ಲೋಕಸಭಾ ಚುನಾವಣೆ ಹಿನ್ನೆಲೆ, ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಿತಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರಿಗೆ ಮತ ನೀಡಿ ಎಂದು ಚಲನಚಿತ್ರ ನಟ ಧ್ರುವ ಸರ್ಜಾ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ”ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಿತಕ್ಕಾಗಿ ಸಚಿವ ರಾಮಲಿಂಗಾರೆಡ್ಡಿ ಅವರ ಸುಪುತ್ರಿ ಸೌಮ್ಯ ರೆಡ್ಡಿ ಅವರಿಗೆ ಮತ ನೀಡಿ. ಅವರ ಕ್ರಮ ಸಂಖ್ಯೆ 3ಕ್ಕೆ ಮತ ಹಾಕಿ ಗೆಲ್ಲಿಸಿ” ಎಂದು ಹೇಳಿದ್ದಾರೆ.
ಇದಕ್ಕೆ ಟ್ವೀಟ್ ಮೂಲಕ ಅಭಿನಂದಿಸಿದ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು, ”ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಿತಕ್ಕಾಗಿ ನನಗೆ ಮತ ನೀಡುವಂತೆ ಕರೆ ನೀಡಿರುವ ಕನ್ನಡ ಚಿತ್ರ ರಂಗದ ನಟ ಧ್ರುವ ಸರ್ಜಾ ಹಾಗೂ ಅವರ ಕುಟುಂಬದವರಿಗೆ ಅನಂತ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಿತಕ್ಕಾಗಿ ನನಗೆ ಮತ ನೀಡುವಂತೆ ಕರೆ ನೀಡಿರುವ ಕನ್ನಡ ಚಿತ್ರ ರಂಗದ ಖ್ಯಾತ ನಟ ಶ್ರೀ ಧ್ರುವ ಸರ್ಜಾ ಹಾಗೂ ಅವರ ಕುಟುಂಬದವರಿಗೆ ಅನಂತ ಧನ್ಯವಾದಗಳು.
ಈ ಗೆಲುವಿನ ಮಹಾ ಪಯಣಕ್ಕೆ ಕ್ಷೇತ್ರದ ಸಮಸ್ತ ಜನತೆಯ ಸಹಕಾರ ಅತ್ಯಗತ್ಯ! #ದಕ್ಷಿಣಕ್ಕೆಸೌಮ್ಯ #SowmyaForSouth #DhruvaSarja #Kannada… pic.twitter.com/Tr4BTPLgHb
— Sowmya | ಸೌಮ್ಯ (@Sowmyareddyr) April 20, 2024
”ಜತೆಗೆ, ಈ ಗೆಲುವಿನ ಮಹಾ ಪಯಣಕ್ಕೆ ಕ್ಷೇತ್ರದ ಸಮಸ್ತ ಜನತೆಯ ಸಹಕಾರ ಅತ್ಯಗತ್ಯ” ಎಂದಿದ್ದಾರೆ.