ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ವಿಜಯಪುರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಏಪ್ರಿಲ್ 19ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಕೊನೆಯ ದಿನದವರೆಗೆ ಒಟ್ಟು 21 ಅಭ್ಯರ್ಥಿಗಳಿಂದ 35 ನಾಮಪತ್ರಗಳು ಸಲ್ಲಿಕೆಯಾಗಿವೆ.
ವಿಜಯಪುರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ಟಿ ಭೂಬಾಲನ್ ಪ್ರಕಟಣೆ ನೀಡಿದ್ದು, “ಶನಿವಾರ ಏಪ್ರಿಲ್ 20ರಂದು ಈ ಎಲ್ಲ ನಾಮಪತ್ರಗಳ ಪರೀಶೀಲನೆ ನಡೆದಿದೆ. ಪರಿಶೀಲನೆಯ ಬಳಿಕ ಒಟ್ಟು 21 ಮಂದಿ ಅಭ್ಯರ್ಥಿಗಳಲ್ಲಿ 12 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತಗೊಂಡು 9 ತಿರಸ್ಕೃತಗೊಂಡಿವೆ. ಕ್ರಮಬದ್ಧವಾಗಿ ಸ್ವೀಕೃತಗೊಂಡ 12 ನಾಮಪತ್ರಗಳ ಪೈಕಿ ಇಬ್ಬರು ಮಹಿಳಾ ಅಭ್ಯರ್ಥಿಗಳಾಗಿದ್ದಾರೆ” ಎಂದು ತಿಳಿಸಿದರು.
ಸ್ವೀಕಾರವಾಗಿರುವ ನಾಮಪತ್ರ ಕ್ರಮಬದ್ಧವಾಗಿರುವ ಅಭ್ಯರ್ಥಿಗಳ ವಿವರ: “ಮಲ್ಲು ಹಾದಿಮನಿ (ಬಹುಜನ ಸಮಾಜ ಪಕ್ಷ), ರಮೇಶ ಜಿಗಜಿಣಗಿ (ಭಾರತೀಯ ಜನತಾ ಪಕ್ಷದ) ಹಣಮಂತರಾವ ಆಲಗೂರ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ), ಕುಲಪ್ಪ ಭೀ ಚವ್ಹಾಣ (ಭಾರತೀಯ ಜವಾನ್ ಕಿಸಾನ್ ಪಕ್ಷ) ಗಣಪತಿ ಲಾ ರಾಠೋಡ (ಕರ್ನಾಟಕ ರಾಷ್ಟ್ರ ಸಮಿತಿ), ಜೀತೆಂದ್ರ ಅಶೋಕ ಕಾಂಬಳೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ)(ಎ), ನಾಗಜ್ಯೋತಿ ಬಿ ಎನ್(ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್), ರಾಜಕುಮಾರ ಅಪ್ಪಣ್ಣ ಹೊನ್ನಕಟ್ಟಿ (ರಾಷ್ಟ್ರೀಯ ಸಮಾಜ ಪಕ್ಷ), ರಾಮಜಿ ಹರಿಜನ ಉರ್ಫ್ ಬುದ್ಧಪ್ರಿಯ (ನಕಿ ಭಾರತೀಯ ಏಕತಾ ಪಾರ್ಟಿ), ತಾರಾಬಾಯಿ ಭೋವಿ (ಪಕ್ಷೇತರ), ಬಾಬು ರಾಜೇಂದ್ರ ನಾಯಕ (ಪಕ್ಷೇತರ), ಸಂಗಪ್ಪ ಹುಣಶಿಕಟ್ಟಿ (ಪಕ್ಷೇತರ)ವಾಗಿ ನಾಮಪತ್ರಗಳು ಸಲ್ಲಿಕೆಯಾಗಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಾತ್ಯತೀತ ಪಕ್ಷಕ್ಕೆ ಮತ ಹಾಕುವಂತೆ ಮಾನವ ಬಂಧುತ್ವ ವೇದಿಕೆ ಮನವಿ
“ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಏಪ್ರಿಲ್ 22 ಕೊನೆಯ ದಿನವಾಗಿದ್ದು, ಮೇ 7ರಂದು ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ಮತ್ತು ಜೂನ್ 4ರಂದು ಮತ ಎಣಿಕೆ ಪ್ರಕ್ರಿಯೆಗಳು ಜರುಗಲಿವೆ” ಎಂದು ತಿಳಿಸಿದರು.
