ಉತ್ತರ ಕನ್ನಡದ ದಾಂಡೇಲಿ ಬಳಿ ಬರಿಯಂಪೈಲಿ ಗ್ರಾಮದ ಸನಿಹ ಅಕೋಡಾ ಮಜಿರೆ ಬಳಿ ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿದ ದುರ್ಘಟನೆ ಇಂದು ನಡೆದಿದೆ. ಮೃತರಲ್ಲಿ ನಾಲ್ವರು ಮಕ್ಕಳು ಸೇರಿದ್ದಾರೆ. ಇವರೆಲ್ಲರೂ ಹುಬ್ಬಳ್ಳಿಯಿಂದ ಪ್ರವಾಸಕ್ಕೆಂದು ಆಗಮಿಸಿದ್ದರು.
ಕಾಳಿ ನದಿಯಲ್ಲಿ ಈಜಲು ಇಳಿದಾಗ ಆರು ವರ್ಷದ ಮೊಹಿನ್ ಅಹಮ್ಮದ್ ನೀರಿನ ಸೆಳವಿಗೆ ಸಿಕ್ಕಿದ್ದಾನೆ. ಆತನನ್ನು ರಕ್ಷಿಸಲು ಅಲ್ಪಿಯಾ ಅಹಮ್ಮದ್ ( 10) , ಇಫ್ರಾ ಅಹಮ್ಮದ್( 15), ಅಬೀದ್ ಅಹಮ್ಮದ್ (12) ನೀರಲ್ಲಿ ಮುಳುಗಿದರು. ಇವರ ರಕ್ಷಣೆ ಇಳಿದ ತಂದೆ ನಜೀರ್ ಅಹಮ್ಮದ್ (40) , ನಜೀರ್ ಸಹೋದರಿ ರೇಶ್ಮಾ ಉನ್ನೀಸಾ ( 38) ಸಹ ನದಿಯಲ್ಲಿ ಮುಳುಗಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ
ಇವರ ಜೊತೆಗಿದ್ದ ಇಬ್ಬರು ಸುರಕ್ಷಿತವಾಗಿದ್ದಾರೆ. ಇವರು ನದಿಯ ದಡದಲ್ಲಿದ್ದರು ಎನ್ನಲಾಗಿದೆ. ನದಿಯಲ್ಲಿ ಮುಳುಗಿದ ಎಲ್ಲರನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ದಾಂಡೇಲಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ನಿಂದ ಹೊರಟಿದ್ದರು ;
ನಜೀರ್ ಹಾಗೂ ಅವರ ಸಹೋದರಿ ರೇಶ್ಮಾ ಬೆಂಗಳೂರುನಿಂದ ಹುಬ್ಬಳ್ಳಿಯ ಸಂಬಂಧಿಕರ ಮನೆಗೆ ಭೇಟಿ ನೀಡಿ, ಅಲ್ಲಿಂದ ದಾಂಡೇಲಿ ಮಾರ್ಗವಾಗಿ ಕಾರವಾರಕ್ಕೆ ಬರುವವರಿದ್ದರು. ಮಾರ್ಗಮಧ್ಯೆ ಹುಬ್ಬಳ್ಳಿ ಸಂಬಂಧಿಕರ ಮನೆಗೆ ನಜೀರ್ ಅಹಮ್ಮದ್ ಹೋಗಿದ್ದರು. ಹುಬ್ಬಳ್ಳಿ ಯಿಂದ ಕಾರವಾರಕ್ಕೆ ಬರುವವರಿದ್ದರು. ಮಾರ್ಗಮಧ್ಯೆ ಬಿರಯಂಪಯಲಿ ಗ್ರಾಮ ಅಕೋಡಾ ಬಳಿ ಕಾಳಿ ನದಿ ನೋಡಲು ಇಳಿದಿದ್ದಾರೆ. ಇದು ಅತ್ಯಂತ ದುರ್ಗಮ ಪ್ರದೇಶ. ಇಲ್ಲಿ ನದಿಯಲ್ಲಿ ಈಜಲು ಯಾರೂ ಹೋಗದ ಸ್ಥಳವೆಂದು ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದಾರೆ.
