂಸತ್ ಭವನದ ಉದ್ಘಾಟನೆಗೆ ಮುರ್ಮು ಅವರನ್ನು ಮೋದಿ ಆಹ್ವಾನಿಸಲಿಲ್ಲ. ಈ ಹಿಂದೆ, ಕೋವಿಂದ್ ಅವರಿಗೆ ಹೊಸ ಸಂಸತ್ ಭವನದ ಶಂಕುಸ್ಥಾಪನೆ ಮಾಡಲು ಅವಕಾಶ ನೀಡಲಿಲ್ಲ” ಎಂದು ಹೇಳಿದರು.
“ನನ್ನ ಜನರಿಗೆ ಇಂದಿಗೂ ಎಲ್ಲ ದೇವಾಲಯಗಳಲ್ಲಿ ಪ್ರವೇಶವಿಲ್ಲ. ರಾಮಮಂದಿರವನ್ನು ಬಿಡಿ, ನೀವು ಎಲ್ಲಿಗೆ ಹೋದರೂ, ಪ್ರವೇಶಕ್ಕಾಗಿ ಹೋರಾಟ ಮಾಡಬೇಕು. ಹಳ್ಳಿಯಲ್ಲಿ ಸಣ್ಣ ದೇವಾಲಯಗಳಿಗೂ ಅಲ್ಲಿನ ಪ್ರಬಲ ಜಾತಿಯವರು ಅನುಮತಿಸುವುದಿಲ್ಲ. ಕುಡಿಯುವ ನೀರಿಗೆ ಅವಕಾಶ ನೀಡುವುದಿಲ್ಲ. ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡುವುದಿಲ್ಲ. ಕುದುರೆ ಮೇಲೆ ಮೆರವಣಿಗೆ ಹೋಗುವ ಮದುಮಗನನ್ನು ಸಹ ನೀವು (ಬಿಜೆಪಿ-ಆರ್‌ಎಸ್‌ಎಸ್) ಸಹಿಸುವುದಿಲ್ಲ. ಜನರು ಅವರನ್ನು ಎಳೆದುಕೊಂಡು ಹೊಡೆಯುತ್ತಾರೆ. ದಲಿತರು ಮೀಸೆ ಬಿಟ್ಟರೆ ಸಹಿಸುವುದಿಲ್ಲ. ನಾನು ರಾಮಮಂದಿರಕ್ಕೆ ಹೋಗಿದ್ದರೆ, ಅವರು (ಮೋದಿ-ಬಿಜೆಪಿ) ಸಹಿಸಿಕೊಳ್ಳುತ್ತಿದ್ದರೇ” ಎಂದು ಖರ್ಗೆ ಹೇಳಿದರು.
“ರಾಮಮಂದಿರದ ಕಾಮಗಾರಿ ಪೂರ್ಣಗೊಂಡಿಲ್ಲ. ಅಗಲೇ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದಾರೆ. ಮೋದಿ ಅವರು ರಾಮಮಂದಿರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ರಾಜಕೀಯದೊಂದಿಗೆ ಧರ್ಮವನ್ನು ಏಕೆ ಬೆರೆಸುತ್ತಿದ್ದಾರೆ” ಎಂದರು ಕಿಡಿಕಾರಿದರು.
ಮೋದಿ ಅವರ ‘ಚಾರ್‌ಸೋ (400) ಪಾರ್’ ಪ್ರಚಾರವನ್ನು ತಳ್ಳಿ ಹಾಕಿದ ಖರ್ಗೆ, “ಜನರು ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ. ಮೋದಿ ಅವರ ಮೂರನೇ ಅವಧಿಯ ಕನಸು ಈಡೇರುವುದಿಲ್ಲ” ಎಂದರು.
“ಮೋದಿ ಏನು ಹೇಳಿದರೂ ನಂಬುವುದು ಕಷ್ಟ. ಅವರ ಹಿಂದಿನ ಪ್ರಧಾನಿಗಳು ಎಂದಿಗೂ ಸುಳ್ಳು ಹೇಳುತ್ತಿರಲಿಲ್ಲ. 400 ಸ್ಥಾನವೆಂಬ ಉತ್ಪ್ರೇಕ್ಷಿತ ಅಂಕಿಅಂಶಗಳನ್ನು ನೀಡುತ್ತಿರಲಿಲ್ಲ. ಆದರೆ, ಮೋದಿ ‘ಚಾರ್‌ಸೋ ಪಾರ್’ ಎನ್ನುತ್ತಿದ್ದಾರೆ. ನಮ್ಮ ಲೋಕಸಭೆಯ ಸಂಖ್ಯಾಬಲ 543 ಆಗಿರುವುದರಿಂದ ಅವರು ‘ಚೇಸೋ (600) ಪಾರ್’ ಎಂದು ಹೇಳದಿದ್ದರೆ ಒಳ್ಳೆಯದು. ಇಲ್ಲದಿದ್ದರೆ, ಅವರು ‘600 ಪಾರ್’ ಎಂದೂ ಹೇಳುತ್ತಾರೆ” ಎಂದು ಲೇವಡಿ ಮಾಡಿದರು.
ಮೋದಿ ಮೂರನೇ ಅವಧಿಗೆ ಆಯ್ಕೆಯಾದರೆ ದೇಶಕ್ಕೆ ಅಪಾಯವಿದೆ ಎಂದ ಖರ್ಗೆ, “ಅಧಿಕಾರಕ್ಕೆ ಬರುವ ಮುನ್ನವೇ ಬಿಜೆಪಿಗರು ‘ನಮಗೆ ಮೂರನೇ ಎರಡರಷ್ಟು ಬಹುಮತ ಕೊಡಿ. ಹಾಗಾಗಿ ಸಂವಿಧಾನ ಬದಲಿಸುತ್ತೇವೆ’ ಎನ್ನುತ್ತಿದ್ದಾರೆ. ಅಂತಹ ಹೇಳಿಕೆಯ ವಿರುದ್ಧ ಮೋದಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಕ್ಷದಿಂದ ಹೊರಹಾಕಿಲ್ಲ. ಟಿಕೆಟ್ ನಿರಾಕರಿಸಿಲ್ಲ. ಮೋದಿ ಅವರು ಮೌನವಾಗಿದ್ದಾರೆ. ಯಾರಾದರೂ ಸಂವಿಧಾನದ ವಿರುದ್ಧ ಮಾತನಾಡಿದರೆ ಅವರನ್ನು ದೇಶವಿರೋಧಿಗಳೆಂದು ಪರಿಗಣಿಸುವಾಗ, ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುವವರ ವಿರುದ್ಧ ಮೋದಿ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಣಿಲಾದವರಿಗೆ ನೆಲ ಡೊಂಕು ಅನ್ನೋವಂತೆ.. ನಾನು ಅಯೋಧ್ಯೆ ಶ್ರೀರಾಮದೇಗುಲಕ್ಕೆ ಹೋದ್ರೆ ಮೋದಿ ಸಹಿಸುವರೇ ಅಂತ ಹೇಳೋದು ನೋಡಿದ್ರೆ..ನಿಮ್ಮ ಅಸಡ್ಡೆತನ ಎತ್ತಿ ತೋರಿಸುತ್ತದೆ. ದೇವರು ಜಾತ್ಯತೀತ.. ಜನ್ರು ಮಾಡಿಕೊಂಡಿರೋ ವ್ಯವಸ್ಥೆ..ದೇವರು ನನ್ನ ಹತ್ರಿ ಕೇವಲ ಮೇಲ್ಜಾತಿಯವರು ಬರಲಿ, ಕೀಳುಜಾತಿಯವರು ಬರೋದು ಬೇಡ ಅಂತ ಎಂದೂ ಹೇಳೋದಿಲ್ಲ..ಖರ್ಗೆ ಜೀ.ನಿಮಗೆ ಅಲ್ಲಿಗೆ ಹೋಗಲು ಇಷ್ಟ ಇಲ್ಲ ಅಂದ್ರೆ.. ಬೇಡ.. ಮೋದಿ ಮೇಲೆ ಗೂಬೆ ಕೂರಿಸೋದು ಬೇಡ..
ಕುಣಿಲಾರದವರಿಗೆ ನೆಲ ಡೊಂಕು ಅನ್ನೋವಂತೆ.. ನಾನು ಅಯೋಧ್ಯೆ ಶ್ರೀರಾಮದೇಗುಲಕ್ಕೆ ಹೋದ್ರೆ ಮೋದಿ ಸಹಿಸುವರೇ ಅಂತ ಹೇಳೋದು ನೋಡಿದ್ರೆ..ನಿಮ್ಮ ಅಸಡ್ಡೆತನ ಎತ್ತಿ ತೋರಿಸುತ್ತದೆ. ದೇವರು ಜಾತ್ಯತೀತ.. ಜನ್ರು ಮಾಡಿಕೊಂಡಿರೋ ವ್ಯವಸ್ಥೆ..ದೇವರು ನನ್ನ ಹತ್ರಿ ಕೇವಲ ಮೇಲ್ಜಾತಿಯವರು ಬರಲಿ, ಕೀಳುಜಾತಿಯವರು ಬರೋದು ಬೇಡ ಅಂತ ಎಂದೂ ಹೇಳೋದಿಲ್ಲ..ಖರ್ಗೆ ಜೀ.ನಿಮಗೆ ಅಲ್ಲಿಗೆ ಹೋಗಲು ಇಷ್ಟ ಇಲ್ಲ ಅಂದ್ರೆ.. ಬೇಡ.. ಮೋದಿ ಮೇಲೆ ಗೂಬೆ ಕೂರಿಸೋದು ಬೇಡ..