ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಬೇಸಿಗೆ ಆರಂಭದ ಹಿನ್ನೆಲೆಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು, ಕಳೆದ 25 ದಿನಗಳಿಂದ ಕುಡಿಯುವ ನೀರಿಲ್ಲದೆ ಹಾಗೂ ಗ್ರಾಮದಲ್ಲಿ ಸ್ವಚ್ಚತೆಯನ್ನೇ ಕಾಣದೆ ಗಬ್ಬೆದ್ದು ನಾರುತ್ತಿರುವ ಚರಂಡಿಗಳಿಂದ ಗ್ರಾಮಸ್ಥರು ಸಿಟ್ಟಿಗೆದ್ದಿದ್ದು, ಗ್ರಾಮ ಪಂಚಾಯತಿಗೆ ಜಾನುವಾರುಗಳನ್ನು ಕಟ್ಟಿ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಬೇಜವಾಬ್ದಾರಿ ಆಡಳಿತ ಎದ್ದುಕಾಣುತ್ತಿದ್ದರೂ, ಯಾವ ಒಬ್ಬ ಅಧಿಕಾರಿಯೂ ಕೂಡ ಜನರ ಗೋಳು ಕೇಳುತ್ತಿಲ್ಲ. ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಜನರ ಜೀವನದ ಜೊತೆ ಚಲ್ಲಾಟ ಆಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ ಅಧ್ಯಕ್ಷೆ ಗಂಗಮ್ಮ ಜಂಗಣ್ಣವರ ಅವರು, ಗ್ರಾಮದ ಅಭಿವೃದ್ಧಿ ಕೆಲಸ ಮಾಡಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದು, ಗ್ರಾ.ಪಂ ಅಧ್ಯಕ್ಷರ ಮಾತು ಯಾರು ಯಾವ ಸಿಬ್ಬಂದಿಯೂ ಮಾತು ಕೇಳುವುದಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ ಹಾಗೂ ಗ್ರಾಮದ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ ಅಧ್ಯಕ್ಷರು ಹಾಗೂ ಸದಸ್ಯರು ರಾಜೀನಾಮೆ ನೀಡಬೇಕು ಎಂದು ಸಾರ್ವಜನಿಕರು ಪಟ್ಟು ಹಿಡಿದರು.
ಗ್ರಾಮದಲ್ಲಿ ಚುನಾಯಿತ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಖಾಸಗಿ ವಿಂಡ್ ಕಂಪನಿಯಲ್ಲಿ ಭ್ರಷ್ಟಾಚಾರಕ್ಕೆ ಕೈ ಹಾಕಿದ್ದೇವೆ.ಎನ್.ಓ.ಸಿ. ಕೊಟ್ಟಿಲ್ಲ 13 ಜನ ಜನಪ್ರತಿನಿದಿಗಳು ತಲಾ 25 ಸಾವಿರ ರೂ. ತಗೆದುಕೊಂಡಿದ್ದೇವೆ. ಗ್ರಾಮವನ್ನು ಬೇಕಾಬಿಟ್ಟಿ ಆಟವಾಡಿಸಿ ದುಡ್ಡು ಮಾಡಿದ ಲಂಚಕೋರರು. 2 ದಿನದ ಹಿಂದೆ 1 ಲಕ್ಷ ರೂ. ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ತಂದಿದ್ದೇನೆ ಎಂದು ಬಿಲ್ ಹಾಕಿದ್ದಾರೆ. ಪಂಚಾಯಿತಿಯಲ್ಲಿ ನಯ ಪೈಸೆ ಸಾಮಗ್ರಿ ಇಲ್ಲ. ಅಧ್ಯಕ್ಷೆಗೆ ಬೇಕಾಗಿರುವದು ದುಡ್ಡು. ನಾನು ಗ್ರಾ.ಪಂ ದುರಾಡಳಿತದಿಂದ ಬೇಸತ್ತು ರಾಜೀನಾಮೆ ನೀಡಲು ತಿರ್ಮಾನಿಸಿದ್ದೇನೆ ಎನ್ನುತ್ತಾರೆ ಗ್ರಾ.ಪಂ ಸದಸ್ಯೆ ನಿರ್ಮಲಾ ಆದಿ.
ಗ್ರಾಮ ಪಂಚಾಯತ ಅಧ್ಯಕ್ಷರ ಮಾತು ಯಾವೊಬ್ಬ ಸದಸ್ಯರು ಮಾತು ಕೇಳುವುದಿಲ್ಲ.ನನ್ನ ಅಧ್ಯಕ್ಷ ಅವಧಿಯಲ್ಲಿ ನನ್ನ ಮನೆಯ ಮುಂದೆ ಸಿ.ಸಿ.ರಸ್ತೆ ಮಾಡಿಸಿದಿನಿ.ಹಾಗೂ ಸಂತೋಷ ಕೋರಿ ಅವರ ಮನೆಯ ಹತ್ತಿರ ಸಿ.ಸಿ.ರಸ್ತೆಯ ಕಾಮಗಾರಿ ಮಾಡಿಸಿದ್ದೇನೆ ಎಂದು ಒಪ್ಪಿಕೊಂಡ ಅಧ್ಯಕ್ಷರು ಎನ್ನುತ್ತಾರೆ ಗ್ರಾ.ಪಂ ಅಧ್ಯಕ್ಷೆ ಗಂಗವ್ವ ಜಂಗಣ್ಣವರ.
ಇನ್ನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮ್ ಸುಂದರ್ ಇನಾಮದಾರ ಅವರು, ಗ್ರಾಮದ ಸಮಸ್ಯೆಯನ್ನು ಪರಿಗಣಿಸಿ 2 ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವೆ. ಗ್ರಾ.ಪಂ ಸಮಸ್ಯೆಗಳ ಕುರಿತು ಸಿಇಒ ಅವರ ಗಮನಕ್ಕೆ ತಂದು ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಮುಂದಾಗುತ್ತೇನೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶೇಕಣ್ಣ ಮಾರನಬಸರಿ, ಕುಬೇರಪ್ಪ ಪಲ್ಲೆದ, ಮಲ್ಲಪ್ಪ ಪಲ್ಲೆದ, ಅಶೋಕ ಭಜಂತ್ರಿ, ವೀರಪ್ಪ ಕೋಣಪುರು, ಅನಿಲ್ ತಳವಾರ, ಮಂಜುನಾಥ್ ಭಜಂತ್ರಿ ಸೇರಿದಂತೆ ಗ್ರಾಮಸ್ಥರು ಹಾಗೂ ಮಹಿಳೆಯರು ಹಾಜರಿದ್ದರು.
