ವಿದ್ಯಾರ್ಥಿನಿ ನೇಹಾ ಹಿರೇಮಠರನ್ನು ಚಾಕುವಿನಿಂದ ತಿವಿದು ಕೊಲೆಗೈದಿರುವ ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ರಾಯಚೂರು ತಾಲೂಕ ಬೇಡ ಜಂಗಮ ಸಮಾಜ, ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠರ ಪುತ್ರಿ ಖಾಸಗಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠರನ್ನು ಕಾಲೇಜಿನ ಕ್ಯಾಂಪಸ್‌ನಲ್ಲಿ ಫಯಾಜ್ ಚಾಕುವಿನಿಂದ 9 ಬಾರಿ ಇರಿದು ಹತ್ಯೆಗೈದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ, ಕೊಲೆ ಮಾಡಿದ ನಂತರ ಪರಾರಿಯಾಗಿದ್ದು, ನಂತರ ಪೊಲೀಸರು ಬಂಧಿಸಿದ್ದಾರೆ ಎಂದ ಪ್ರತಿಭಟನಾಕಾರರು,
ನೇಹಾ ಹಿರೇಮಠ ಮೃತಪಟ್ಟಿದ್ದು ಮಾನವ ಸಮಾಜಕ್ಕೆ ಅತ್ಯಂತ ನೋವಿನ ಸಂಗತಿಯಾಗಿದೆ. ಘಟನೆ ಮರುಕಳಿಸದಂತೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ವೀರಯ್ಯಸ್ವಾಮಿ ಪ್ರ.ಕಾರ್ಯದರ್ಶಿ ಶರಣ ಬಸವ ಹಿರೇಮಠ, ಸುಮತಿ ಶಾಸ್ತ್ರೀ, ಎಂ.ಶಾಂತಕುಮಾರ, ವೀರಭದ್ರಯ್ಯ ಸ್ವಾಮಿ, ಸುಲೋಚನಾ, ಸಂಗಯ್ಯ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
