ಲೋಕಸಭೆ ಚುನಾವಣೆ| ತಪ್ಪದೆ ಮತದಾನ ಮಾಡಿ; ಮುಖ್ಯ ನ್ಯಾಯಮೂರ್ತಿ ಮನವಿ

Date:

Advertisements

ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವನ್ನು ಕಳೆದುಕೊಳ್ಳಬೇಡಿ, ತಪ್ಪದೆ ಮತದಾನ ಮಾಡಿ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಜನರಲ್ಲಿ ಮನವಿ ಮಾಡಿದ್ದು ಇದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಪ್ರಮುಖ ಕರ್ತವ್ಯ ಎಂದು ತಿಳಿಸಿದ್ದಾರೆ.

2024 ರ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗದ ‘ಮೈ ವೋಟ್ ಮೈ ವಾಯ್ಸ್’ ಮಿಷನ್‌ ವಿಡಿಯೋ ಸಂದೇಶದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್, “ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಜೆಗಳು, ಅದು ನಮ್ಮ ದೇಶ. ಸಂವಿಧಾನವು ನಮಗೆ ನಾಗರಿಕರಾಗಿ ಬಹುಸಂಖ್ಯೆಯ ಹಕ್ಕುಗಳನ್ನು ನೀಡುತ್ತದೆ ಆದರೆ ನಾವು ಪ್ರತಿಯೊಬ್ಬರೂ ನಮ್ಮ ಮೇಲೆ ಹೊರಿಸಲಾದ ಕರ್ತವ್ಯವನ್ನು ನಿರ್ವಹಿಸುತ್ತೇವೆ ಎಂಬ ನಿರೀಕ್ಷೆಯಿದೆ. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಮತ ಚಲಾಯಿಸುವುದು ಪೌರತ್ವದ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ” ಎಂದು ಹೇಳಿದರು.

ಇದನ್ನು ಓದಿದ್ದೀರಾ?  ಮಹಿಳೆಯರನ್ನು ‘ಈ ರೀತಿ’ ಉಲ್ಲೇಖಿಸದಿರಿ: ಮಹತ್ವದ ಕೈಪಿಡಿ ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ

Advertisements

“ನಾನು ನಿಮ್ಮೆಲ್ಲರಲ್ಲಿಯೂ ವಿನಂತಿಸುತ್ತೇನೆ. ದಯವಿಟ್ಟು ನಮ್ಮ ಮಹಾನ್ ತಾಯ್ನಾಡಿನ ಪ್ರಜೆಗಳಾಗಿ ಜವಾಬ್ದಾರಿಯುತವಾಗಿ ಮತದಾನ ಮಾಡಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಪ್ರತಿ ಐದು ವರ್ಷಗಳಿಗೊಮ್ಮೆ ನಮ್ಮ ದೇಶಕ್ಕಾಗಿ ಐದು ನಿಮಿಷಗಳನ್ನು ಮೀಸಲಿಡಲು ಸಾಧ್ಯವಾಗುವುದಿಲ್ಲದೇ? ಹೆಮ್ಮೆಯಿಂದ ಮತ ಚಲಾಯಿಸೋಣ. ನನ್ನ ಮತ, ನನ್ನ ಧ್ವನಿ” ಎಂದು ಜಸ್ಟಿಸ್ ಡಿವೈ ಚಂದ್ರಚೂಡ್ ಹೇಳಿದರು.

“ಸರ್ಕಾರವನ್ನು ಚುನಾಯಿಸುವಲ್ಲಿ ನಾಗರಿಕರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅದಕ್ಕಾಗಿಯೇ ಈ ಸರ್ಕಾರವು ಜನರ ಸರ್ಕಾರ, ಜನರಿಂದ ಮತ್ತು ಜನರಿಗಾಗಿ ಎಂದು ಹೇಳಲಾಗುತ್ತದೆ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದರು.

ಇದನ್ನು ಓದಿದ್ದೀರಾ?  ನ್ಯಾಯಾಂಗದಲ್ಲಿ ಮಹಿಳಾ ನೇಮಕಾತಿ | ಕರ್ನಾಟಕದಿಂದ ಸಾಮಾಜಿಕ ಪರಿವರ್ತನೆ: ಸಿಜೆಐ ಚಂದ್ರಚೂಡ್‌

ಮೊದಲ ಬಾರಿಗೆ ಮತದಾರರಾಗಿ ಮತ ಚಲಾಯಿಸಲು ಮತಗಟ್ಟೆಗೆ ಸರತಿ ಸಾಲಿನಲ್ಲಿ ನಿಂತ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. “ನಾನು ಮತ ಚಲಾಯಿಸುವಾಗ ಬೆರಳಿನ ಶಾಯಿಯು ದೇಶಭಕ್ತಿಯ ಪ್ರಚಂಡ ಭಾವನೆಗಳನ್ನು ಮತ್ತು ರಾಷ್ಟ್ರದೊಂದಿಗಿನ ಒಡನಾಟದ ಗುರುತು ನೀಡುತ್ತದೆ” ಎಂದು ಚಂದ್ರಚೂಡ್ ವಿವರಿಸಿದರು.

ನಾನು ನನ್ನ ಜೀವನದಲ್ಲಿ ಒಂದೇ ಒಂದು ಮತವನ್ನು ಕೂಡಾ ಹಾಕದೆ ಕೂತಿಲ್ಲ. ಕೆಲಸಕ್ಕಾಗಿ ಅಲೆದಾಟ ಮಾಡಿದರೂ ಕೂಡಾ ಮತ ಚಲಾಯಿಸುವುದನ್ನು ಎಂದಿಗೂ ತಪ್ಪಿಸಿಲ್ಲ ಎಂದರು.

ಲೋಕಸಭೆ ಚುನಾವಣೆಯು ಏಪ್ರಿಲ್ 19 ರಿಂದ ಜೂನ್ 1, 2024 ರವರೆಗೆ ನಡೆಯಲಿದೆ. ಚುನಾವಣೆಗಳು ಏಳು ಹಂತಗಳಲ್ಲಿ ನಡೆಯಲಿದ್ದು, ಫಲಿತಾಂಶವನ್ನು ಜೂನ್ 4, 2024 ರಂದು ಪ್ರಕಟಿಸಲಾಗುವುದು. ಇನ್ನು 2019ರ ಲೋಕಸಭೆ ಚುನಾವಣೆಗೆ ಹೋಲಿಸಿದಾಗ 2024ರ ಮೊದಲ ಹಂತದ ಚುನಾವಣೆಯಲ್ಲಿ ಶೇಕಡ 61.06ರಷ್ಟು ಮತದಾನವಾಗಿದೆ. 2019ರಲ್ಲಿ ಶೇಕಡ 70.83 ಮತದಾನವಾಗಿದ್ದು, ಅದಕ್ಕಿಂತ ಶೇಕಡ 9.77ರಷ್ಟು ಕಡಿಮೆ ಮತದಾನವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

ತೆಲಂಗಾಣ | ಅಂತರ್ಜಾತಿ ವಿವಾಹದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ತೆಲಂಗಾಣದ...

Download Eedina App Android / iOS

X